ಮಂಗಳೂರು: ಎಲ್ಲ ಸರಕಾರಿ ನಿಯಮಗಳನ್ನು ಗಾಳಿಗೆ ತೂರಿ, ಕೋವಿಡ್ ಸಂಕಷ್ಟದ ಸಮಯದಲ್ಲೂ ಬೇಕಾಬಿಟ್ಟಿ ಬಸ್ ದರವನ್ನು ಏರಿಸಿರುವ ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ನಿರ್ಧಾರಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.
ಬಸ್ ದರ ಏರಿಸಿರುವ ನಿರ್ಧಾರವನ್ನು ವಿವಿಧ ಸಂಘಟನೆಗಳು ವಿರೋಧಿಸಿದ್ದು, ಹಲವೆಡೆ ಈ ಬಗ್ಗೆ ಪ್ರತಿಭಟನೆಗಳು ನಡೆದಿವೆ.
ಈ ಪ್ರತಿಭಟನೆ ಮತ್ತು ಸಾರ್ವಜನಿಕ ಆಕ್ರೋಶದ ಬಳಿಕ ದ.ಕ. ಜಿಲ್ಲಾಧಿಕಾರಿ ಮಾಲಕರ ಬಸ್ ಏರಿಕೆಯ ನಿರ್ಧಾರಕ್ಕೆ ತಾತ್ಕಾಲಿಕ ತಡೆಯಾಜ್ಞೆಯನ್ನು ನೀಡಿದ್ದಾರೆ.
ಬಸ್ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ, ಈ ವಾರ ಮಹತ್ವದ ಆರ್ಟಿಎ ಸಭೆ ಕರೆಯುದಾಗಿ ಅವರು ಬಸ್ ಮಾಲಕರ ಸಂಘಕ್ಕೆ ಭರವಸೆ ನೀಡಿದ್ದಾರೆ. ಈ ಸಭೆಯಲ್ಲಿ ಬಸ್ ದರವನ್ನು ಏರಿಸುವ ಎಲ್ಲ ಯಥಾ ಸ್ಥಿತಿಯಲ್ಲಿ ಮುಂದುವರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಡಿಸಿ ರಾಜೇಂದ್ರ ತಿಳಿಸಿದ್ದಾರೆ.
ಅಲ್ಲಿಯ ತನಕ ಹಳೆಯ ಬಸ್ ದರವನ್ನೇ ಮುಂದುವರೆಸುವಂತೆ ಡಿಸಿ ಬಸ್ ಮಾಲಕರಿಗೆ ಸೂಚನೆ ನೀಡಿದ್ದು, ಈ ಆದೇಶವನ್ನು ಪಾಲನೆ ಮಾಡುವುದಾಗಿ ಜಿಲ್ಲಾ ಬಸ್ ಮಾಲಕರ ಸಂಘದ ಪದಾಧಿಕಾರಿಗಳು ಒಪ್ಪಿಕೊಂಡಿದ್ದಾರೆ.
ಬೇಕಾಬಿಟ್ಟಿ ಬಸ್ ದರ ಏರಿಕೆ : ಬಸ್ ಮಾಲಕರಿಗೆ ಲಗಾಮು ಹಾಕಿದ ದ.ಕ. ಡಿಸಿ
Recent Comments
ಕಗ್ಗದ ಸಂದೇಶ
on