Thursday, August 5, 2021
spot_img
Homeಸ್ಥಳೀಯ ಸುದ್ದಿಕಾಂಗ್ರೆಸ್ಸಿಗರು ತಮ್ಮ ನಿಲುವು ಸ್ಪಷ್ಟಪಡಿಸಲಿ- ಬಿಜೆಪಿ ಯುವ ಮೋರ್ಚಾ

ಕಾಂಗ್ರೆಸ್ಸಿಗರು ತಮ್ಮ ನಿಲುವು ಸ್ಪಷ್ಟಪಡಿಸಲಿ- ಬಿಜೆಪಿ ಯುವ ಮೋರ್ಚಾ


ಕಾರ್ಕಳ : ಹಿರ್ಗಾನ ರಾಧಾಕೃಷ್ಣ ನಾಯಕ್ ಎಂಬಾತ ಕಳೆದ ವರ್ಷ ದೇಶದ ಸೈನಿಕರನ್ನು ತುಚ್ಚವಾಗಿ ನಿಂದಿಸಿ ಪಾಕಿಸ್ತಾನದ ಪರವಾಗಿ ಫೇಸ್ಬುಕ್ ಪೋಸ್ಟ್ ಹಾಕಿದ್ದು, ಆತನ ವಿರುದ್ಧ ಹಿಂದೂ ಸಂಘಟನೆಗಳು ನೀಡಿದ ದೂರಿನ ಮೇರೆಗೆ ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಆದರೆ ಕಾರ್ಕಳ ಕಾಂಗ್ರೆಸ್ಸಿಗರು ದೇಶದ್ರೋಹಿಯ ಪರ ನಿಂತಿರುವುದು ಖಂಡನೀಯ ಎಂದು ಯುವ ಮೋರ್ಚಾ ಅಧ್ಯಕ್ಷ ಸುಹಾಸ್‌ ಶೆಟ್ಟಿ ಮುಟ್ಲುಪಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸನ್ಮಾನ ಮಾಡಬೇಕಿತ್ತಾ ?
ಹಿಂದೂ ಧರ್ಮದ ಮತ್ತು ದೇಶದ ಕುರಿತು ನಿರಂತರವಾಗಿ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ದೇಶದ್ರೋಹಿಗಳನ್ನು ಶಿಕ್ಷಿಸದೇ ಸನ್ಮಾನಿಸಬೇಕಾ ? ಕಾಂಗ್ರೆಸ್ಸಿನ ಇತಿಹಾಸ ನೋಡಿದಾಗ ಅದು ಕ್ರಿಮಿನಲ್ ಹಿನ್ನೆಲೆ ಉಳ್ಳವರ ರಕ್ಷಣೆ, ಅಂತವರಿಗೆ ಬೆಂಬಲವನ್ನು ನೀಡಿಕೊಂಡು ಬಂದಿದೆ. ಅದರ ಮುಂದುವರಿದ ಭಾಗವಾಗಿ ಇವತ್ತು ಕಾರ್ಕಳದಲ್ಲಿ ಕೂಡ ದೇಶದ್ರೋಹಿಗಳ ಪರ ಕಾಂಗ್ರೆಸ್ ನಿಂತಿರುವುದು ವಿಷಾದನೀಯ. ಕಾರ್ಕಳದ ಅಭಿವೃದ್ಧಿಯ ಬಗ್ಗೆ ಜನಪರ ಚಿಂತನೆಯ ಬಗ್ಗೆ ಒಂದಿಷ್ಟು ಅರಿವಿಲ್ಲದ ಕಾಂಗ್ರೆಸ್ ತನ್ನ ಕಾರ್ಯಕರ್ತನೆಂಬ ಮಾತ್ರಕ್ಕೆ ಒಬ್ಬ ದೇಶ ದ್ರೋಹಿಯ ಪರ ನಿಂತಿರುವುದು ಕ್ಷಮಿಸಲಾಗದ ಅಪರಾಧ. ಇನ್ನಾದರೂ ಕಾರ್ಕಳದ ಕಾಂಗ್ರೆಸ್ ಬದಲಾಗಿ ದೇಶದ್ರೋಹಿಗಳ ಪರವಿರದೇ ಅಭಿವೃದ್ಧಿಯ ಪರ ಧರ್ಮದ ಪರ ಯೋಚಿಸಬೇಕಾದ ಅನಿವಾರ್ಯತೆ ಇದೆ ಎಂದರು.

ಪೊಲೀಸರಿಗೆ ಬೆಂಬಲ
ಕಾರ್ಕಳ ಪೊಲೀಸರಿಗೆ ಕಾರ್ಕಳದ ಜನತೆಯ ನೈತಿಕ ಬೆಂಬಲವಿದೆ. ಪೊಲೀಸರು ಇನ್ನಷ್ಟು ದೇಶದ್ರೋಹಿಗಳನ್ನು ಬಂಧಿಸಬೇಕು ಅಷ್ಟು ಮಾತ್ರವಲ್ಲದೆ ದೇಶದ್ರೋಹಿಗಳ ಬೆಂಬಲಿಗರನ್ನು ಬಂಧಿಸಬೇಕೆಂದು ಬಿಜೆಪಿ ಯುವಮೊರ್ಚ ಕಾರ್ಕಳ ಆಗ್ರಹಿಸುತ್ತದೆ ಎಂದವರು ತಿಳಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!