Tuesday, August 3, 2021
spot_img
Homeಅಂಕಣಆರೋಗ್ಯಧಾರ- ಮಲಬದ್ಧತೆಯನ್ನು ನಿವಾರಿಸುವುದು ಹೇಗೆ

ಆರೋಗ್ಯಧಾರ- ಮಲಬದ್ಧತೆಯನ್ನು ನಿವಾರಿಸುವುದು ಹೇಗೆ

ಈಗಿನ ಕಾಲದಲ್ಲಿ ಮಲಬದ್ಧತೆ ಸಾಮಾನ್ಯವಾಗಿ ಬಿಟ್ಟಿದೆ. ಇದರ ಮುಖ್ಯ ಕಾರಣ ದೈಹಿಕ ಶ್ರಮವಿಲ್ಲದ ನಮ್ಮ ಜೀವನ ಶೈಲಿ. ಇದು ಅನೇಕ ತಿಂಗಳು ಕಾಡುತ್ತಿದ್ದರೆ ಮೂಲವ್ಯಾಧಿಗೆ ಕಾರಣವಾಗುತ್ತದೆ ಆದ್ದರಿಂದ ಇದನ್ನು ತಡೆಯುವುದು ಮುಖ್ಯ.

ಮಲಬದ್ಧತೆಯ ಲಕ್ಷಣಗಳು –
ಮಲ ವಿಸರ್ಜನೆಗೆ ತೊಂದರೆ, ಗಟ್ಟಿಯಾದ ಮಲ, ಹೊಟ್ಟೆ ನೋವು, ಅಜೀರ್ಣ, ಹೊಟ್ಟೆಯಲ್ಲಿ ಗ್ಯಾಸ್ ಆಗೋದು.

ಮಲಬದ್ಧತೆ ಇರುವಾಗ ನಾವು ಏನು ಮಾಡಬೇಕು
• ನಾವು ಸೇವಿಸುವ ಆಹಾರ ಜೀರ್ಣಕಾರಕವಾಗಿರಲಿ. ಜಂಕ್ ಫುಡ್, ಜಿಡ್ಡಿನ ಪದಾರ್ಥ, ಕೂಲ್ ಡ್ರಿಂಕ್ಸ್, ಟೀ, ಕಾಫಿ, ಐಸ್ ಕ್ರೀಮ್, ಎಣ್ಣೆಯ ಪದಾರ್ಥ ಅಧಿಕವಾಗಿ ಸೇವಿಸಬೇಡಿ.
• ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಿ ಹೊರಗಿನ ಆಹಾರ ಸೇವಿಸುವುದು ಕಡಿಮೆ ಮಾಡಿ.
• ಸಮಯಕ್ಕೆ ಸರಿಯಾಗಿ ನಿದ್ದೆ ಮಾಡಿ. ರಾತ್ರಿ ಬೇಗ ಮಲಗಿ ಮುಂಜಾನೆ ಬೇಗ ಎದ್ದೇಳಿ. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದರೆ ಮಲಬದ್ಧತೆ ನಿವಾರಣೆಯಾಗುತ್ತದೆ. ರಾತ್ರಿ ಕನಿಷ್ಠ ಆರು ಗಂಟೆಗಳ ಕಾಲ ಒಳ್ಳೆಯ ನಿದ್ದೆ ಮಾಡಿ.
• ಮಾನಸಿಕ ಒತ್ತಡವನ್ನು ನಿವಾರಿಸಿ. ಆಹಾರ ಸೇವಿಸುವಾಗ ಚಿಂತೆಮಾಡುದು ದುಃಖಪಡುವುದು ಕ್ರೋಧ ಮಾಡುವುದು ಮಾಡಬೇಡಿ. ಟಿವಿ ಅಥವಾ ಮೊಬೈಲ್ ನೋಡಿ ಆಹಾರವನ್ನು ಸೇವಿಸಬೇಡಿ. ಆಹಾರದ ಮೇಲೆ ಗಮನವಿರಲಿ.
• ನೀರನ್ನು ಎಷ್ಟು ಬೇಕೋ ಅಷ್ಟೇ ಕುಡಿಯಿರಿ. ಅತ್ಯಧಿಕ ನೀರನ್ನು ಸೇವಿಸಬೇಡಿ.
• ಅಧಿಕ ಆಹಾರವನ್ನು ಸೇವಿಸಬೇಡಿ, ಹಿಂದಿನ ಆಹಾರ ಜೀರ್ಣವಾಗದೆ ಮತ್ತೊಮ್ಮೆ ಆಹಾರವನ್ನು ಸೇವಿಸಬೇಡಿ, ಪದೇಪದೇ ಆಹಾರವನ್ನು ಸೇವಿಸಬೇಡಿ.
• ಸುಲಭವಾಗಿ ಜೀರ್ಣವಾಗುವಂತಹ ಆಹಾರವಿರಲಿ. ತೆಂಗಿನಕಾಯಿ, ಕಡ್ಲೆಕಾಯಿ, ಎಳ್ಳು, ಪಪ್ಪಾಯ, ಮೂಸಂಬಿ, ಪೇರಳೆ ಹಣ್ಣು, ಹಣ್ಣು ತರಕಾರಿಗಳನ್ನು ಸೇವಿಸಿ ಇದರಿಂದ ಮಲಬದ್ಧತೆ ದೂರವಾಗುತ್ತದೆ.
• ಪ್ರಾಣಾಯಾಮ ಹಾಗೂ ಯೋಗಾಸನಗಳನ್ನು ಮಾಡಿ. ಯೋಗಾಸನದಲ್ಲಿ ವಜ್ರಾಸನ, ಪವನಮುಕ್ತಾಸನ, ಹಾಲಾಸನ, ಪಶ್ಚಿಮೋತ್ತಾಸನ, ಭುಜಂಗಾಸನ, ಧನುರಾಸನವನ್ನು ಮಾಡಿ. ಇದು ಮಲಬದ್ಧತೆಯನ್ನು ದೂರ ಮಾಡುತ್ತದೆ. ಈ ಆಸನಗಳನ್ನು ದಿನನಿತ್ಯ ಮಾಡಿ.
• ರಾತ್ರಿ ಎಂಟರಿಂದ ಹತ್ತು ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿ ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ನೀರಿನ ಜೊತೆ ಸೇವಿಸಿ.
• ದಿನಾಲು ಆಹಾರದ ಜೊತೆ ಒಂದು ಚಮಚ ತುಪ್ಪವನ್ನು ಬೆರೆಸಿ ಸೇವಿಸಿ. ಇದರಿಂದ ಮಲ ವಿಸರ್ಜನೆ ಸುಲಭವಾಗುತ್ತದೆ.
• ಅರ್ಧ ಲೋಟ ಬಿಸಿ ಹಾಲಿಗೆ ಒಂದು ಚಮಚ ತುಪ್ಪವನ್ನು ಬೆರೆಸಿ ರಾತ್ರಿ ಮಲಗುವಕ್ಕಿಂತ ಮುಂಚೆ ಸೇವಿಸಿ.
• ಮೂರು ಚಮಚ ನೆಲ್ಲಿಕಾಯಿ ರಸವನ್ನು ಮೂರು ಚಮಚ ನೀರನ್ನು ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.
• ಊಟವಾದ ಬಳಿಕ ಸೋಂಪನ್ನು ಸೇವಿಸಿ. ರಾತ್ರಿ ಮಲಗುವಾಗ ಸೋಂಪಿನ ನೀರನ್ನು ಕುಡಿಯಿರಿ. ಸೋಪಿನ ನೀರನ್ನು ಹೀಗೆ ಮಾಡಿ. ಒಂದು ಲೋಟ ನೀರಿಗೆ ಒಂದು ಚಮಚ ಹುರಿದ ಸೋಂಪನ್ನು ಹಾಕಿ ಕುದಿಸಿ ನಂತರ ಸೋಸಿ ಕುಡಿಯಿರಿ.
• ಅರ್ಧ ಚಮಚ ತ್ರಿಫಲಾ ಚೂರ್ಣವನ್ನು ಕಾಲು ಗ್ಲಾಸ್ ಬಿಸಿ ನೀರಿಗೆ ಬೆರೆಸಿ ರಾತ್ರಿ ಮಲಗುವ ಮುಂಚೆ ಸೇವಿಸಿರಿ. ಆದರೆ ನೆನಪಿಡಿ ಅಧಿಕ ಗಟ್ಟಿ ಮಲವಿದ್ದರೆ ತ್ರಿಫಲಾ ಚೂರ್ಣವನ್ನು ಉಪಯೋಗಿಸಬೇಡಿ.
• ಪಂಚಕರ್ಮದಲ್ಲಿ ಬಸ್ತಿ ಕರ್ಮವನ್ನು ಮಾಡುವುದರಿಂದ ಮಲಬದ್ಧತೆ ದೂರವಾಗುತ್ತದೆ. ಇದನ್ನು ಆಯುರ್ವೇದ ವೈದ್ಯರನ್ನು ಸಂಪರ್ಕಿಸಿ ತಿಳಿದುಕೊಳ್ಳಿ.

ಔಷಧಕ್ಕಿಂತ ಮುಖ್ಯವಾಗಿ ನಮ್ಮ ಜೀವನ ಶೈಲಿಯನ್ನು ಬದಲಿಸಿದರೆ ಮಲಬದ್ಧತೆ ಕಾಡುವುದಿಲ್ಲ.

ಡಾ. ಹರ್ಷಾ ಕಾಮತ್

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!