Saturday, December 4, 2021
spot_img
Homeಸ್ಥಳೀಯ ಸುದ್ದಿಛತ್ರಪತಿ ಫೌಂಡೇಶನ್ ಟ್ರಸ್ಟ್ ವತಿಯಿಂದ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ 60 ಸಾವಿರ ರೂ. ಮೌಲ್ಯದ...

ಛತ್ರಪತಿ ಫೌಂಡೇಶನ್ ಟ್ರಸ್ಟ್ ವತಿಯಿಂದ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ 60 ಸಾವಿರ ರೂ. ಮೌಲ್ಯದ ವಿವಿಧ ಕೊಡುಗೆ

ಕಾರ್ಕಳ : ಜೀರ್ಣೋದ್ಧಾರಗೊಳ್ಳುತ್ತಿರುವ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಛತ್ರಪತಿ ಫೌಂಡೇಶನ್ ಟ್ರಸ್ಟ್ ವತಿಯಿಂದ 60 ಸಾವಿರ‌ ರೂ. ಮೌಲ್ಯದ ಇನ್ವರ್ಟರ್, ಕಾಣಿಕೆ ಹುಂಡಿ ಹಾಗೂ ಗಾಜಿನ ವಿನ್ಯಾಸದ ಶಿವಾಜಿ ಮಹಾರಾಜರ ಭಾವಚಿತ್ರವನ್ನು ಕೊಡುಗೆ ನೀಡಲಾಯಿತು. ನಾರಾಯಣ ಭಟ್ ರೆಂಜಾಳ, ಗಂಗರಾಜು ಹನುಮಯ್ಯ, ಹರೀಶ್ ರಾವ್, ಟ್ರಸ್ಟಿನ ನಿರ್ದೇಶಕಿ ಆಶಾ, ದೇವಳದ ಮೊಕ್ತೇಸರರು ಹಾಗೂ ಭಕ್ತಾಭಿಮಾನಿಗಳು ಈ ಸಂದರ್ಭ ಉಪಸ್ಥಿತರಿದ್ದರು. ದೇಗುಲದ ಆಡಳಿತ ಮೊಕ್ತೇಸರ ಗಿರೀಶ್ ರಾವ್ ಕೊಡುಗೆ ಹಸ್ತಾಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಸನ್ನ ರಾವ್ ಸ್ವಾಗತಿಸಿ, ಉಮೇಶ್ ರಾವ್ ಜಾದವ್ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!