Tuesday, December 7, 2021
spot_img
Homeಸ್ಥಳೀಯ ಸುದ್ದಿಯೋಜನಾ ಪ್ರಾಧಿಕಾರದಿಂದಾಗುವ ಸಮಸ್ಯೆ ಬಗೆಹರಿಸುವಂತೆ ಮನವಿ

ಯೋಜನಾ ಪ್ರಾಧಿಕಾರದಿಂದಾಗುವ ಸಮಸ್ಯೆ ಬಗೆಹರಿಸುವಂತೆ ಮನವಿ

ಪ್ರಾಧಿಕಾರದಿಂದಾಗುವ ತೊಡಕು ಶೀಘ್ರ ನಿವಾರಣೆ- ಶಾಸಕರ ಭರವಸೆ

ಕಾರ್ಕಳ : ಪುರಸಭಾ ವ್ಯಾಪ್ತಿಯಲ್ಲಿ ಭೂಪರಿವರ್ತಿತ ಜಾಗಕ್ಕೆ ಸಂಬಂಧಿಸಿದಂತೆ ಯೋಜನಾ ಪ್ರಾಧಿಕಾರದ ನಿಯಮದಿಂದಾಗಿ ಖಾತಾ ಪಡೆಯಲು ಸಾಧ್ಯವಾಗುತ್ತಿಲ್ಲ. ಸೈಟ್‌ಗಳಾಗಿ ಪರಿವರ್ತಿಸಿದ ಜಮೀನುಗಳಿಗೆ ಪುರಸಭೆ ಖಾತಾ ನೀಡದ ಪರಿಣಾಮ ಮನೆ ಕಟ್ಟಲು, ಸಾಲ ಪಡೆಯಲು, ಜಾಗ ಮಾರಾಟ ಮಾಡಲು ಸಮಸ್ಯೆಯಾಗಿದೆ. ಸಾರ್ವಜನಿಕರಿಗೆ ಇದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಪ್ರಾಧಿಕಾರದಿಂದಾಗುವ ತೊಡಕನ್ನು ನಿವಾರಿಸುವಂತೆ ನಿಯೋಗವೊಂದು ನಗರಾಭಿವೃದ್ಧಿ ಸಚಿವರಿಗೆ ಶಾಸಕ ಸುನಿಲ್‌ ಕುಮಾರ್‌ ಅವರ ಮೂಲಕ ಮನವಿ ಸಲ್ಲಿಸಿದರು. ಜು. 12ರಂದು ಶಾಸಕರ ಕಚೇರಿಯಲ್ಲಿ ಶಾಸಕರನ್ನು ಭೇಟಿ ಮಾಡಿದ ನಿಯೋಗ ಪ್ರಾಧಿಕಾರದ ನಿಯಮದಿಂದಾಗುವ ತೊಂದರೆಯನ್ನು ವಿವರಿಸಿದರು. ಈ ವೇಳೆ ಮಾತನಾಡಿದ ಶಾಸಕರು, ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಅತಿ ‍ಶೀಘ್ರವಾಗಿ ಪರಿಹರಿಸುವುದಾಗಿ ಭರವಸೆ ನೀಡಿದರು. ವಕೀಲರಾದ ಸೂರಜ್‌ ಜೈನ್‌, ಪದ್ಮಪ್ರಸಾದ್‌ ಜೈನ್‌, ವಿಜಯರಾಜ್‌ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಸುಬ್ರಹ್ಮಣ್ಯ ಭಟ್‌ ರೆಂಜಾಳ, ಸುರೇಶ್‌ ಭಟ್‌, ಫೆಲಿಕ್ಸ್‌, ಚಂದ್ರಹಾಸ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!