Tuesday, December 7, 2021
spot_img
Homeಸ್ಥಳೀಯ ಸುದ್ದಿಕಾರ್ಕಳ ಬಂಡಿಮಠದಲ್ಲಿ ಕಾಂಗ್ರೆಸ್‌ ಪ್ರತಿಭಟನೆ- ಆರೋಪ ಸಾಬೀತಾದಲ್ಲಿ ಪೊಲೀಸರಿಗೆ ಸಂಪೂರ್ಣ ಸಹಕಾರ

ಕಾರ್ಕಳ ಬಂಡಿಮಠದಲ್ಲಿ ಕಾಂಗ್ರೆಸ್‌ ಪ್ರತಿಭಟನೆ- ಆರೋಪ ಸಾಬೀತಾದಲ್ಲಿ ಪೊಲೀಸರಿಗೆ ಸಂಪೂರ್ಣ ಸಹಕಾರ

ಕಾರ್ಕಳ : ರಾಧಾಕೃಷ್ಣ ನಾಯಕ್ ಫೇಸ್ಬುಕ್ ಅಕೌಂಟ್ ಬಗ್ಗೆ ಪೊಲೀಸ್‌ ಇಲಾಖೆ ತನಿಖೆ ನಡೆಸಿ ನಕಲಿ ಖಾತೆಯೇ ಎಂಬುದನ್ನು ದೃಢಪಡಿಸಬೇಕು. ಭಾರತೀಯ ಸೈನ್ಯದ ಕುರಿತು ರಾಧಾಕೃಷ್ಣರೇ ಪೋಸ್ಟ್‌ ಹಾಕಿರುವುದು ಸಾಬೀತಾದಲ್ಲಿ ಆತನನ್ನು ಪಕ್ಷದಿಂದ ಉಚ್ಚಾಟನೆ ಮಾಡಿ, ಪೊಲೀಸರಿಗೆ ಬೆಂಬಲ ನೀಡುತ್ತೇವೆ ಎಂದು ಕಾರ್ಕಳ ಪುರಸಭೆ ಸದಸ್ಯ ಶುಭದ ರಾವ್‌ ಹೇಳಿದರು.
ಅವರು ಶನಿವಾರ ಕಾರ್ಕಳ ಬಂಡಿಮಠದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ರಾಧಾಕೃಷ್ಣ ನಾಯಕ್ ವಿರುದ್ಧ ಎಲ್ಲಾದರೂ ದೇಶದ್ರೋಹದ ಪ್ರಕರಣ ದಾಖಲಾಗಿದೆಯೇ ? ಎಂಬುದನ್ನು ಪೊಲೀಸರು ಸ್ಪಷ್ಟಪಡಿಸಬೇಕು. ಕಾರ್ಕಳ ಶಾಸಕರು ತಮ್ಮ ಕ್ಷೇತ್ರದ ಒಬ್ಬ ಹಿಂದೂ ವ್ಯಕ್ತಿಯ ಫೇಸ್ಬುಕ್ ಖಾತೆ ಅಸಲಿಯೋ ನಕಲಿಯೋ ಎಂದು ತಿಳಿಯದೇ ಏಕಾಏಕಿಯಾಗಿ ಆತನಿಗೆ ದೇಶದ್ರೋಹದ ಪಟ್ಟ ಕಟ್ಟಿರುವುದು ಸರಿಯಲ್ಲ ಎಂದರು.

ಕೇಂದ್ರ, ರಾಜ್ಯ ಸರಕಾರ, ಕಾರ್ಕಳ ಶಾಸಕರ ವಿರುದ್ಧ ಬರೆಯುತ್ತಾರೆ ಎಂಬ ಕಾರಣಕ್ಕಾಗಿ ಬಿಜೆಪಿ ಪ್ರೇರಿತ ಕಿಡಿಗೇಡಿಗಳು ಈ ರೀತಿ ಹೇಳಿಕೆ, ಪೋಸ್ಟ್‌ಗಳನ್ನು ಹರಿಯಬಿಡುತ್ತಾರೆ. ರಾಧಾಕೃಷ್ಣ ಅವರ ಮೇಲೆ ಮತ್ತೆ ಕೇಸು ದಾಖಲಾಗಿದೆ. ಠಾಣಾಧಿಕಾರಿಯವರನ್ನು ತಳ್ಳಿದ್ದಾರೆ ಅಂತ ಇದೆ. ತಳ್ಳಿದ್ದು ಹೌದಾದರೆ ಆಗಲೇ ಕೇಸು ದಾಖಲಿಸಿ ಕೋರ್ಟಿಗೆ ಹಾಜರುಪಡಿಸಬಹುದಿತ್ತಲ್ವಾ ? ಹಲ್ಲೆ ನಡೆಸಿಲ್ಲ ಎಂದಾದರೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸರ್ಟಿಫಿಕೇಟ್ ಪಡೆಯುವ ಉದ್ದೇಶವೇನು ಎಂದು ಶುಭದ ಪ್ರಶ್ನಿಸಿದರು.

ಆತನದೇ ಕೃತ್ಯವಾಗಿದ್ದರೆ ಕಾಂಗ್ರೆಸ್‌ ಬೆಂಬಲಿಸುವುದಿಲ್ಲ – ಮಂಜುನಾಥ ಪೂಜಾರಿ
ಪೊಲೀಸರ ಮೇಲೆ ಒತ್ತಡ ಹೇರಿ ಅಮಾಯಕರಿಗೆ ದೇಶದ್ರೋಹದ ಪಟ್ಟ ಕಟ್ಟಿ ತೊಂದರೆ ನೀಡಲಾಗುತ್ತಿದೆ. ಕಾರ್ಕಳದಲ್ಲಿ ಮೂರು ಬಾರಿ ಶಾಸಕರಾದವರಿಗೆ ಆತನ ಬಗ್ಗೆ ಸಂಪೂರ್ಣ ಮಾಹಿತಿ ಇರುವುದಿಲ್ಲವೇ ? ಹೆಬ್ರಿ ಮತ್ತು ಕಾರ್ಕಳ ಕಾಂಗ್ರೆಸ್ ಪಕ್ಷ ಕೇಳಿಕೊಳ್ಳುವುದೇನೆಂದರೆ ಪ್ರಕರಣವನ್ನು ಸೂಕ್ತ ಅಧಿಕಾರಿಗಳಿಂದ ತನಿಖೆ ನಡೆಸಬೇಕು. ಒಂದು ವೇಳೆ ಅವನು ಕೃತ್ಯ ನಡೆಸಿರುವುದು ನಿಜವಾದರೆ ಕಾಂಗ್ರೆಸ್ ಪಕ್ಷ ಆತನಿಗೆ ಸಹಕಾರ ನೀಡುವುದಿಲ್ಲ ಎಂದು ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ ಪೂಜಾರಿ ಹೇಳಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ದೀಪಕ್ ಕೋಟ್ಯಾನ್ ಇನ್ನಾ, ಜಿಲ್ಲಾ ಕಾಂಗ್ರೆಸ್‌ ಮುಖಂಡ ಕಿಶನ್ ಹೆಗ್ಡೆ ಕೊಳ್ಕೆಬೈಲು, ಉಡುಪಿ ನಗರ ಸಭೆ ಸದಸ್ಯ ರಮೇಶ್ ಕಾಂಚನ್, ಕಾಂಗ್ರೆಸ್‌ನ ಪ್ರಮುಖರಾದ ಹರೀಶ್ ಕಿಣಿ, ಜಿಲ್ಲಾ ವಕ್ತಾರ ಬಿಪಿನ್‌ಚಂದ್ರ ಪಾಲ್‌, ಪುರಸಭೆ ಸದಸ್ಯರು, ಮಾಜಿ ಸದಸ್ಯರು, ಕಾರ್ಯಕರ್ತರು ಪ್ರತಿಭಟನೆಯಲ್ಲ ಪಾಲ್ಗೊಂಡರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!