Saturday, December 4, 2021
spot_img
Homeಅಂಕಣವೈದ್ಯರ ಮೇಲೆ ಕನಿಷ್ಠ ದಯೆಯಿರಲಿ… ಮಹಾತ್ಮ ಗಾಂಧಿ ಅಸಹಕಾರ ಚಳುವಳಿಯಲ್ಲಿ ಡಾ. ಬಿ.ಸಿ. ರಾಯ್‌

ವೈದ್ಯರ ಮೇಲೆ ಕನಿಷ್ಠ ದಯೆಯಿರಲಿ… ಮಹಾತ್ಮ ಗಾಂಧಿ ಅಸಹಕಾರ ಚಳುವಳಿಯಲ್ಲಿ ಡಾ. ಬಿ.ಸಿ. ರಾಯ್‌

ಭಾರತದಲ್ಲಿ ಜುಲೈ 1ನ್ನು ವೈದ್ಯರ ದಿನ ಎಂದು ಆಚರಿಸಲಾಗುತ್ತಿದೆ. ಡಾ. ಬಿದಾನ್‌ ಚಂದ್ರ ರಾಯ್‌ ಅವರ ಜನ್ಮ ಮತ್ತು ಮರಣ ಹೊಂದಿದ ದಿನವಾದ ಜುಲೈ 1ನ್ನು ಅವರ ಸವಿನೆನಪಿಗಾಗಿ ಮತ್ತು ಜನ ಸೇವೆಯಲ್ಲಿ ಅವಿರತವಾಗಿ ದುಡಿಯುವ ವೈದ್ಯರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ವೈದ್ಯರ ದಿನ ಎಂದು ಆಚರಿಸಲಾಗುತ್ತಿದೆ. ಡಾ. ಬಿ.ಸಿ. ರಾಯ್‌ ರವರು ಮಹಾತ್ಮ ಗಾಂಧಿಯವರ ಅಸಹಕಾರ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಆ ಕಾಲದಲ್ಲಿ ಎಫ್‌ಆರ್‌ಸಿಎಸ್‌ ಮತ್ತು ಎಂಆರ್‌ಸಿಪಿ ಪದವಿ ಪಡೆದ ಕೆಲವೇ ಕೆಲವು ವೈದ್ಯರಲ್ಲಿ ಓರ್ವರಾಗಿದ್ದರು.

ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದ ಡಾ. ಬಿದಾನ್‌ ಚಂದ್ರ ರಾಯ್‌ ಮುಖ್ಯಮಂತ್ರಿ ಅಧಿಕಾರಾವಧಿಯಲ್ಲೂ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಇವರ ಸವಿನೆನಪಿಗಾಗಿ 1991ರಿಂದ ಜುಲೈ 1ನ್ನು ವೈದ್ಯರ ದಿನವೆಂದು ಆಚರಿಸಲಾಗುತ್ತಿದೆ.

Hands of the doctor and patient

“ಕುಟುಂಬ ವೈದ್ಯರಿಂದ ಭವಿಷ್ಯದ ನಿರ್ಮಾಣ”
ಪ್ರತಿ ವರ್ಷ ವೈದ್ಯರ ದಿನಾಚರಣೆಗೆ ಉದ್ಘೋಷ ವಾಕ್ಯ ಘೋಷಣೆ ಮಾಡಲಾಗುತ್ತಿದೆ. ಈ ವರ್ಷದ ಉದ್ಘೋಷ ವಾಕ್ಯ “ಕುಟುಂಬ ವೈದ್ಯರಿಂದ ಭವಿಷ್ಯದ ನಿರ್ಮಾಣ” . 2021ರ ವೈದ್ಯರ ದಿನಾಚರಣೆಯು ಕೋವಿಡ್‌ ಮಹಾಮಾರಿಯ ಸಮಯದಲ್ಲಿ ತನ್ನ ಕುಟುಂಬವನ್ನೂ ಲೆಕ್ಕಿಸದೇ ರೋಗಿಗಳ ಆರೈಕೆಯಲ್ಲಿ ಹಗಲಿರುಳು ಶ್ರಮಿಸಿದ ಅಸಂಖ್ಯಾತ ವೈದ್ಯರಿಗೆ ಮೀಸಲಿರಿಸಲಾಗಿದೆ. ಈ ಮಾಹಾಮಾರಿಯಿಂದಾಗಿ ಇಡೀ ಜಗತ್ತಿಗೆ ವೈದ್ಯರ ಮೌಲ್ಯಕ್ಕೆ ವಿಶೇಷ ಮನ್ನಣೆ ದೊರೆತಿದೆ.
ಇವೆಲ್ಲದರ ನಡುವೆ ಇತ್ತೀಚೆಗೆ ವೈದ್ಯರ ಮೇಲೆ ಹಲ್ಲೆ ನಡೆಯುತ್ತಿರುವುದು ಜಾಸ್ತಿಯಾಗಿದೆ. ವರ್ಷದ ಹಿಂದೆ ಕೋಲ್ಕತ್ತದಲ್ಲಿ ಹಿರಿಯ ವೈದ್ಯರ ಮೇಲಿನ ಹಲ್ಲೆಯಿಂದ ಹಿಡಿದು ಇತ್ತೀಚೆಗೆ ಶಿವಮೊಗ್ಗದಲ್ಲಿ ಮಕ್ಕಳ ತಜ್ಞರ ಮೇಲೆ ನಡೆದ ಮಾರಣಾಂತಿಕ ಹಲ್ಲೆವರೆಗೆ ಹಲವು ಬಾರಿ ವೈದ್ಯರ ಮೇಲೆ ಹಲ್ಲೆ ನಡೆದಿದೆ. ಇದನ್ನು ಗಮನಿಸಿದಾಗ ಈ ಹಲ್ಲೆಗಳಿಗೆ ಕಾರಣಗಳು ಹಲವು. ವೈದ್ಯರ ಮತ್ತು ರೋಗಿಗಳ ಸಂಬಂಧ ದೊಡ್ಡ ದೊಡ್ಡ ಉದ್ಯಮಿಗಳಿಂದ ಆಸ್ಪತ್ರೆ ಸ್ಥಾಪನೆ ಮತ್ತು ಅಲ್ಲಿನ ಅತಿಯಾದ ಶುಲ್ಕ, ಮಾದ್ಯಮಗಳಿಂದ ಪ್ರೇರಣೆ, ಸರಕಾರಿ ಆಸ್ಪತ್ರೆಳಲ್ಲಿ ರೋಗಿಗಳ ದಟ್ಟಣೆ, ವೈದ್ಯರ ಕೊರತೆ. ಇದರ ಪರಿಣಾಮವಾಗಿ ಸಣ್ಣ ಆಸ್ಪತೆಗಳಲ್ಲಿ ವೈದ್ಯರು ಯಾವುದೇ ಗಂಭೀರ ಕಾಯಿಲೆಯ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಹಿಂಜರಿಯುತ್ತಾರೆ. ಆದ್ದರಿಂದ ಗಂಭೀರ ಪ್ರಕರಣಗಳು ಹೆಚ್ಚು ಸೌಲಭ್ಯವಿರುವ ದೂರದ ಆಸ್ಪತೆಗೆ ತೆರಳುವುದು ಅನಿವಾಯರ್ವಾಗಿದೆ. ಕಾಯಿಲೆಯ ಸ್ವರೂಪವನ್ನು ಕಂಡುಹಿಡಿಯಲು ರಕ್ತ ಪರೀಕ್ಷೆ, ಇತರ ಟೆಸ್ಟ್‌ ಮಾಡಿಸುವುದು ಅನಿವಾರ್ಯವಾಗಿದೆ. ಇದರಿಂದ ರೋಗಿಗಳ ಮೇಲೆ ಅಧಿಕ ವೆಚ್ಚ ಬೀಳುವುದು.
ಅದನ್ನು ಭರಿಸಲು ಸಾಧ್ಯವಾಗದ ಸಂದರ್ಭ ಗಲಾಟೆಗಿಳಿಯುತ್ತಾರೆ. ಇದನ್ನೆಲ್ಲ ತಡೆಯಬೇಕಾದರೆ ವೈದ್ಯರ ರಕ್ಷಣೆಗಿರುವ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು ವೈದ್ಯರು ಭಯರಹಿತ ವಾತಾವರಣದಲ್ಲಿ ಕಾರ್ಯನಿರ್ವಹಿಸುವಂತೆ ಸರಕಾರ ಮಾಡಬೇಕಾಗಿದೆ.
ಸಂಸ್ಕೃತದಲ್ಲಿ ಒಂದು ನಾಣ್ಣುಡಿಯಿದೆ, ಶರೀರೇ ಜರ್ಜರಿಭೂತೆ ವ್ಯಾಧಿಗ್ರಸ್ಥೆ ಕಲೇವರೇ
ಔಷಧಿಂ ಜಾಹ್ನವಿ ತೋಯಂ
ವೈದ್ಯೋ ನಾರಾಯಣೋ ಹರಿ

ಅಂದರೆ ಶರೀರವು ವ್ಯಾಧಿಯಿಂದ ಜರ್ಜರಿತವಾಗಿ ಕಳೇಬರದಂತಾಗಲು ವೈದ್ಯರು ಯಾವುದೇ ಚಿಕಿತ್ಸೆ ನೀಡಲು ಆಗುವುದಿಲ್ಲ ಎಂದು ಹೇಳಿದಾಗ ದೇವರಿಗೆ ಅಭಿಷೇಕ ಮಾಡಿದ ತೀರ್ಥವು ಔಷಧಿ ಮತ್ತು ಭಗವಾನ್‌ ನಾರಾಯಣನೇ ವೈದ್ಯನು ಎಂಬುದಾಗಿದೆ. ಹೊರತು ವ್ಯದ್ಯರು ದೇವರು ಎಂದಲ್ಲ. ವೈದ್ಯರು ಎಂದೂ ದೇವರಾಗಲು ಸಾಧ್ಯವಿಲ್ಲ. ಆದರೆ, ಅವನು ಎಲ್ಲರಂತೆ ಮನುಷ್ಯ ಎಂದು ತಿಳಿದುಕೊಂಡು ಅವನ ಮೇಲೂ ಮನುಷ್ಯತ್ವನ್ನು ಎಲ್ಲರೂ ತೋರಿಸಿದರೆ ಅದುವೇ ಹಗಲಿರುಳು ರೋಗಿಗಳ ಕ್ಷೇಮಕ್ಕಾಗಿ ತನ್ನ ಜೀವನವನ್ನು ಸವೆಸುವ ವೈದ್ಯರಿಗೆ ವೈದ್ಯರ ದಿನಾವರಣೆ ದಿನದಂದು ಕೊಡುವ ಅತಿ ದೊಡ್ಡ ಉಡುಗೊರೆಯಾಗಿದೆ.

ಇದನ್ನು ಇನ್ನು ಮುಂದಾದರೂ ಆಶಿಸೋಣವೇ ?

ಡಾ. ಜ್ಞಾನೇಶ್‌ ಕಾಮತ್‌

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!