Tuesday, August 3, 2021
spot_img
Homeಸ್ಥಳೀಯ ಸುದ್ದಿವಾಕಿಂಗ್‌ಗೆ ತೆರಳಿದವರು ಮರಳಿ ಮನೆಗೆ ಬರಲಿಲ್ಲ

ವಾಕಿಂಗ್‌ಗೆ ತೆರಳಿದವರು ಮರಳಿ ಮನೆಗೆ ಬರಲಿಲ್ಲ

ಕಾರ್ಕಳ : ವಾಕಿಂಗ್‌ಗೆ ಎಂದು ತೆರಳಿದ ವ್ಯಕ್ತಿಯೋರ್ವರ ಮೃತದೇಹ ಕೆರೆಯಲ್ಲಿ ಪತ್ತೆಯಾದ ಘಟನೆ ಕಾರ್ಕಳ ತಾಲೂಕು ನಲ್ಲೂರು ಗ್ರಾಮದಿಂದ ವರದಿಯಾಗಿದೆ. ನಲ್ಲೂರು ಗ್ರಾಮ ಕೇರಾ ಮನೆ ಸಿಲ್ವೆಸ್ಟರ್ ಮಸ್ಕರೇನಸ್‌ (54) ಎಂಬವರು ಜೂ. 27ರಂದು ವಾಕಿಂಗ್‌ಗೆ ಎಂದು ಮನೆಯಿಂದ ತೆರಳಿದ್ದು, ಬಳಿಕ ಮನೆಗೆ ವಾಪಸಾಗಿರಲಿಲ್ಲ. ಸುತ್ತುಮುತ್ತ ಹುಡುಕಾಡಿದಾಗ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿರುವ ಕೆರೆಯಲ್ಲಿ ಸಿಲ್ವೇಸ್ಟರ್‌ ಮಸ್ಕರೇನಸ್‌ ಅವರ ಶವ ಪತ್ತೆಯಾಗಿದೆ. ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಅವರು ಮನನೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!