Tuesday, August 3, 2021
spot_img
Homeಸ್ಥಳೀಯ ಸುದ್ದಿಕಾರ್ಕಳ ತಹಶೀಲ್ದಾರ್ ಪುರಂದರ ಹೆಗ್ಡೆ ಭಡ್ತಿಗೊಂಡು ವರ್ಗಾವಣೆ - ಪ್ರಕಾಶ್‌ ಎಸ್‌. ಮರಬಳ್ಳಿ ನೂತನ ತಹಶೀಲ್ದಾರ್‌

ಕಾರ್ಕಳ ತಹಶೀಲ್ದಾರ್ ಪುರಂದರ ಹೆಗ್ಡೆ ಭಡ್ತಿಗೊಂಡು ವರ್ಗಾವಣೆ – ಪ್ರಕಾಶ್‌ ಎಸ್‌. ಮರಬಳ್ಳಿ ನೂತನ ತಹಶೀಲ್ದಾರ್‌

ಕಾರ್ಕಳ : ಕಾರ್ಕಳ ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ಗ್ರೇಡ್ -1 ತಹಶೀಲ್ದಾರ್ ಆಗಿ ಭಡ್ತಿಗೊಂಡಿದ್ದು, ಕೆಲ ದಿನಗಳಲ್ಲಿ ವರ್ಗಾವಣೆಯಾಗಲಿದ್ದಾರೆ. ಮೂಲತಃ ದ.ಕ. ಜಿಲ್ಲೆಯ ಬೆಳ್ತಂಗಡಿಯವರಾದ ಪುರಂದರ ಹೆಗ್ಡೆ ಅವರು 2019 ಮಾರ್ಚ್ ನಲ್ಲಿ ಬಂಟ್ವಾಳ ತಾಲೂಕಿನಿಂದ ಕಾರ್ಕಳಕ್ಕೆ ವರ್ಗಾವಣೆ ಹೊಂದಿದ್ದರು. ಇವರ ಅವಧಿಯಲ್ಲಿ ಕಾರ್ಕಳ ತಾಲೂಕು ಕಚೇರಿ ಮ್ಯುಟೇಶನ್‌ ಕಡತಗಳ ಸ್ವೀಕೃತಿ ಹಾಗೂ ವಿಲೇವಾರಿಯಲ್ಲಿ ರಾಜ್ಯದ 237 ತಾಲೂಕುಗಳಲ್ಲಿ ಎರಡನೆ ಬಾರಿಗೆ ಮೊದಲನೇ ಹಾಗೂ ದ್ವಿತೀಯ ಸ್ಥಾನ ಪಡೆದಿದ್ದು ಪ್ರಶಸ್ತಿಗೆ ಪಾತ್ರವಾಗಿತ್ತು. ಬಂಟ್ವಾಳದಲ್ಲಿ 4 ವರ್ಷಗಳ ಕಾಲ ತಹಶೀಲ್ದಾರ್‌ ಆಗಿ ಕಾರ್ಯನಿರ್ವಹಿಸಿದ್ದ ಪುರಂದರ ಹೆಗ್ಡೆ ಅವರು ಅಲ್ಲಿ 94ಸಿ ಹಾಗೂ 94 ಸಿಸಿಯಡಿ ಸುಮಾರು 22 ಸಾವಿರ ಹಕ್ಕು ಪತ್ರ ವಿತರಿಸಿದ್ದರು. ಪುರಂದರ ಹೆಗ್ಡೆ ಅವರಿಂದ ತೆರವಾಗಲಿರುವ ಸ್ಥಾನಕ್ಕೆ ಪ್ರಕಾಶ್‌ ಎಸ್.‌ ಮರಬಳ್ಳಿ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!