Saturday, December 4, 2021
spot_img
Homeಸ್ಥಳೀಯ ಸುದ್ದಿಹೆಬ್ರಿ: ಕೋಳಿ ಅಂಕಕ್ಕೆ ದಾಳಿ

ಹೆಬ್ರಿ: ಕೋಳಿ ಅಂಕಕ್ಕೆ ದಾಳಿ

ಹೆಬ್ರಿ: ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಕೋಳಿ ಅಂಕ ನಡೆಸುತ್ತಿರುವಲ್ಲಿ ದಾಳಿ ನಡೆಸಿದ ಹೆಬ್ರಿ ಪೊಲೀಸ್ ಠಾಣೆಯ ಪಿಎಸ್‌ಐ ಮಹೇಶ ಟಿ.ಎಂ ಆರೋಪಿಗಳನ್ನು ಬಂಧಿಸಿ ಪರಿಕರಗಳನ್ನು ವಶಪಡಿಸಿಕೊಂಡ ಘಟನೆ ಜೂ.30 ರಂದು ನಡೆದಿದೆ. 
 ಬ್ರಹ್ಮಾವರ ತಾಲೂಕು ನಾಲ್ಕೂರು ಗ್ರಾಮದ ಮಾರಾಳಿ ಕಂಬ್ಲಿಬೆಟ್ಟು ಎಂಬಲ್ಲಿ ಸುಮಾರು ೭ ರಿಂದ ೮ ಜನರು ಭಾಗವಹಿಸಿ ಕೋಳಿ ಅಂಕ ನೆಡಸುತ್ತಿದ್ದು ಅವರಲ್ಲಿ ಚಾರಾ ಗ್ರಾಮ ಕಾರಾಡಿಯ ಪ್ರದೀಪ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಅಂಡಾರು ಗ್ರಾಮ ಮುಟ್ಲಪಾಡಿಯ ಕೀರ್ತನ್, ನಾಲ್ಕೂರು ಗ್ರಾಮ ಮಾರಾಳಿ ಕಂಬ್ಲಿಬೆಟ್ಟುವಿನ ರಾಜೇಶ್ ಬಂಧಿತರು. ಉಳಿದವರು ತಪ್ಪಿಸಿಕೊಂಡಿದ್ದು ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳಿಂದ ೪ ಕೋಳಿ ಹುಂಜ, ನಗದು ರೂ. ೧,೧೨೦ ಹಾಗೂ ಕೋಳಿಗಳಿಗೆ ಕಟ್ಟಿದ ಎರಡು ಬಾಳುನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!