Saturday, December 4, 2021
spot_img
Homeರಾಜ್ಯಎರಡೂ ಡೋಸ್‌ ಲಸಿಕೆ ಪಡೆದರೆ ಶೇ. 98 ರಷ್ಟು ಕೋವಿಡ್‌ ಸಾವಿನಿಂದ ರಕ್ಷಣೆ : ಕೇಂದ್ರ...

ಎರಡೂ ಡೋಸ್‌ ಲಸಿಕೆ ಪಡೆದರೆ ಶೇ. 98 ರಷ್ಟು ಕೋವಿಡ್‌ ಸಾವಿನಿಂದ ರಕ್ಷಣೆ : ಕೇಂದ್ರ ಸರಕಾರ

ನವದೆಹಲಿ: ಕೋವಿಡ್ 19 ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದುಕೊಂಡರೆ ಕೋವಿಡ್‌ ಕಾರಣದ ಸಾವಿನಿಂದ ಶೇ. 98 ರಷ್ಟು ರಕ್ಷಣೆಯನ್ನು ನೀಡುತ್ತದೆ. ಆದರೆ ಒಂದು ಕೋವಿಡ್‌ ಡೋಸ್‌ ಶೇ. 92 ರಷ್ಟು ರಕ್ಷಣೆ ನೀಡಲಿದೆ ಎಂಬುದನ್ನು ಪಂಜಾಬ್‌ ಪೊಲೀಸ್‌ ಸಿಬ್ಬಂದಿಗಳ ಮೇಲೆ ಸಡೆಸಿದ ಅಧ್ಯಯನದ ಅಂಶವನ್ನು ಉಲ್ಲೇಖಿಸಿ ಕೇಂದ್ರ ತಿಳಿಸಿದೆ.
ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಶಂಶೋಧನಾ ಸಂಸ್ಥೆ ಪಂಜಾಬ್‌ ಸರಕಾರದ ಸಹಯೋಗದೊಂದಿಗೆ ಈ ಅಧ್ಯಯನ ನಡೆಸಿದೆ. ಈ ಅಧ್ಯಯನದ ಅಂಕಿ ಅಂಶವನ್ನು ಹಂಚಿಕೊಂಡಿರುವ ನೀತಿ ಆಯೋಗದ ಸದಸ್ಯ ಡಾ.ವಿ.ಕೆ. ಪೌಲ್‌ ಅವರು, 4868 ಪೊಲೀಸ್‌ ಸಿಬ್ಬಂದಿಗೆ ಲಸಿಕೆ ನೀಡಿಲ್ಲ ಮತ್ತು ಅವರಲ್ಲಿ 15 ಮಂದಿ ಕೋವಿಡ್‌ ನಿಂದ ಸಾವನ್ನಪ್ಪಿದ್ದಾರೆ. ಇದು ಪ್ರತಿ ಸಾವಿರಕ್ಕೆ ಸಾವಿರಕ್ಕೆ 3.08 ರಷ್ಟು ಸಾವಿನ ಪ್ರಮಾಣ ಇಳಿಕೆಯಾಗಿದೆ ಎಂಬುದನ್ನು ಸಾಬೀತು ಪಡಿಸಿದೆ ಎಂದು ತಿಳಿಸಿದ್ದಾರೆ.
35,856 ಪೊಲೀಸ್‌ ಸಿಬಂದಿಗಳಿಗೆ ಒಂದು ಡೋಸ್‌ ಲಸಿಕೆ ನೀಡಿದ್ದು, ಇವರಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 42,720 ಪೊಲೀಸ್‌ ಸಿಬಂದಿಗಳು ಕೋವಿಡ್‌ ಎರಡೂ ಡೋಸ್‌ಗಳನ್ನು ಪಡೆದಿದ್ದು, ಅವರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಈ ಅಧ್ಯಯನದಿಂದ ಇದು ಪ್ರತಿ ಸಾವಿರಕ್ಕೆ ಸಾವಿನ ಪ್ರಮಾಣ 0.05ರಷ್ಟು ಸಂಭವಿಸುತ್ತದೆ ಎಂದು ಪೌಲ್‌ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!