Thursday, August 5, 2021
spot_img
Homeಸ್ಥಳೀಯ ಸುದ್ದಿಕೆನರಾ ಬ್ಯಾಂಕ್‌ ಮುಖ್ಯ ಪ್ರಬಂಧಕ ಶ್ರೀಹರಿ ಭಟ್‌ ಅವರಿಗೆ ಬೀಳ್ಕೊಡುಗೆ

ಕೆನರಾ ಬ್ಯಾಂಕ್‌ ಮುಖ್ಯ ಪ್ರಬಂಧಕ ಶ್ರೀಹರಿ ಭಟ್‌ ಅವರಿಗೆ ಬೀಳ್ಕೊಡುಗೆ

ಕಾರ್ಕಳ :‌ ಉಡುಪಿ ಪ್ರಾದೇಶಿಕ ಕಚೇರಿಗೆ ವರ್ಗಾವಣೆ ಹೊಂದಿರುವ ಕಾರ್ಕಳ ಕೆನರಾ ಬ್ಯಾಂಕ್‌ ನ ಮುಖ್ಯ ಪ್ರಬಂಧಕ ಎಚ್‌. ಶ್ರೀಹರಿ ಭಟ್ ಅವರನ್ನು ಗ್ರಾಹಕರ ವತಿಯಿಂದ ಜು. 5ರಂದು ಬ್ಯಾಂಕ್‌ ಸಭಾಂಗಣದಲ್ಲಿ ಬೀಳ್ಕೊಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಹರಿ ಭಟ್ ಅವರು, ಮೂರು ವರ್ಷಗಳ ಅವಧಿಯಲ್ಲಿ ಬ್ಯಾಂಕ್‌ ಗ್ರಾಹಕರು ಮತ್ತು ಸಿಬ್ಬಂದಿ ವರ್ಗದಿಂದ ಉತ್ತಮ ಸಹಕಾರ ದೊರೆತಿದೆ. ಕಾರ್ಕಳದಲ್ಲಿ ಕಾರ್ಯನಿರ್ವಹಿಸಿರುವುದರ ಬಗ್ಗೆ ಸಂತೃಪ್ತಿ ಇದೆ. ಬೀಳ್ಕೊಡುಗೆ ಸಮಾರಂಭ ಆಯೋಜಿಸಿ ಪ್ರೀತಿ ತೋರಿದ ಸರ್ವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಎಜಿಎಂ ಕೆ. ಕಾಳಿ ಮಾತನಾಡಿ, ಕಾರ್ಕಳ ಕೆನರಾ ಬ್ಯಾಂಕ್ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಶಾಖೆಯಾಗಿದೆ. ಇಲ್ಲಿನ ಗ್ರಾಹಕರ ಬೆಂಬಲ, ಶ್ರೀಹರಿ ಭಟ್‌ ಅವರ ಪಯತ್ನದ ಫಲವಾಗಿ ಇದು ಸಾಧ್ಯವಾಗಿದೆ ಎಂದರು. ನ್ಯಾಯವಾದಿ ಶೇಖರ್‌ ಮಡಿವಾಳ್‌, ತುಕಾರಾಂ ನಾಯಕ್, ಭರತ್ ರಾಜ್ ಅವರು ಅನಿಸಿಕೆ ವ್ಯಕ್ತಪಡಿಸಿದರು.
ಉದ್ಯಮಿ ಮಹಾವೀರ ಹೆಗ್ಡೆ ಅಂಡಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯೋಗೀಶ್‌ ಕಿಣಿ ಪ್ರಾರ್ಥಿಸಿ, ವಿವೇಕಾನಂದ ಶೆಣೈ ಸ್ವಾಗತಿಸಿದರು. ವರದರಾಯ ನಾಯಕ್ ಜಾರ್ಕಳ ವಂದಿಸಿದರು. ಶಿಕ್ಷಕ ಯೋಗರಾಜ್ ಜೈನ್ ಕಾರ್ಯಕ್ರಮ ನಿರೂಪಿಸಿದರು

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!