Saturday, December 4, 2021
spot_img
Homeಸ್ಥಳೀಯ ಸುದ್ದಿಸಿದ್ದರಾಮಯ್ಯ ನಿಲುವು ಖಂಡನೀಯ ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಕಾರ್ಯವಾಗುತ್ತಿದೆ- ನವೀನ್‌ ನಾಯಕ್‌ ಆರೋಪ

ಸಿದ್ದರಾಮಯ್ಯ ನಿಲುವು ಖಂಡನೀಯ ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಕಾರ್ಯವಾಗುತ್ತಿದೆ- ನವೀನ್‌ ನಾಯಕ್‌ ಆರೋಪ

ಕಾರ್ಕಳ : ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ ದೇಶದ ಗಡಿಭಾಗದಲ್ಲಿ ದೇಶ ರಕ್ಷಣೆಗಾಗಿ ಹಗಲಿರುಳು ಶ್ರಮಿಸುವ ಹೆಮ್ಮೆಯ ಸೈನಿಕರ ಸಾವನ್ನು ಬಯಸುವ ಕ್ರೂರ ಮನಸ್ಥಿತಿಯ ಕಾಂಗ್ರೆಸ್ ಕಾರ್ಯಕರ್ತನ ಬೆಂಬಲಕ್ಕೆ ನಿಂತಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ನಿಲುವನ್ನು ಕಾರ್ಕಳ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಕಾರ್ಕಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ್‌ ನಾಯಕ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ದೀರ್ಘಕಾಲದಿಂದ ಬೇರೆ ಬೇರೆ ಪಕ್ಷಗಳಲ್ಲಿ ರಾಜಕೀಯ ಮಾಡಿಕೊಂಡು ಬಂದಿರುವ ಹಿರಿಯ ಮುತ್ಸದ್ದಿ ಎನಿಸಿಕೊಂಡಿರುವ ಸಿದ್ದರಾಮಯ್ಯನವರು ದೇಶದ್ರೋಹಿಯ ಪರವಾಗಿ ನಿಂತಿರುವುದು ಅವರ ನಿಲುವು ಏನೆಂಬುದನ್ನ ಎತ್ತಿ ತೋರಿಸುತ್ತಿದೆ.
ದೇಶ ದ್ರೋಹಿ ಹೇಳಿಕೆ ನೀಡುವವರನ್ನು ನಿಮ್ಮ ಜೊತೆಗಿಟ್ಟುಕೊಂಡು ರಾಜಕೀಯ ಮಾಡುತ್ತಿರುವುದು ಇದೆ ಮೊದಲೇನಲ್ಲ. ಕೆಜೆ ಹಳ್ಳಿ, ಮಂಗಳೂರು ಗಲಭೆಗೆ ಬೆಂಬಲ, ಹಿಂದೂ ಕಾರ್ಯಕರ್ತರ ಕೊಲೆ ಸಮರ್ಥನೆ ಮಾಡಿರುವುದು ಮಾತ್ರವಲ್ಲದೇ ನಿಮ್ಮ ಆಡಳಿತಾವಧಿಯಲ್ಲಿ ಎಸ್.ಡಿ.ಪಿ.ಐ. ಮತ್ತು ಪಿ.ಎಫ್.ಐ. ಸಂಘಟನೆಗಳ ದೇಶದ್ರೋಹಿ ಕೃತ್ಯಗಳ ಪ್ರಕರಣಗಳನ್ನು ಹಿಂತೆಗೆತ, ವಿಧಾನ ಸಭೆಯಲ್ಲಿ ಯಾಸಿನ್ ಭಟ್ಕಳ ನಂತಹ ಭಯೋತ್ಪಾದಕನನ್ನು ಸಮರ್ಥಿಸಿ ಮಾತನಾಡುವ ನಿಮ್ಮ ಒಲೈಕೆ ರಾಜಕಾರಣ ಮತ್ತು ಪಾಕಿಸ್ತಾನ ಪ್ರೇಮ ಏನೆಂದು ಬಹಿರಂಗವಾಗುತ್ತಿದೆ. ರಾಷ್ಟ್ರೀಯತೆ ವಿಚಾರದಲ್ಲಿ ಕಾಂಗ್ರೆಸ್ ನಿಲುವನ್ನು ಪಕ್ಷದ ರಾಜ್ಯಾಧ್ಯಕ್ಷ ಡಿ. ಕೆ. ಶಿವಕುಮಾರ್ ರಾಜ್ಯದ ಜನತೆಯ ಮುಂದೆ ಸ್ಪಷ್ಟಪಡಿಸಬೇಕು.
ರಾಧಾಕೃಷ್ಣ ನಾಯಕ್ ಒಬ್ಬ ವಿಕೃತ ಮನೋಭಾವ ಉಳ್ಳವನಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳನ್ನು ಸೃಷ್ಠಿಸಿ ದೇಶ ಮತ್ತು ವ್ಯಕ್ತಿಗಳ ನಿಂದನೆ ಮಾಡಿ ಬೆದರಿಸುವುದೆ ಈತನ ಹವ್ಯಾಸ. ಇಂತಹ ಸಂಸ್ಕಾರಹೀನ ವ್ಯಕ್ತಿಯನ್ನು ತನಿಖೆಗಾಗಿ ಪೊಲೀಸ್ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿರುವುದನ್ನು ಹಲ್ಲೆಯಾಗಿದೆ ಎಂಬುದಾಗಿ ಬಿಂಬಿಸಿ ದಕ್ಷ ಪೊಲೀಸ್ ವ್ಯವಸ್ಥೆಯ ಬಗ್ಗೆ ದೂಷಣೆ ಮಾಡುವುದು, ಪೊಲೀಸರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವುದು ಕಾಂಗ್ರೆಸ್‍ನ ರಾಜಕೀಯ ಅಜೆಂಡಾಗಳಲ್ಲಿ ಒಂದು. ಈ ಪ್ರಕರಣದಲ್ಲಿ ಈತನ ಮೇಲೆ ಪೊಲೀಸ್ ಇಲಾಖೆ ದೇಶ ದ್ರೋಹದ ಕೇಸು ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕಾರ್ಕಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!