Saturday, July 24, 2021
spot_img
Homeಸ್ಥಳೀಯ ಸುದ್ದಿದ್ವಿಚಕ್ರ ವಾಹನ ದುರಸ್ತಿ ಕೇಂದ್ರವನ್ನು ಅತ್ಯಗತ್ಯ ಸೇವಾ ವಲಯದಲ್ಲಿ ಗುರುತಿಸುವಂತೆ ಮನವಿ

ದ್ವಿಚಕ್ರ ವಾಹನ ದುರಸ್ತಿ ಕೇಂದ್ರವನ್ನು ಅತ್ಯಗತ್ಯ ಸೇವಾ ವಲಯದಲ್ಲಿ ಗುರುತಿಸುವಂತೆ ಮನವಿ

ಕಾರ್ಕಳ : ದ್ವಿಚಕ್ರ ವಾಹನ ದುರಸ್ತಿ ಕೇಂದ್ರವನ್ನು ಅತ್ಯಗತ್ಯ ಸೇವಾ ವಲಯದಲ್ಲಿ ಗುರುತಿಸುವಂತೆ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ, ಶಾಸಕ ವಿ. ಸುನಿಲ್‌ ಕುಮಾರ್‌, ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರಿಗೆ ನಾಯಕ್ಸ್‌ ಸೇಲ್ಸ್‌ ಕಾರ್ಪೋರೇಷನ್‌ನ ಪಾಲುದಾರೆ ರತ್ನಾವತಿ ಎನ್‌. ನಾಯಕ್‌ ಜೂ. 28ರಂದು ಬಾಹುಬಲಿ ಪ್ರವಚನ ಮಂದಿರದಲ್ಲಿ ಮನವಿ ಮಾಡಿಕೊಂಡರು. ಉಡುಪಿ ಜಿಲ್ಲೆಯಲ್ಲಿ ದಿನಗೂಲಿ ನೌಕರರು, ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ತಮ್ಮ ದೈನಂದಿನ ಕೆಲಸ ಕಾರ್ಯಕ್ಕೆ ದ್ವಿಚಕ್ರ ವಾಹನ ಅವಲಂಬಿಸಿರುತ್ತಾರೆ. ಹೀಗಾಗಿ ದ್ವಿಚಕ್ರ ವಾಹನ ದುರಸ್ತಿ ಕೇಂದ್ರವನ್ನು ಅತ್ಯಗತ್ಯ ಸೇವಾ ವಲಯದಲ್ಲಿ ಗುರುತಿಸುವಂತೆ ಮನವಿ ಮಾಡಿಕೊಂಡರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!