Sunday, October 24, 2021
spot_img
Homeಅಂಕಣವಾತಾವರಣಕ್ಕೆ ತಕ್ಕಂಥೆ ಹೇಗೆ ಜಾಗರೂಕರಾಗಿರಬೇಕು ?

ವಾತಾವರಣಕ್ಕೆ ತಕ್ಕಂಥೆ ಹೇಗೆ ಜಾಗರೂಕರಾಗಿರಬೇಕು ?

ಆಯುರ್ವೇದದಲ್ಲಿ ಪ್ರತೀ ಋತುವಿನಲ್ಲಿ ಪಾಲಿಸಬೇಕಾದ ನಿಯಮಗಳನ್ನು ತಿಳಿಸಿದೆ. ಇದನ್ನು ಋತುಚರ್ಯ ಎಂದು ಹೇಳುತ್ತೇವೆ. ವಾತಾವರಣಕ್ಕೆ ತಕ್ಕಂತೆ ನಮ್ಮ ದೇಹದಲ್ಲಿಯೂ ಕೂಡ ಬದಲಾವಣೆಯಾಗುತ್ತದೆ ಅದನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಋತುಚರ್ಯದ ಪಾಲನೆ ಮಾಡುವುದು ಅವಶ್ಯಕ. ವರ್ಷದಲ್ಲಿ ಆರು ಋತುಗಳು ಇವೆ. ಇದರ ಪ್ರಕಾರ ಪ್ರತಿ ಋತುವಿಗೆ ಅದರದ್ದೇ ಆದ ಋತುಚರ್ಯವಿದೆ. ಹೇಮಂತ ಋತುಚರ್ಯ, ಶಿಶಿರ ಋತುಚರ್ಯ, ವಸಂತ ಋತುಚರ್ಯ, ಗ್ರೀಷ್ಮ ಋತುಚರ್ಯ, ವರ್ಷ ಋತುಚರ್ಯ ಹಾಗೂ ಶರದ್ ಋತುಚರ್ಯ. ಪ್ರತೀ ಋತುವಿನಲ್ಲಿ ನಮ್ಮ ದೇಹವನ್ನು ಸಮತೋಲನದಲ್ಲಿಟ್ಟುಕೊಳ್ಳಲು ನಮ್ಮ ಆಹಾರ ವಿಹಾರವನ್ನು ಬದಲಿಸಬೇಕಾಗುತ್ತದೆ. ಇದರಿಂದ ಆರೋಗ್ಯದಿಂದಿರಲು ಸಾಧ್ಯವಾಗುತ್ತದೆ.

ಇಲ್ಲಿ ಒಂದು ಋತುವಿನಿಂದ ಇನ್ನೊಂದು ಋತುವಿಗೆ ಪ್ರವೇಶಿಸುವಾಗ ವಾತಾವರಣ ಬದಲಾದಂತೆ ನಮ್ಮ ದೇಹದಲ್ಲಿಯೂ ಕೂಡ ಅನೇಕ ತರದ ಬದಲಾವಣೆಗಳು ಆಗುತ್ತದೆ. ಇದನ್ನು ಹೊಂದಿಕೊಳ್ಳಲು ದೇಹವು ಕಷ್ಟಪಡುತ್ತದೆ. ಇಲ್ಲಿ ನಾವು ಜಾಗೃತರಾಗಿರಬೇಕು ಏಕೆಂದರೆ ಈ ಸಮಯದಲ್ಲಿ ನಮ್ಮ ದೇಹಬಲ ಕ್ಷೀಣವಾಗಿರುತ್ತದೆ. ಈ ಸಮಯವನ್ನು ಋತುಸಂಧಿ ಎಂದು ಆಯುರ್ವೇದದಲ್ಲಿ ಹೇಳಿದೆ.

ಹಿಂದಿನ ಋತುವಿನ ಕೋನೆಯ ಏಳಯ ದಿನಗಳು ಹಾಗೂ ಮುಂದಿನ ಋತುವಿನ ಮೊದಲ ಏಳು ದಿನಗಳು ಒಟ್ಟು ಹದಿನಾಲ್ಕು ದಿನಗಳ ಕಾಲ ಋತು ಸಂಧಿಕಾಲ ಎಂದು ಹೇಳಲಾಗಿದೆ. ಇಡೀ ವರ್ಷದಲ್ಲಿ ಒಟ್ಟು ಆರು ಋತು ಸಂಧಿಕಾಲ ಬರುತ್ತದೆ. ಪ್ರತಿ ಎರಡು ಋತುಗಳ ಮದ್ಯದಲ್ಲಿ ಒಂದು ಋತು ಸಂಧಿಕಾಲ ಹೀಗೆ ಒಟ್ಟು ಆರು ಋತುಗಳಿಗೆ ಆರು ಋತುಸಂಧಿ ಬರುತ್ತದೆ. ಉದಾಹರಣೆಗೆ ಶಿಶಿರ ಹಾಗೂ ವಸಂತ ಋತುವಿನ ಮಧ್ಯೆ ಒಂದು ಋತುಸಂಧಿ, ವಸಂತ ಹಾಗೂ ಗ್ರೀಷ್ಮ ಋತುವಿನ ಮಧ್ಯ ಒಂದು ಋತುಸಂಧಿ, ಗ್ರೀಷ್ಮಾ ಹಾಗೂ ವರ್ಷಾ ಋತುವಿನ ಮಧ್ಯೆ ಒಂದು ಋತುಸಂಧಿ, ವರ್ಷಾ ಹಾಗೂ ಶರದ್ ಋತುವಿನ ಮಧ್ಯೆ ಒಂದು ಋತುಸಂಧಿ, ಶರದ್ ಋತು ಹಾಗೂ ಹೇಮಂತ ಋತುವಿನ ಮಧ್ಯೆ ಒಂದು ಋತುಸಂಧಿ ಹಾಗೂ ಹೇಮಂತ ಹಾಗೂ ಶಿಶಿರ ಋುತುವಿನ ಮಧ್ಯೆ ಒಂದು ಋತು ಸಂಧಿ. ಹೀಗೆ ಒಟ್ಟು ಆರು ಋತು ಸಂಧಿಗಳು.

ಈ ಸಂಧಿಕಾಲದಲ್ಲಿ ನಮ್ಮ ದೇಹಕ್ಕೆ ಒಂದೇ ಸಲಕ್ಕೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ. ಆದ್ದರಿಂದ ಹಿಂದಿನ ಋತುಚರ್ಯದ ಅಭ್ಯಾಸವನ್ನು ಕ್ರಮೇಣ ಬಿಡುತ್ತಾ ಮುಂದಿನ ಋತುಚರ್ಯದ ನಿಯಮಗಳನ್ನು ಕ್ರಮೇಣ ಅನುಸರಿಸಬೇಕು. ಹೀಗೆ ಮಾಡುವುದರಿಂದ ನಮ್ಮ ದೇಹವು ಈ ವಾತಾವರಣದ ಪರಿವರ್ತನೆಯ ಕಾಲದಲ್ಲಿ ಆರೋಗ್ಯದಿಂದಿರಲು ಸಾಧ್ಯವಾಗುವುದು. ಈ ಕಾಲದಲ್ಲಿ ನಮ್ಮ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಪ್ರತಿ ಋತುಸಂಧಿ ಕಾಲದಲ್ಲಿ ನಮ್ಮನ್ನು ನಾವು ರೋಗದಿಂದ ರಕ್ಷಿಸಬೇಕಾಗುತ್ತದೆ. ಆದ್ದರಿಂದ ಈ ನಿಯಮಗಳನ್ನು ಪಾಲಿಸುವುದು ಅಗತ್ಯ. ಆಗ ನಮ್ಮ ದೇಹವು ವಾತಾವರಣಕ್ಕೆ ತಕ್ಕಂತೆ ಹೊಂದಿಕೊಳ್ಳಲು ಸುಲಭವಾಗುವುದು.
ಋತುಸಂಧಿಯ ಕಾಲದಲ್ಲಿ ಆದಷ್ಟು ಬಿಸಿ ನೀರನ್ನು ಬಿಸಿ ಆಹಾರವನ್ನು ಸೇವಿಸಿರಿ. ಅಮೃತಬಳ್ಳಿಯ ಕಷಾಯ, ತುಳಸಿಯ ಕಷಾಯ, ಅರಶಿನ ಹಾಲು ಕುಡಿಯಿರಿ. ಆದಷ್ಟು ಮನೆಯಲ್ಲೇ ಮಾಡಿದ ಆಹಾರವನ್ನು ಸೇವಿಸಿ. ಜಂಕ್ ಫುಡ್, ಐಸ್ ಕ್ರೀಮ್ ಫ್ರಿಜ್ನಲ್ಲಿಟ್ಟ ಆಹಾರವನ್ನು ಸೇವಿಸಬೇಡಿ. ಸುಲಭವಾಗಿ ಜೀರ್ಣವಾಗುವಂತಹ ಆಹಾರಗಳನ್ನು ಸೇವಿಸಿ. ಧ್ಯಾನ, ಪ್ರಾಣಾಯಾಮ, ಯೋಗಾಸನಗಳನ್ನು ಅಭ್ಯಾಸ ಮಾಡಿರಿ.
ಈ ವಿಷಯಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಆರೋಗ್ಯದಿಂದಿರಿ.

ಡಾ. ಹರ್ಷಾ ಕಾಮತ್

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!