Thursday, August 18, 2022
spot_img
Homeಸ್ಥಳೀಯ ಸುದ್ದಿಕಾರ್ಕಳಕ್ಕೆ ನರ್ಸಿಂಗ್‌ ಕಾಲೇಜು ಮಂಜೂರು -ಆರೋಗ್ಯ ಸಚಿವ ಡಾ. ಸುಧಾಕರ್‌

ಕಾರ್ಕಳಕ್ಕೆ ನರ್ಸಿಂಗ್‌ ಕಾಲೇಜು ಮಂಜೂರು -ಆರೋಗ್ಯ ಸಚಿವ ಡಾ. ಸುಧಾಕರ್‌

ಕಾರ್ಕಳ : ಕಾರ್ಕಳ ತಾಲೂಕಿಗೆ ನರ್ಸಿಂಗ್‌ ಕಾಲೇಜು ಮಂಜೂರು ಮಾಡಲಾಗುವುದು. ತಾಲೂಕಿನ‌ ಸಮುದಾಯ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಯೋಚನೆಯೂ ಸರಕಾರದ ಮುಂದಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಹೇಳಿದರು.
ಅವರು ಜು. 14ರಂದು ಬೆಳ್ಮಣ್‌ನ ಶ್ರೀ ಕೃಷ್ಣ ಸಭಾಭವನದಲ್ಲಿ ನಡೆದ ವಾತ್ಸಲ್ಯ ಮಕ್ಕಳ ಬೃಹತ್‌ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ, ಬಳಿಕ ಮಾತನಾಡಿದರು.
ಕೊರೊನಾ ಮೂರನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ವಾತ್ಸಲ್ಯ ಹೆಸರಿನಲ್ಲಿ ಕಾರ್ಕಳದಲ್ಲಿ ವಿನೂತನ ಯೋಜನೆ ಪ್ರಾರಂಭವಾಗಿದೆ. ಗೃಹ ಸಚಿವರು ವಾತ್ಯಲ್ಯ ಯೋಜನೆಯನ್ನು ಹಾವೇರಿಯಲ್ಲೂ ಅನಷ್ಠಾನಗೊಳಿಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ವಿಸ್ತರಿಸುವ ಯೋಚನೆಯಿದೆ ಎಂದು ಡಾ. ಸುಧಾಕರ್‌ ತಿಳಿಸಿದರು.
ನೆರೆಯ ಕೇರಳದಲ್ಲಿ ಕೊರೊನಾ ಎರಡನೇ ಅಲೆ ತಗ್ಗಿಲ್ಲ. ಆದ್ದರಿಂದ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ನಿಗಾ ವಹಿಸಬೇಕಾಗಿರುವುದು ಅತ್ಯಗತ್ಯ. ಉಡುಪಿ ಜಿಲ್ಲೆಯಲ್ಲಿ 40%ರಷ್ಟು ಮಂದಿ ಈಗಾಗಲೇ ಲಸಿಕೆ ಪಡೆದಿದ್ದಾರೆ. ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಪಡೆದ ಬಳಿಕ ಕೊರೊನಾ ನಿಯಂತ್ರಣಕ್ಕೆ ಬರುವ ವಿಶ್ವಾಸವಿದೆ ಎಂದವರು ಅಭಿಪ್ರಾಯಪಟ್ಟರು.

ಸಮರ್ಥ ನಿರ್ವಹಣೆ-ಸುನಿಲ್‌ ಕುಮಾರ್
ಕೊರೊನಾ ಮೂರನೇ ಅಲೆ ಮಕ್ಕಳನ್ನು ಬಾಧಿಸಬಹುದು ಎಂಬ ತಜ್ಞರ ವರದಿ ಮೇರೆಗೆ ವಾತ್ಸಲ್ಯ ಹೆಸರಿನಲ್ಲಿ ತಾಲೂಕಿನಾದ್ಯಂತ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಸಂಘ-ಸಂಸ್ಥೆಗಳ, ಸ್ವಯಂ ಸೇವಕರ, ದಾನಿಗಳ ಸಹಕಾರದಿಂದಾಗಿ ಕಾರ್ಕಳದಲ್ಲಿ ಕೊರೊನಾವನ್ನು ಸಮರ್ಥವಾಗಿ ನಿಭಾಯಿಸಲಾಗಿದೆ. ಆಕ್ಸಿಮೀಟರ್‌ ಅನ್ನು ಗ್ರಾಮ ಸಮಿತಿ‌ ಮೂಲಕ ಪಾಸಿಟಿವ್‌ ಕಂಡು ಬಂದ ಮನೆಗೆ ವಿತರಿಸಲಾಗಿದ್ದು, ಇದರಿಂದ ನೇರವಾಗಿ ಐಸಿಯುಗೆ ದಾಖಲಾಗುವ ಪ್ರಮೇಯ ಬಹುತೇಕ ತಪ್ಪಿಸಲಾಗಿದೆ. ಸುಮಾರು 40 ಸಾವಿರ ಮಕ್ಕಳನ್ನು ವಾತ್ಸಲ್ಯ ಕಾರ್ಯಕ್ರಮದಲ್ಲಿ ಪರೀಕ್ಷಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದ ಶಾಸಕರು ವಾತ್ಸಲ್ಯ ದಲ್ಲಿ ಆಸ್ಪತ್ರೆಗೆ ದಾಖಲಾಗುವ ಮಕ್ಕಳಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ಪಡೆಯುವಂತಾಗಬೇಕು. ಈ ನಿಟ್ಟಿನಲ್ಲಿ ಸರಕಾರ ಸೂಕ್ತ ಯೋಜನೆ ರೂಪಿಸಬೇಕೆಂದರು.
ಕೃಷ್ಣ ಸಭಾ ಭವನದಲ್ಲಿ ಶ್ರೀ ಕೃಷ್ಣಾನಂದ ಶೆಟ್ಟಿ ( ತಾಲೂಕು ಆರೋಗ್ಯಾಧಿಕಾರಿ ) ರವರ ನೇತೃತ್ವದಲ್ಲಿ “ವಾತ್ಸಲ್ಯ” ಎಂಬ ಹೆಸರಿನಲ್ಲಿ ಕೋವಿಡ್ ಮೂರನೇ ಅಲೆ ಮನ್ನೆಚ್ಚರಿಕೆಯಾಗಿ 15 ವರ್ಷ ಕೆಳಗಿನ ಮಕ್ಕಳ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ನಡೆದಿರುತ್ತದೆ.
ರಾಜ್ಯ ಗೇರು ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಉಡುಪಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್‌ ಭಟ್‌, ಜಿಲ್ಲಾ ಆರೋಗ್ಯಾಧಿಕಾರಿ ನಾಗಭೂಷಣ್‌ ಉಡುಪ, ತಹಶೀಲ್ದಾರ್‌ ಪ್ರಕಾಶ್‌ ಎಸ್. ಮರಬಳ್ಳಿ, ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ, ಮಕ್ಕಳ ತಜ್ಞ ಡಾ. ಸುರೇಶ್‌ ಕುಡ್ವ, ಜಿ.ಪಂ. ಬೆಳ್ಮಣ್‌ ಗ್ರಾ.ಪಂ. ಅ‍ಧ್ಯಕ್ಷ ಜನಾರ್ದನ ತಂತ್ರಿ, ಮಾಜಿ ಸದಸ್ಯರಾದ ಸುಮಿತ್ ಶೆಟ್ಟಿ ಕೌಡೂರು,‌ ಉದಯ ಎಸ್.‌ ಕೋಟ್ಯಾನ್‌, ಕಾರ್ಕಳ ತಾ.ಪಂ. ಇಒ ಗುರುದತ್ತ್‌, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್‌ ಹೆಗ್ಡೆ, ಪ್ರಧಾನ ಕಾರ್ಯದರ್ಶಿಗಳಾದ ನವೀನ್‌ ನಾಯಕ್‌, ಜಯರಾಮ ಸಾಲ್ಯಾನ್‌, ತಾ.ಪಂ. ಮಾಜಿ ಸದಸ್ಯೆ ಆಶಾ ದೇವೆಂದ್ರ ಶೆಟ್ಟಿ, ಉದ್ಯಮಿ ಎಸ್.ಕೆ. ಸಾಲ್ಯಾನ್‌ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿ.ಪಂ. ಮಾಜಿ ಸದಸ್ಯೆ ರೇಷ್ಮಾ ಉದಯ್ ಕುಮಾರ್ ಶೆಟ್ಟಿ ಸ್ವಾಗತಿಸಿ, ರಘುವೀರ್‌ ಶೆಣೈ ಮುಂಡ್ಕೂರು ನಿರೂಪಿಸಿ, ಶಂಕರ್ ಕುಂದರ್ ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!