ಹೆಬ್ರಿ : ನಮ್ಮ ನಾಯಕರಾಗಿದ್ದ ಗೋಪಾಲ ಭಂಡಾರಿಯವರ ವ್ಯಕ್ತಿತ್ವವೇ ನಮಗೆಲ್ಲ ದೊಡ್ಡ ಶಕ್ತಿ. ಅವರು ನಮ್ಮೊಂದಿಗೆಯೇ ಇದ್ದಾರೆ ಎಂಬ ಭಾವನೆ ಇಂದಿಗೂ ಇದೆ. ಕಾರ್ಕಳ ಕ್ಷೇತ್ರದಲ್ಲಿ ನಾವು ಮತ್ತೇ ಹಂತಹಂತವಾಗಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಮೂಲಕ ಅವರ ಕನಸು ಈಡೇರಿಸಬೇಕಿದೆ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.
ಅವರು ಹೆಬ್ರಿ ಕಾಂಗ್ರೆಸ್ ಸಮಿತಿ ವತಿಯಿಂದ ಎಚ್.ಬಿ. ಸುರೇಶ್ ನೇತೃತ್ವದಲ್ಲಿ ನಡೆದ ಗೋಪಾಲ ಭಂಡಾರಿಯವರ ದ್ವಿತೀಯ ವರ್ಷದ ಪುಣ್ಯಸ್ಮರಣೆಯಲ್ಲಿ ಮಾತನಾಡಿದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಮಾತನಾಡಿ ಗೋಪಾಲ ಭಂಡಾರಿ ನೀಡಿದ ಕೊಡುಗೆ ಮಾಡಿದ ಸೇವೆಯನ್ನು ಸ್ಮರಿಸಿದರು.
ಗೋಪಾಲ ಭಂಡಾರಿ ಅಳಿಯ ಶ್ವೇತ ಕುಮಾರ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್. ಜನಾರ್ಧನ್, ಕಾರ್ಯದರ್ಶಿ ಅಶ್ವಿನಿ ಮುದ್ರಾಡಿ, ಹೆಬ್ರಿ ಗ್ರಾಮ ಪಂಚಾಯತ್ ಸದಸ್ಯರಾದ ಕೃಷ್ಣ ನಾಯ್ಕ್, ಸಂತೋಷ ನಾಯಕ್ ಕನ್ಯಾನ, ಪಕ್ಷದ ಪ್ರಮುಖರಾದ ಶಶಿಕಲಾ ಡಿ. ಪೂಜಾರಿ, ಜಯಲಕ್ಷ್ಮಿ ಮುದ್ರಾಡಿ, ನಾಗರಾಜ ಭಂಡಾರಿ, ಸುಂದರ ಶಿರೂರ್, ಶಶಿಕಲಾ ಆರ್.ಪಿ, ಸುಧಾಕರ ಶೆಟ್ಟಿ ಬಲ್ಲೆಮನೆ, ದೇವಳಬೈಲು ಸುಧಾಕರ ಶೆಟ್ಟಿ, ಅಮರನಾಥ ಶೆಟ್ಟಿ, ಸುಂದರ ಪೂಜಾರಿ, ಗಣೇಶ್ ಶೇರಿಗಾರ್, ಶಂಕರ ಶೇರಿಗಾರ್, ರಾಜೇಶ ಪೂಜಾರಿ, ವಿಶು ಕುಮಾರ್, ಕರವೇ ಹೆಬ್ರಿ ಘಟಕದ ಅಧ್ಯಕ್ಷ ಸೀತಾನದಿ ವಿಜೇಂದ್ರ ಶೆಟ್ಟಿ, ಜೆಡಿಎಸ್ ಕಾರ್ಕಳ ಕ್ಷೇತ್ರಾಧ್ಯಕ್ಷ ಕುಚ್ಚೂರು ಶ್ರೀಕಾಂತ್ ಪೂಜಾರಿ, ಹೆಬ್ರಿ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಬಿ. ಸುರೇಶ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಕಳ ಹಾಗೂ ಹೆಬ್ರಿಯ ವಿವಿಧೆಡೆ ಕಾಂಗ್ರೆಸ್ ಗ್ರಾಮ ಸಮಿತಿ ವತಿಯಿಂದ ಗೋಪಾಲ ಭಂಡಾರಿಯವರ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.
ಗೋಪಾಲ ಭಂಡಾರಿ ವ್ಯಕ್ತಿತ್ವವೇ ನಮಗೆ ಶಕ್ತಿ : ಮಂಜುನಾಥ ಪೂಜಾರಿ
Recent Comments
ಕಗ್ಗದ ಸಂದೇಶ
on