Tuesday, August 3, 2021
spot_img
Homeಸ್ಥಳೀಯ ಸುದ್ದಿಜು. 16ರಂದು ಪರ್ಪಲೆಯಲ್ಲಿ ವೃಕ್ಷ ಜಾಗರಣ ಕಾರ್ಯಕ್ರಮ

ಜು. 16ರಂದು ಪರ್ಪಲೆಯಲ್ಲಿ ವೃಕ್ಷ ಜಾಗರಣ ಕಾರ್ಯಕ್ರಮ

ಕಾರ್ಕಳ : ಹಿಂದೂ ಜಾಗರಣ ವೇದಿಕೆಯು ಪರಿಸರ ರಕ್ಷಣೆ ಪರಿಕಲ್ಪನೆಯಲ್ಲಿ ಕಾರ್ಕಳ ತಾಲೂಕಿನ 32 ಘಟಕಗಳಲ್ಲಿ ವೃಕ್ಷ ಜಾಗರಣ ಕಾರ್ಯಕ್ರಮ ಹಮ್ಮಿಕೊಂಡಿದೆ. ಜು. 16ರಂದು ಶ್ರೀ ಕ್ಷೇತ್ರ ಪರ್ಪಲೆಗಿರಿಯಲ್ಲಿ ಕಲ್ಕುಡ ದೈವಸ್ಥಾನ ಸನ್ನಿಧಿಯಲ್ಲಿ ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಹಿರಿಯ ಮಾರ್ಗದರ್ಶಕ, ಗಾಯತ್ರಿ ಎಕ್ಸ್ ಪೋರ್ಟ್ಸ್‌ ಮಾಲಕ ಬೋಳ ಪ್ರಭಾಕರ್‌ ಕಾಮತ್‌, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್, ಅತ್ತೂರು ನಿಟ್ಟೆ ಬಲಿಪಗುತ್ತು ವಿಠ್ಠಲ್ ಶೆಟ್ಟಿ, ಉದ್ಯಮಿಗಳಾದ ಸುರೇಶ್ ಶೆಟ್ಟಿ ಗುರ್ಮೆ, ಮಹೇಶ್ ಶೆಟ್ಟಿ ಕುಡ್ಪುಲಾಜೆ ತೆಳ್ಳಾರು, ರವೀಂದ್ರ ಶೆಟ್ಟಿ ಬಜಗೋಳಿ, ಉದಯ ಕುಮಾರ್ ಶೆಟ್ಟಿ ಮುನಿಯಾಲು, ಉದಯ ಎಸ್. ಕೋಟ್ಯಾನ್,‌ ಕಾರ್ಕಳ‌ ಲಯನ್ಸ್ ಕ್ಲಬ್‌ ಅಧ್ಯಕ್ಷ ಬಿ. ರಾಜೇಶ್ ಶೆಣೈ, ಕಾಳಿಕಾಂಬ ದೇವಸ್ಥಾನದ ಆಡಳಿತ ಮೊಕ್ತೇಸರ ರಾಮಚಂದ್ರ ಆಚಾರ್ಯ, ಪದ್ಮ ಎಲೆಕ್ಟ್ರೀಕಲ್‌ನ ಅರುಣ್ ಸೇನಾ, ಅರುಣ್‌ ನಿಟ್ಟೆ ಭಾಗವಹಿಸಲಿರುವರು ಎಂದು ಹಿಂದೂ ಜಾಗರಣ ವೇದಿಕೆ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ನಾರಾವಿ ಪ್ರಕಟನೆಯಲ್ಲಿ ತಿಳಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!