Tuesday, August 3, 2021
spot_img
Homeವಿದೇಶಭಾರತ ಸೇರಿ 14 ದೇಶಗಳಿಗೆ ಹೋಗದಂತೆ ತನ್ನ ಪ್ರಜೆಗಳಿಗೆ ನಿರ್ಬಂಧ ಹೇರಿದ ಯುಎಇ

ಭಾರತ ಸೇರಿ 14 ದೇಶಗಳಿಗೆ ಹೋಗದಂತೆ ತನ್ನ ಪ್ರಜೆಗಳಿಗೆ ನಿರ್ಬಂಧ ಹೇರಿದ ಯುಎಇ

ಕೊರೊನಾ ಸೋಂಕು ತಡೆ ನಿಟ್ಟಿನಲ್ಲಿ ಭಾರತ, ಪಾಕಿಸ್ತಾನ ಸೇರಿದಂತೆ ವಿಶ್ವದ 14 ರಾಷ್ಟ್ರಗಳ ಪ್ರವಾಸಕ್ಕೆ ತೆರಳದಂತೆ ತನ್ನ ಪ್ರಜೆಗಳಿಗೆ ಅರಬ್‌ ಸಂಯುಕ್ತ ಸಂಸ್ಥಾನ ಸೂಚಿಸಿದೆ.
ಪ್ರಜೆಗಳು ಭಾರತ, ಪಾಕಿಸ್ತಾನ, ನೇಪಾಲ, ಬಾಂಗ್ಲಾದೇಶ, ಶ್ರೀಲಂಕಾ, ವಿಯೆಟ್ನಾಂ, ನಮಿಬಿಯಾ, ಝಾಂಬಿಯಾ, ಕಾಂಗೊ, ಉಗಾಂಡಾಗೆ ಹೋಗಬಾರದು ಎಂದು ತಿಳಿಸಿದೆ.
ಯುಎಇಯ ಪ್ರಧಾನ ನಾಗರಿಕ ವಿಮಾನಯಾನ ಪ್ರಾಧಿಕಾರವು ಜೂನ್‌ ನಲ್ಲಿ ನೀಡಿದ ನೋಟಿಸ್‌ ನಲ್ಲಿ ಲೈಬೀರಿಯಾ, ಸಿಯೆರಾ ಲಿಯೋನ್‌, ಡೆಮಾಕ್ರಟಿಕ್‌ ರಿಪಬ್ಲಿಕ್‌ ಆಫ್‌ ಕಾಂಗೋ, ಉಗಾಂಡಾ, ಜಾಂಬಿಯಾ, ವಿಯೆಟ್ನಾಂ, ಭಾರತ, ಬಾಂಗ್ಲಾದೇಶ, ನೇಪಾಲ, ಶ್ರೀಲಂಕಾ, ನೈಜೀರಿಯಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳಿಂದ ಬರುವ ವಿಮಾನಗಳ ಮೇಲೆ ಜುಲೈ 21ರ ರಾತ್ರಿ ವರೆಗೆ ನಿಷೇಧ ಹೇರಲಾಗಿದೆ ಎಂದು ತಿಳಿಸಿದೆ.
ಅದಾಗ್ಯೂ ಸರಕು, ವ್ಯವಹಾರ ಮತ್ತು ಚಾರ್ಟರ್‌ ಫ್ಲೈಟ್‌ಗಳಿಗೆ ಈ ನಿರ್ಬಂಧಗಲಿಂದ ವಿನಾಯಿತಿ ನೀಡಲಾಗಿದೆ.
ಯುಎಇ ತನ್ನ ಎಲ್ಲ ನಾಗರಿಕರಿಗೆ ತಮ್ಮ ಅತಿಥೇಯ ರಾಷ್ಟ್ರಗಳ ನಿಯಮಗಳನ್ನು ಪಾಲಿಸುವಂತೆ ನಿರ್ದೇಶನಗಳನ್ನು ನೀಡಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!