Saturday, December 4, 2021
spot_img
Homeಸ್ಥಳೀಯ ಸುದ್ದಿಎನ್‌ಎಂಎಂಎಸ್‌ ಫಲಿತಾಂಶ ಪ್ರಕಟ : ಕಾರ್ಕಳದ 55 ವಿದ್ಯಾರ್ಥಿಗಳು ಆಯ್ಕೆ

ಎನ್‌ಎಂಎಂಎಸ್‌ ಫಲಿತಾಂಶ ಪ್ರಕಟ : ಕಾರ್ಕಳದ 55 ವಿದ್ಯಾರ್ಥಿಗಳು ಆಯ್ಕೆ

ಕಾರ್ಕಳ : ಎನ್‌ಎಂಎಂಎಸ್‌ ಫಲತಾಂಶ ಪ್ರಕಟವಾಗಿದ್ದು ಕಾರ್ಕಳ ತಾಲೂಕಿನ 55 ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಲು ಅರ್ಹತೆ ಪಡೆದಿದ್ದಾರೆ. ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಲಿಯುತ್ತಿರುವ 8ನೇ ತರಗತಿಯ ಮಕ್ಕಳಿಗೆ ನಡೆಯುವ ಎನ್‌ಎಂಎಂಎಸ್‌ (ನ್ಯಾಷನಲ್‌ ಮೀನ್ಸ್‌ ಕಮ್‌ ಮೆರಿಟ್‌ ವಿದ್ಯಾರ್ಥಿ ವೇತನ) ಪರೀಕ್ಷೆಗೆ ತಾಲೂಕಿನಿಂದ 709 ವಿದ್ಯಾರ್ಥಿಗಳು ನೋಂದಾವಣೆ ಮಾಡಿದ್ದು ಅವರಲ್ಲಿ 55 ಮಂದಿ ಆಯ್ಕೆಯಾಗಿರುತ್ತಾರೆ. ಈ ಮೂಲಕ ಕಾರ್ಕಳ ಉಡುಪಿ ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಪಡೆದಿದೆ ಎಂದು ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್‌ ಜಿ. ನಾಯಕ್‌ ತಿಳಿಸಿದ್ದಾರೆ.

ಗರಿಷ್ಠ ನೋಂದಾವಣಿ
ಮಕ್ಕಳಲ್ಲಿ ಎಳೆವೆಯಲ್ಲೇ ಸ್ಫರ್ಧಾ ಮನೋಭಾವ ಬೆಳೆಸುವ ಉದ್ದೇಶದಿಂದ ಎನ್‌ಎಂಎಂಎಸ್ ಪರೀಕ್ಷೆಗಳು ಹೆಚ್ಚು ಉಪಯುಕ್ತವಾಗಿದ್ದು, ಹೆತ್ತವರು ಆಸಕ್ತಿಯಿಂದ ತಮ್ಮ ಮಕ್ಕಳ ಹೆಸರು ನೋಂದಾವಣೆ ಮಾಡಿರುವುದು ಗಮನಾರ್ಹ. ಇಲಾಖೆಯ ಎಲ್ಲ ಅಧಿಕಾರಿಗಳು, ಪ್ರೌಢಶಾಲಾ ಮತ್ತು ಉನ್ನತೀಕರಿಸಿದ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರು ಮತ್ತು ಸಹಶಿಕ್ಷಕರ ಸಾಂಘಿಕ ಪ್ರಯತ್ನದಿಂದಾಗಿ ಜಿಲ್ಲೆಯಲ್ಲೇ ಕಾರ್ಕಳ ತಾಲೂಕು ಗರಿಷ್ಠ ಸಂಖ್ಯೆಯಲ್ಲಿ ನೋಂದಾವಣೆಯಾಗಿದೆ.

ಈ ಹಿಂದೆ ಶಿಕ್ಷಣಾಧಿಕಾರಿದ್ದ ಶಶಿಧರ್‌ ಜಿ.ಎಸ್.‌ ಅವರ ವಿಶೇಷ ಮುತುವರ್ಜಿಯಿಂದಾಗಿ ತಾಲೂಕಿನಲ್ಲಿ ಎನ್‌ಎಂಎಂಎಸ್‌, ಎನ್‌ಟಿಎಸ್‌ಇಗಾಗಿ ಅತಿ ಹೆಚ್ಚು ನೋಂದಾವಣೆಯಾಗಿದೆ. ಸ್ವರ್ಣ ಕಾರ್ಕಳ ಪ್ರತಿಭಾನ್ವೇಷಣೆ ಹೆಸರಲ್ಲಿ ಮುಖ್ಯಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನ ನೀಡಿ ವಿದ್ಯಾರ್ಥಿಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ನೋಂದಾವಣೆಯಾಗುವಂತೆ ನೋಡಿಕೊಂಡಿರುತ್ತಾರೆ. ಇದಕ್ಕಾಗಿಯೇ ಶಿಕ್ಷಣ ಸಂಯೋಜಕ ಬಾಲಕೃಷ್ಣ ನಾಯಕ್‌ ಅವರಿಗೆ ಕಾರ್ಕಳದ ನೋಡಲ್‌ ಅಧಿಕಾರಿಯಾಗಿ ಜವಾಬ್ದಾರಿ ನೀಡಲಾಗಿದ್ದು, ಜನಪ್ರತಿನಿಧಿಗಳ ಸಹಕಾರನ್ನೂ ಪಡೆಯಲಾಗಿತ್ತು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!