Saturday, December 4, 2021
spot_img
Homeಅಂಕಣವೈದ್ಯರ ದಿನಾಚರಣೆ ವಿಶೇಷ - ಭಾರತೀಯ ವೈದ್ಯಕೀಯ ಸಂಘದಿಂದ ಕಾರ್ಕಳದ ಆಸ್ಪತ್ರೆಗಳಿಗೆ ಆಮ್ಲಜನಕ ಸಾಂದ್ರೀಕರಣ

ವೈದ್ಯರ ದಿನಾಚರಣೆ ವಿಶೇಷ – ಭಾರತೀಯ ವೈದ್ಯಕೀಯ ಸಂಘದಿಂದ ಕಾರ್ಕಳದ ಆಸ್ಪತ್ರೆಗಳಿಗೆ ಆಮ್ಲಜನಕ ಸಾಂದ್ರೀಕರಣ

ಭಾರತದ ಅಪ್ರತಿಮ ವೈದ್ಯರಲ್ಲಿ ಓರ್ವರಾದ ಭಾರತ ರತ್ನ ಡಾ. ಬಿದಾನ್‌ ಚಂದ್ರ ರಾಯ್‌ (ಬಿ.ಸಿ. ರಾಯ್) ಅವರ ಜನ್ಮದಿನಾಚರಣೆಯನ್ನು ದೇಶದಾದ್ಯಂತ ವೈದ್ಯರ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಡಾ. ಬಿದಾನ್‌ ಚಂದ್ರ ರಾಯ್‌ ಅವರು 1882 ಜುಲೈ 1ರಂದು ಬಿಹಾರದ ಪಾಟ್ನ ನಗರದಲ್ಲಿ ಜನಿಸಿದ್ದರು. ಸಮಾಜ ಸುಧಾರಕರಾಗಿ, ಶ್ರೇಷ್ಠ ವೈದ್ಯರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ ಹಾಗೂ ರಾಜಕೀಯ ಮುತ್ಸದ್ದಿಯಾಗಿ ಬಹಳಷ್ಟು ಪ್ರಸಿದ್ಧಿ ಪಡೆದ ಬಿ.ಸಿ. ರಾಯ್‌ ಅವರು 1930ರ ಅವಧಿಯಲ್ಲಿ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಭಾರತೀಯ ವೈದ್ಯಕೀಯ ಪರಿಷತ್‌ ಸಂಸ್ಥಾಪಕ ಅಧ್ಯಕ್ಷರಾಗಿದ್ದ ರಾಯ್‌ 1948ರಿಂದ 1962ರ ವರೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಪದವಿ ಅಲಂಕರಿಸಿದ್ದರು. ಆ ಮೂಲಕ ನವ ಪಶ್ಚಿಮ ಬಂಗಾಳ ನಿರ್ಮಾತೃರಾದರು.

ಜುಲೈ 1ರಂದು ಜನಿಸಿದ ಬಿದಾನ್‌ ಚಂದ್ರ ಅವರು 1962 ಜುಲೈ 1ರಂದು ನಿಧನರಾದರು. ಅಸಾಧಾರಣ ವೈದ್ಯರಾಗಿದ್ದ ಅವರ ಗಣನೀಯ ಸೇವೆಯನ್ನು ಪರಿಗಣಿಸಿ 1961 ಫೆ. 4ರಂದು ಕೇಂದ್ರ ಸರಕಾರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತು.

ಓರ್ವ ಮಾದರಿ ವೈದ್ಯರಾಗಿ ತಮ್ಮ ಬದುಕು ಸವೆಸಿದ ಅವರ ನೆನಪಿನಲ್ಲೇ ರಾಷ್ಟೀಯ ವೈದ್ಯರ ದಿನ ಆಚರಿಸಬೇಕು ಎಂದು ನಿರ್ಧರಿಸಿದ ಭಾರತ ಸರಕಾರ ಜುಲೈ 1ನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲು ಕರೆಕೊಟ್ಟಿತು. ಸ್ವಾತಂತ್ರ್ಯ ಹೋರಾಟದಲ್ಲೂ ಭಾಗಿಯಾಗಿದ್ದ ರಾಯ್‌ ಅವರು ಕೆಲ ಕಾಲ ಮಹಾತ್ಮ ಗಾಂಧೀಜಿಯ ಕುಟುಂಬ ವೈದ್ಯರಾಗಿಯೂ ಸೇವೆ ಸಲ್ಲಿಸಿರುವುದು ವಿಶೇಷ.

ಕೊರೊನಾ ವೈರಸ್‌ ಕಾರಣದಿಂದ ಇಡೀ ವಿಶ್ವವೇ ಕಂಗಾಲಾಗಿರುವ ಈ ಸಂದರ್ಭದಲ್ಲಿ ವೈದ್ಯರ ಸೇವೆ ಬೆಲೆಕಟ್ಟಲಾಗದ್ದು. ನನ್ನ ಐಎಂಎ ರಾಜ್ಯ ಅಧ್ಯಕ್ಷ ಅವಧಿಯಲ್ಲಿ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಮುತುವರ್ಜಿ ವಹಿಸಲಿದ್ದೇನೆ. ಭಾರತೀಯ ವೈದ್ಯಕೀಯ ಸಂಘದಿಂದ ಕಾರ್ಕಳ ತಾಲೂಕಿನ ಆಸ್ಪತ್ರೆಗಳಿಗೆ 25 ಆಮ್ಲಜನಕ ಸಾಂದ್ರೀಕರಣ ಯಂತ್ರ ವಿತರಣೆ ಮಾಡುತ್ತೇವೆ. ಎಲ್ಲ ವೈದ್ಯರಿಗೂ ವೈದ್ಯರ ದಿನಾಚರಣೆ ಶುಭಾಶಯಗಳು.

ಡಾ. ಸುರೇಶ್‌ ಕುಡ್ವ

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!