Tuesday, August 3, 2021
spot_img
HomeUncategorizedಉಡುಪಿ ಜಿಲ್ಲೆಯಲ್ಲಿ ಒಂದು ನಿಮಿಷವೂ ಆಕ್ಸಿಜನ್‌ ಕೊರತೆಯಾಗಿಲ್ಲ

ಉಡುಪಿ ಜಿಲ್ಲೆಯಲ್ಲಿ ಒಂದು ನಿಮಿಷವೂ ಆಕ್ಸಿಜನ್‌ ಕೊರತೆಯಾಗಿಲ್ಲ

ಕಾರ್ಕಳ : ವಾತ್ಸಲ್ಯ ಎನ್ನುವ ಹೆಸರಿನಲ್ಲಿ ಅಂತ:ಕರುಣೆಯಿದೆ. ಇಂದಿನ ಆಧುನಿಕತೆ, ಖಾಸಗೀಕರಣ, ಉದಾರೀಕರಣ, ಜಾತೀಕರಣದಲ್ಲಿ ಅಂತ:ಕರುಣೆ ಮರೆತಿದ್ದೇವೆ. ವಾತ್ಸಲ್ಯ ಹೆಸರಿನಲ್ಲಿ ಕಾರ್ಕಳದ ಹೆಬ್ರಿ ತಾಲೂಕಿನ 40 ಸಾವಿರ ಮಕ್ಕಳ ಆರೋಗ್ಯ ತಪಾಸಣೆ ನಡೆಸುತ್ತಿರುವುದು ಉತ್ತಮ ವಿಚಾರ. ಈ ಯೋಜನೆ ರಾಜ್ಯಕ್ಕೆ ವಿಸ್ತರಿಸುವ ಕುರಿತು ಮುಖ್ಯಮಂತ್ರಿ ಚರ್ಚಿಸಿದ್ದಾರೆ ಎಂದು ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಹೇಳಿದರು.
ಅವರು ಪೆರ್ವಾಜೆ ಸ.ಹಿ.ಪ್ರಾ. ಶಾಲಾ ಸಭಾಂಗಣದಲ್ಲಿ ಜೂ. 28ರಂದು ನಡೆದ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಸಿ ಬಳಿಕ ಮಾತನಾಡಿದರು.
ಕಳೆದ 5 ತಿಂಗಳಲ್ಲಿ ರಾಜ್ಯದಲ್ಲಿ 24 ಸಾವಿರ ಆಕ್ಸಿಜನ್ ಬೆಡ್, 5 ಸಾವಿರ ವೆಂಟಿಲೇಟರ್ ಹಾಗೂ 2 ಸಾವಿರ ಐಸಿಯು ಘಟಕ ನಿರ್ಮಿಸಲಾಗಿದೆ. ಆಕ್ಸಿಜನ್ ಸರಬರಾಜನ್ನು ರಾಜ್ಯ ಸರಕಾರ ನಿರ್ವಹಿಸಿದೆ. ಉಡುಪಿ ಜಿಲ್ಲೆಯಲ್ಲಿ ಒಂದು ನಿಮಿಷವೂ ಕೂಡ ಆಕ್ಸಿಜನ್ ಕೊರತೆಯಾಗದಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪೌಷ್ಠಿಕ ಆಹಾರ ಕೊರತೆಯಾಗದಂತೆ ಕ್ರಮ
ಮೂರನೇ ಅಲೆ ಎದುರಿಸುವ ನಿಟ್ಟಿನಲ್ಲಿ‌ ಉಡುಪಿ ಜಿಲ್ಲೆಯಲ್ಲಿ ಬೆಡ್ ಸಂಖ್ಯೆ ಹೆಚ್ಚಿಸಲಾಗಿದೆ. ಮಕ್ಕಳಿಗೆ‌ ಪೌಷ್ಠಿಕ ಆಹಾರ ಕೊರತೆಯಾಗದಂತೆ ಅಗತ್ಯ ಕ್ರಮ ವಹಿಸಲಾಗಿದೆ. ಆಯುಷ್ಮಾನ್ ಭಾರತ ಸೌಲಭ್ಯ ಮಕ್ಕಳ ಚಿಕಿತ್ಸೆಗೂ ದೊರೆಯುವಲ್ಲಿ ಇರುವ ಕಾನೂನು ತೊಡಕುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸದನದಲ್ಲಿ ಚರ್ಚೆ ನಡೆಸುತ್ತೇನೆ ಎಂದು ಬೊಮ್ಮಾಯಿ ಹೇಳಿದರು.
ಜಿಲ್ಲಾಧಿಕಾರಿ ಜಿ. ಜಗದೀಶ್‌, ಶಾಸಕ ವಿ. ಸುನಿಲ್‌ ಕುಮಾರ್‌, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್‌ ಭಟ್‌, ಪುರಸಭಾ ಅಧ್ಯಕ್ಷೆ ಸುಮಾ ಕೇಶವ್‌, ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ, ಗೇರು ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!