Wednesday, December 7, 2022
spot_img
Homeದೇಶಎಲ್‌ಪಿಜಿ ಸಿಲಿಂಡರ್‌ ಬೆಲೆ ರೂ. 25.50 ಏರಿಕೆ

ಎಲ್‌ಪಿಜಿ ಸಿಲಿಂಡರ್‌ ಬೆಲೆ ರೂ. 25.50 ಏರಿಕೆ

ನವದೆಹಲಿ: ಇಂದಿನಿಂದ ಜಾರಿಗೆ ಬರುವಂತೆ ಸಬ್ಸಿಡಿ ಸಹಿತ ಎಲ್‌ಪಿಜಿಯ ಬೆಲೆ ಒಂದು ಸಿಲಿಂಡರ್‌ಗೆ 25.50 ರೂ. ಹೆಚ್ಚಳವಾಗಿದೆ. ಕೊರೋನಾದಿಂದ ಸಂಕಷ್ಟದಲ್ಲಿರುವ ಸಾರ್ವಜನಿಕರಿಗೆ ಇದರಿಂದಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಪ್ರಸ್ತುತ 14.2 ಕೆಜಿ ತೂಕದ ಗೃಹಬಳಕೆ ಸಿಲಿಂಡರ್‌ಗಳಿಗೆ ದೆಹಲಿಯಲ್ಲಿ 834.50 ರೂ. ಇದೆ.

ಇನ್ನು 19 ಕೆಜಿ ಸಿಲಿಂಡರ್‌ನ ಬೆಲೆಯನ್ನು ಸಹ 76 ರೂ. ಹೆಚ್ಚಿಸಲಾಗಿದ್ದು ದೆಹಲಿಯಲ್ಲಿ 1,550 ರೂ. ನಿಗದಿಯಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.

ದೇಶದಲ್ಲಿ ಪ್ರತಿ ತಿಂಗಳ ಪ್ರಾರಂಭದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಪರಿಶೀಲನೆಗೆ ಒಳಪಡುತ್ತದೆ.

2 COMMENTS

  1. ವಾಹನ ಮಾಲಕರ ಅಗತ್ಯಕ್ಕೆ ಹೊಂದಿಕೊಂಡು ಪೆಟ್ರೋಲ್ , ಡೀಸೆಲ್ ಕೊಡುವ ಕಾರ್ಡುಗಳು ಸದ್ಯ ಬರ ಬಹುದು. ನೌಕರಿಗೆ ಹೋಗಿಬರಲು, ವ್ಯಾಪಾರಕ್ಕೆ ,ಶಾಲೆ,ಕಾಲೇಜುಗಳಿಗೆ ಮತ್ತು ಇತರ ಅಗತ್ಯಗಳಿಗೆ ಅನುಗುಣವಾಗಿ ತೈಲ ಕಾರ್ಡುಗಳು ಬಂದು ಕಮ್ಮಿ ದರದಲ್ಲಿ ಕೊಟ್ಟು ಅನಗತ್ಯ ಅಡ್ಡದುವವರಿಗೆ ಹೆಚ್ಚಿನ ದರ ಕೊಡಬೇಕಾಗಿ ಬರ ಬಹುದು.

LEAVE A REPLY

Please enter your comment!
Please enter your name here

Most Popular

error: Content is protected !!