Saturday, December 4, 2021
spot_img
Homeಸ್ಥಳೀಯ ಸುದ್ದಿಗುಂಡು ಹಾರಿಸಿ ಬೀದಿ ನಾಯಿಯ ಹತ್ಯೆ: ಪ್ರಕರಣ ದಾಖಲು

ಗುಂಡು ಹಾರಿಸಿ ಬೀದಿ ನಾಯಿಯ ಹತ್ಯೆ: ಪ್ರಕರಣ ದಾಖಲು

ಮಂಗಳೂರು : ಮಂಗಳೂರು ನಗರದ ಶಿವಭಾಗ್ ನಲ್ಲಿ ಬೀದಿ ನಾಯಿಯನ್ನು ಗುಂಡು ಹಾರಿಸಿ ಹತ್ಯೆಗೈದ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಿನ್ನೆ ರಾತ್ರಿ ಕೃತ್ಯ ಎಸಗಿರುವ ಕಿಡಿಗೇಡಿಗಳು ಏರ್ ಗನ್ ಮೂಲಕ ನಾಯಿಯ ಹೊಟ್ಟೆಗೆ ಗುಂಡು ಹಾರಿಸಿ ಕೊಂದಿದ್ದಾರೆ ಎನ್ನಲಾಗಿದೆ.

ಘಟನೆಯಿಂದ ಸಾವನ್ನಪ್ಪಿದ ನಾಯಿಯನ್ನು ಅನಿಮಲ್ ಕೇರ್ ಟ್ರಸ್ಟ್ ಮೂಲಕ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ವೇಳೆ ನಾಯಿಯ ದೇಹದಲ್ಲಿ ಬುಲೆಟ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಇನ್ನು ಕಿಡಿಗೇಡಿಗಳ ಈ ದುಷ್ಕೃತ್ಯಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ನಾಯಿಯನ್ನು ಗುಂಡು ಹಾರಿಸಿ ಕೊಂದವರನ್ನು ಬಂಧಿಸುವಂತೆ ಆಗ್ರಹ ವ್ಯಕ್ತವಾಗಿದೆ.

ಕೃತ್ಯದ ಬಗ್ಗೆ ಅನಿಮಲ್ ಕೇರ್ ಟ್ರಸ್ಟ್ ನ ಸುಮಾ ರವರು ಕದ್ರಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಪೊಲೀಸರು ಆರೋಪಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!