Saturday, December 4, 2021
spot_img
Homeಸ್ಥಳೀಯ ಸುದ್ದಿಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಿಂಭಡ್ತಿ- ತರಗತಿ ಬಹಿಷ್ಕಾರ ಎಚ್ಚರಿಕೆ

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಿಂಭಡ್ತಿ- ತರಗತಿ ಬಹಿಷ್ಕಾರ ಎಚ್ಚರಿಕೆ

ಕಾರ್ಕಳ : 2016ಕ್ಕಿಂತ ಪೂರ್ವದಲ್ಲಿ ನೇಮಕವಾಗಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು (1ರಿಂದ 7ನೇ ತರಗತಿ) ಪ್ರಾಥಮಿಕ ಶಾಲಾ ಶಿಕ್ಷಕರು ಎಂದು ಪದನಾಮಕರಿಸಿ ಅವರ ಸೇವಾ ಜೇಷ್ಠತೆ ಮತ್ತು ಪದವಿ ವಿದ್ಯಾರ್ಹತೆಯನ್ನು ಪರಿಗಣಿಸದೇ ಹಿಂಬಡ್ತಿ ನೀಡಿದಂತಾಗಿದೆ. ಕಳೆದ 25 ವರ್ಷಗಳಿಂದ 6ರಿಂದ 8ನೇ ತರಗತಿಗಳನ್ನು ಬೋಧಿಸುತ್ತಿರುವ ಅರ್ಹ ಪದವಿ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರಿಗೆ ಇದರಿಂದ ಅನ್ಯಾಯವಾಗಿದೆ. ಅಲ್ಲದೇ ಪ್ರೌಢಶಾಲಾ ಶಿಕ್ಷಕರ ಗ್ರೇಡ್‌ -2 ಹುದ್ದೆಗಳಿಗೆ ಭಡ್ತಿ ನೀಡದೇ ಕಡೆಗಣಿಸಲಾಗುತ್ತಿದೆ. ಈ ಕುರಿತು ಹಲವು ಬಾರಿ ಸಾಂಕೇತಿಕವಾಗಿ ಧರಣಿ, ತರಗತಿ ಬಹಿಷ್ಕಾರ ಚಳುವಳಿ ನಡೆಸಿದ್ದಾಗ್ಯೂ ಇಲಾಖೆ ಸ್ಪಂದಿಸಿಲ್ಲ. ಆದ್ದರಿಂದ ತರಗತಿ ಬಹಿಷ್ಕಾರ ಮಾಡಲು ಮುಂದಾಗಿದ್ದೇವೆ ಎಂದು ಶಿಕ್ಷಕರ ಸಂಘದ ಪದಾಧಿಕಾರಿಗಳು ಜು. 7ರಂದು ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್‌ ನಾಯಕ್‌ ಅವರಿಗೆ ಮನವಿ ಪತ್ರದ ಮೂಲಕ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕ.ರಾ.ಪ್ರಾ.ಶಾ.ಶಿ.ಸಂಘದ ಕಾರ್ಕಳ ವಲಯಾಧ್ಯಕ್ಷ ರಮಾನಂದ ಶೆಟ್ಟಿ ಶಿವಪುರ, ಕ.ರಾ.ಸ.ನೌ.ಸಂಘ ಹೆಬ್ರಿ ತಾಲೂಕು ಅಧ್ಯಕ್ಷ ಹರೀಶ್ ಪೂಜಾರಿ ಎಸ್., ಕ.ರಾ.ಪ್ರಾ.ಶಾ.ಶಿ.ಸಂಘ ಉಡುಪಿ ಜಿಲ್ಲಾ ಕಾರ್ಯದರ್ಶಿ ಸಂಜೀವ ದೇವಾಡಿಗ, ಶಿಕ್ಷಕರಾದ ಯಶೋದ ಹೆಗ್ಡೆ, ರತ್ನಾಕರ ಕೆ.ಎಂ., ಶ್ರೀನಿವಾಸ ಭಂಡಾರಿ, ಲಕ್ಷಿನಾರಾಯಣ, ಸಂಘದ ಪದಾಧಿಕಾರಿಗಳು, ಉಭಯ ತಾಲೂಕಿನ ಪ್ರಾಥಮಿಕ ಶಾಲಾ ಪಧವೀಧರ ಸಂಘದ ಪಧಾದಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!