ಹಾವೇರಿ: ಕಾಂಗ್ರೆಸ್ನವರನ್ನು ಜನ ಮರೆತು ಬಿಟ್ಟಿದ್ದಾರೆ, ಯಾವುದೇ ಅರ್ಜಿ ಅವರಿಗೆ ಬರ್ತಿಲ್ಲ. ಹೀಗಾಗಿ ಡಿ. ಕೆ. ಶಿವಕುಮಾರ್ ಹೋಲ್ ಸೇಲ್ ಟೆಂಡರ್ ಕರೆದುಬಿಟ್ಟಿದ್ದಾರೆ. ಯಾರು ಬೇಕಾದರು ಬರಬಹುದು ಎಂದು ಟೆಂಡರ್ ಕರೆದಿದ್ದಾರೆ. ಡಿ.ಕೆ. ಶಿವಕುಮಾರ್ ಕನಸು ಕಾಣುತ್ತಿದ್ದಾರೆ, ಆಕನಸುಗಳು ನನಸಾಗಲ್ಲ. ಬಾಂಬೆ ಟೀಂ ಮತ್ತೆ ಕಾಂಗ್ರೆಸ್ ಸೇರಬಹುದು ಎಂದು ಡಿಕೆಶಿ ಬಹಿರಂಗ ಆಹ್ವಾನ ನೀಡಿದ ವಿಚಾರವಾಗಿ ಹಿರೇಕೇರೂರಿನಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿಕೆ ನೀಡಿದ್ದಾರೆ.
ಸಿ.ಪಿ ಯೋಗೇಶ್ವರ್ ಅಂಬಾರಿ ಕಥೆ ಹೇಳುವ ಮೂಲಕ ಸಿಎಂ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರಿಗೆ ಟಾಂಗ್ ನೀಡಿದ ವಿಚಾರವಾಗಿ, ಸಿ.ಪಿ. ಯೋಗೇಶ್ವರ್ ವಿರುದ್ದ ಪರೋಕ್ಷ ಅಸಮಧಾನ ವ್ಯಕ್ತ ಪಡಿಸಿದ ಬಿ.ಸಿ. ಪಾಟೀಲ್, ನಾವು ಸಿ.ಪಿ. ಯೋಗೇಶ್ವರ್ ಅವರಷ್ಟು ಬುದ್ದಿವಂತರಲ್ಲ. ಅಂಬಾರಿ ಹೊರೋ ಶಕ್ತಿ ಆನೆಗಿದ್ದರೆ ಅನೆನೂ ಹೊರಬಹುದು, ಆನೆ ಮರಿನೂ ಹೊರಬಹುದು ಎಂದು ಹೇಳುವ ಮೂಲಕ ಸಿಎಂ ಯಡಿಯೂರಪ್ಪ ಹಾಗೂ ವಿಜಯೇಂದ್ರ ಪರ ಕೌರವ ಬ್ಯಾಟಿಂಗ್ ಮಾಡಿದರು.
ಕಾಂಗ್ರೆಸ್ನವರನ್ನು ಜನ ಮರೆತು ಬಿಟ್ಟಿದ್ದಾರೆ : ಬಿ.ಸಿ. ಪಾಟೀಲ್
Recent Comments
ಕಗ್ಗದ ಸಂದೇಶ
on