Thursday, August 5, 2021
spot_img
Homeಸ್ಥಳೀಯ ಸುದ್ದಿಹಾಲ್‌ ನಲ್ಲಿ ಮದುವೆ ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ ಅನುಮತಿ ತಹಶೀಲ್ದಾರ್‌ ಅನುಮತಿ ಕಡ್ಡಾಯ

ಹಾಲ್‌ ನಲ್ಲಿ ಮದುವೆ ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ ಅನುಮತಿ ತಹಶೀಲ್ದಾರ್‌ ಅನುಮತಿ ಕಡ್ಡಾಯ

ಕಾರ್ಕಳ : ವಿವಾಹ ಸಮಾರಂಭ 40 ಮಂದಿಯನ್ನು ಮೀರದಂತೆ ಹಾಲ್‌, ಹೋಟೆಲ್‌, ರೆಸಾರ್ಟ್‌ಗಳಲ್ಲಿ ನಡೆಸಲು ಉಡುಪಿ ಜಿಲ್ಲಾಡಳಿತ ಅನುಮತಿ ನೀಡಿದೆ. ವಿವಾಹ ಸಮಾರಂಭ ಆಯೋಜಿಸುವವರು ತಾಲೂಕು ತಹಶೀಲ್ದಾರ್‌ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಅರ್ಜಿ ಸ್ವೀಕೃತಿಯ ಮೇರೆಗೆ ವಿವಾಹ ಕಾರ್ಯಕ್ರಮ ನಡೆಸುವವರಿಗೆ 40 ಪಾಸ್‌ಗಳನ್ನು ನೀಡಲಾಗುವುದು. ಪಾಸ್‌ ಹೊಂದಿರುವವರಿಗೆ ಮಾತ್ರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುವುದು. ಪಾಸ್‌ಗಳನ್ನು ವರ್ಗಾಯಿಸಲು ಅವಕಾಶವಿರುವುದಿಲ್ಲ. ವಿವಾಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ ಕೋವಿಡ್‌ ಸಂಬಂಧಿತ ಮಾರ್ಗಸೂಚಿ ಪಾಲಿಸಬೇಕು. ಮಾರ್ಗಸೂಚಿ ಉಲ್ಲಂಘಿಸಿದ್ದಲ್ಲಿ ಅಥವಾ ಪಾಲಿಸದೇ ಇದ್ದಲ್ಲಿ ಅಂತಹ ಸಂದರ್ಭದಲ್ಲಿ ಆಯೋಜಕರು ಅಥವಾ ಸ್ಥಳದ ಮಾಲಿಕರು ಹೊಣೆಗಾರರಾಗಿದ್ದು, ಅಂತವರ ವಿರುದ್ಧ ನಿರ್ದಾಕ್ಷೀಣ್ಯವಾಗಿ ಕಠಿಣ ಕಾನೂನು ಕ್ರಮ ವಹಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿರುತ್ತಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!