Saturday, July 24, 2021
spot_img
HomeUncategorizedಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ಕೆ ಸಹಕಾರಿ ಬ್ಯಾಂಕಿನಿಂದ 1 ಲಕ್ಷ ರೂ. ದೇಣಿಗೆ

ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ಕೆ ಸಹಕಾರಿ ಬ್ಯಾಂಕಿನಿಂದ 1 ಲಕ್ಷ ರೂ. ದೇಣಿಗೆ

ಕಾರ್ಕಳ : ಇಲ್ಲಿನ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ವತಿಯಿಂದ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರು ಕೊಡಮಾಡಿದ ರೂ. ಒಂದು ಲಕ್ಷ ದೇಣಿಗೆಯನ್ನು ದೇವಾಲಯದ ಆವರಣದಲ್ಲಿ ಹಸ್ತಾಂತರಿಸಲಾಯಿತು.
 ಬ್ಯಾಂಕ್ ಪ್ರತಿನಿಧಿ ಸುನೀಲ್ ಕುಮಾರ್ ಬಜಗೋಳಿ ಅವರು ದೇವಸ್ಥಾನದ ಆಡಳಿತ ಮೊಕ್ತೇಸರ ಗಿರೀಶ್ ರಾವ್ ಅವರಿಗೆ ಚೆಕ್ಕನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರಕಾಶ್ ಜಾಧವ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಶುಭದ ರಾವ್, ಗೌರವಾಧ್ಯಕ್ಷ ವಾಮನ್ ರಾವ್, ಮೊಕ್ತೇಸರರಾದ ಶೇಖರ್ ರಾವ್, ಸುಧೀಂದ್ರರಾವ್, ಪ್ರಕಾಶ್ ಪವಾರ್, ಹರೀಶ್ ಮೋರೆ, ವಿರೇಂದ್ರ ರಾವ್, ಸುರೇಂದ್ರ ರಾವ್ ಮೊದಲಾದವರು ಉಪಸ್ಥಿತಿತರಿದ್ದರು. 

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!