Thursday, August 5, 2021
spot_img
Homeಸ್ಥಳೀಯ ಸುದ್ದಿದೇಶದ್ರೋಹಿಗಳ ವಿರುದ್ಧ ನಿರಂತರ ಸಮರ- ಪೊಲೀಸರಿಗೆ ತೊಂದರೆಯಾದಲ್ಲಿ ಹೋರಾಟಕ್ಕೂ ಸಿದ್ಧ- ಗುರುಪ್ರಸಾದ್‌ ನಾರಾವಿ

ದೇಶದ್ರೋಹಿಗಳ ವಿರುದ್ಧ ನಿರಂತರ ಸಮರ- ಪೊಲೀಸರಿಗೆ ತೊಂದರೆಯಾದಲ್ಲಿ ಹೋರಾಟಕ್ಕೂ ಸಿದ್ಧ- ಗುರುಪ್ರಸಾದ್‌ ನಾರಾವಿ

ಕಾರ್ಕಳ : ಭಾರತೀಯ ಸೈನ್ಯದ ಕುರಿತು ಅವಹೇಳನಕಾರಿಯಾಗಿ ಪೇಸ್ಬುಕ್ ಬರಹ ಪೋಸ್ಟ್ ಮಾಡಿದ್ದಾತನ ವಿರುದ್ಧ ಕ್ರಮಕೈಗೊಳ್ಳುವಂತೆ ಹಿಂದೂ ಜಾಗರಣ ವೇದಿಕೆಯು ಕಳೆದ ವರ್ಷ ಆಗಸ್ಟ್‌ 31ರಂದು ಕಾರ್ಕಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿತ್ತು. ದೂರು ದಾಖಲಾಗುತ್ತಿದ್ದಂತೆಯೇ ಆತ ತನ್ನ ಮೊಬೈಲ್ ಸ್ವಿಚ್‌ ಆಫ್‌ ಮಾಡಿ ಪರಾರಿಯಾಗಿದ್ದ. ಇದರಿಂದ ಪೊಲೀಸ್‌ ವಿಚಾರಣೆಗೆ ತೊಡಕಾಗಿತ್ತು. ನಂತರದ ದಿನಗಳಲ್ಲಿ ಪೊಲೀಸರು ಆತನನ್ನು ಬಂಧಿಸಿ ಕಾರ್ಕಳಕ್ಕೆ ಕರೆತಂದಿದ್ದರು. ಪೊಲೀಸರು ಆತನಿಗೆ ಹಲ್ಲೆ ನಡೆಸಿರುತ್ತಾರೆ ಎಂದು ಆಪಾದಿಸಿ, ಕಾಂಗ್ರೆಸ್‌ನ ಕೆಲವರು ಪೊಲೀಸರಿಗೆ ತೊಂದರೆ ಮಾಡುವ ನಿಟ್ಟಿನಲ್ಲಿ ಮಗ್ನರಾಗಿದ್ದಾರೆ. ಪೊಲೀಸರಿಗೆ ಅನ್ಯಾಯವಾದಲ್ಲಿ ಹಿಂದೂ ಜಾಗರಣ ವೇದಿಗೆ ಹೋರಾಟ ನಡೆಸಲು ಸಿದ್ಧ ಎಂದು ಕಾರ್ಕಳ ಹಿಂದೂ ಜಾಗರಣ ವೇದಿಕೆ ಪ್ರಧಾನ ಕಾರ್ಯರ್ಶಿ ಗುರುಪ್ರಸಾದ್‌ ನಾರಾವಿ ತಿಳಿಸಿದ್ದಾರೆ.

ಕಾರ್ಕಳ ಪೊಲೀಸರ ಹಿರಿಮೆ-ಗರಿಮೆಯನ್ನು ಹಾಳು ಮಾಡಲು ಯತ್ನಿಸುತ್ತಿರುವವರ ಮುಖವಾಡ ಕಳಚಿ ಬೀಳಲಿದೆ. ಕಾರ್ಕಳ ಪೊಲೀಸರ ಗೌರವವನ್ನು ಕಾಪಾಡಲು ಹಿಂದೂ ಜಾಗರಣ ವೇದಿಕೆ ಯಾವ ತ್ಯಾಗಕ್ಕೂ ಸಿದ್ಧವಿದೆ ಎಂದು ಗುರುಪ್ರಸಾದ್‌ ತಿಳಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!