Saturday, December 4, 2021
spot_img
Homeಸ್ಥಳೀಯ ಸುದ್ದಿಹೆಬ್ರಿ : ಅಕ್ರಮ-ಸಕ್ರಮ ಅರ್ಜಿ ಮುಕ್ತಾಯ ನೋಟಿಸ್‌- ಕಾಂಗ್ರೆಸ್‌ ಅಸಮಾಧಾನ

ಹೆಬ್ರಿ : ಅಕ್ರಮ-ಸಕ್ರಮ ಅರ್ಜಿ ಮುಕ್ತಾಯ ನೋಟಿಸ್‌- ಕಾಂಗ್ರೆಸ್‌ ಅಸಮಾಧಾನ

ಹೆಬ್ರಿ : ಅಕ್ರಮವಾಗಿ ಮನೆ ಕಟ್ಟಿ ಕುಳಿತವರಿಗೆ ಜಾಗದ ಹಕ್ಕುಪತ್ರ ನೀಡಲು ೯೪ ಸಿ ಅನ್ವಯ ಸರಕಾರ ೨೦೨೨ರ ವರೆಗೆ ಅವಕಾಶ ನೀಡಿದ್ದು, ಹೆಬ್ರಿಯ ಕೆಲವೆಡೆ ಅಕ್ರಮ ಸಕ್ರಮ ಮತ್ತು ೯೪ಸಿ ಅರ್ಜಿಗಳನ್ನು ಡೀಮ್ಡ್‌ ಅರಣ್ಯ ಎಂದು ತಾತ್ಕಾಲಿಕವಾಗಿ ಮುಕ್ತಾಯಗೊಳಿಸಲಾಗಿದೆ ಎಂದು ಅರ್ಜಿದಾರರಿಗೆ ನೋಟಿಸ್‌ ನೀಡಲಾಗಿದೆ. ನೋಟಿಸನ್ನು ಮರು ಪರಿಶೀಲನೆ ನಡೆಸಬೇಕು ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ನೇತೃತ್ವದ ತಂಡ ಮಂಗಳವಾರ ಹೆಬ್ರಿ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿತು.

ಈ ವೇಳೆ ಮಾತನಾಡಿದ ಮಂಜುನಾಥ ಪೂಜಾರಿ ಅವರು 94 ಸಿ.ಯಡಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಬೇಕು. ಡೀಮ್ಡ್‌ ಫಾರೆಸ್ಟ್‌ ಅನ್ನುವ ಕಾರಣಕ್ಕಾಗಿ ಫಲಾನುಭವಿಗಳ ಅರ್ಜಿ ನಿರಾಕರಣೆ ಮಾಡಬಾರದು. ಈ ರೀತಿ ಮಾಡಿದಲ್ಲಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಬಿಜೆಪಿಯವರು ಅವರಿಗೆ ಬೇಕಾದವರಿಗೆ ಹಕ್ಕುಪತ್ರ ಕೊಡಿಸುತ್ತಿದ್ದಾರೆ ಎಂದು ಮಂಜುನಾಥ ಪೂಜಾರಿ ದೂರಿದರು.

ಕೊರೊನಾ ಬರುವುದಿಲ್ಲವೆ ?
ಜಿಲ್ಲಾಧಿಕಾರಿಯವರ ಖಡಕ್‌ ಆದೇಶದ ಬಳಿಕವೂ ಜಿಲ್ಲೆಯಲ್ಲಿ ಶಾಸಕರು, ಸಚಿವರು ೪೦೦, ೫೦೦ ಮಂದಿಯನ್ನು ಸೇರಿಸಿ ಸಭೆ ನಡೆಸುತ್ತಾರೆ. ಅವರಿಗೆ ಒಂದು ನೀತಿ, ಜನಸಾಮಾನ್ಯರಿಗೆ ಒಂದು ನೀತಿ. ಕೋವಿಡ್‌ಗೆ ಸಂಬಂಧಿಸಿದ ಸಭೆ ನಡೆಸಲಿ. ಇತರ ಸಭೆ ನಡೆಸುವುದು ಯಾಕೆ ? ಇತರೆ ಸಭೆ ನಡೆಸಿದ್ದಲ್ಲಿ ಕೊರೊನಾ ಬರುವುದಿಲ್ಲವೆ ಎಂದು ಮಂಜುನಾಥ ಪೂಜಾರಿ ಪ್ರಶ್ನಿಸಿದರು.

ಜನರ ಹಕ್ಕು ಕಸಿಯಬೇಡಿ – ಸಾಧ್ಯವಾದರೆ ಸಹಾಯ ಮಾಡಿ – ನೀರೆ ಕೃಷ್ಣ ಶೆಟ್ಟಿ
ಆಡಳಿತ ನಡೆಸುವವರು ಹಕ್ಕುಪತ್ರ ಕೊಡುವಾಗ ಪಕ್ಷ ನೋಡದೇ ಅರ್ಹತೆ ನೋಡಿ ಕೊಡಿ. ಕೊರೊನಾ ಸಂಕಷ್ಟ ಕಾಲದಲ್ಲಿ ಹೆಬ್ರಿಯ ಹಲವು ಮಂದಿಗೆ ಕಂದಾಯ ಇಲಾಖೆ ನೋಟಿಸ್‌ ನೀಡಿರುವುದನ್ನು ಕಂಡರೆ ದು:ಖ ಆಗುತ್ತಿದೆ. ಜಮೀನಿನ ವಿಚಾರದಲ್ಲಿ ಜನರಿಗೆ ಅನ್ಯಾಯವಾದರೆ ತೀವ್ರ ಹೋರಾಟ ನಡೆಸುತ್ತೇವೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ತಿಳಿಸಿದರು.
ನೋಟಿಸ್‌ ಪಡೆದ ಹಲವರ ಪೈಕಿ ಬಲ್ಲೆಮನೆ ಸುಧಾಕರ ಶೆಟ್ಟಿ ಮಾತನಾಡಿ, ದಯಮಾಡಿ ನಮಗೆ ಹಕ್ಕುಪತ್ರ ನೀಡಿ. ನಮ್ಮ ಹಕ್ಕು ಕಸಿಯಬೇಡಿ ಎಂದು ತಹಶೀಲ್ದಾರ್ ಅವರಲ್ಲಿ ಮನವಿ ಮಾಡಿದರು.

ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಕಬ್ಬಿನಾಲೆ ರಂಜನಿ ಹೆಬ್ಬಾರ್‌, ಕಾಂಗ್ರೆಸ್‌ ವಿವಿಧ ಘಟಕಗಳ ಪ್ರಮುಖರಾದ ಲಕ್ಷ್ಮಣ ಆಚಾರ್‌, ಶಿವರಾಮ ಪೂಜಾರಿ, ಶಶಿಕಲಾ ಡಿ. ಪೂಜಾರಿ, ಎಚ್.ಬಿ. ಸುರೇಶ್‌, ಎಚ್. ಜನಾರ್ಧನ್‌, ಕನ್ಯಾನ ಸಂತೋಷ ನಾಯಕ್‌, ಅಶ್ವಿನಿ ಮುದ್ರಾಡಿ, ಮುನಿಯಾಲು ಉದಯ ನಾಯ್ಕ್‌, ನಾಗರಾಜ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.‌

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!