Tuesday, December 7, 2021
spot_img
Homeಸ್ಥಳೀಯ ಸುದ್ದಿಜುಗಾರಿ ಆಟದಲ್ಲಿ ನಿರತರಾಗಿದ್ದ 7 ಮಂದಿಯ ಬಂಧನ

ಜುಗಾರಿ ಆಟದಲ್ಲಿ ನಿರತರಾಗಿದ್ದ 7 ಮಂದಿಯ ಬಂಧನ

ಅಜೆಕಾರು : ಕಡ್ತಲ ಗ್ರಾಮದ ಕುಂಜಿಕೆರೆ ಎಂಬಲ್ಲಿ ಜೂ. 27ರಂದು ಹಣವನ್ನು ಪಣವಾಗಿಟ್ಟು ಜುಗಾರಿ ಆಟದಲ್ಲಿ ನಿರತರಾಗಿದ್ದ 7 ಮಂದಿಯನ್ನು ಅಜೆಕಾರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಎಸ್‌ಐ ಸುದರ್ಶನ್ ದೊಡಮನಿ ಅವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಕುಂಜಿಕೆರೆ ಮನೆ ಪ್ರಸನ್ನ ಹೆಗ್ಡೆ (53), ಶಿರ್ಲಾಲು ಹಾಡಿಯಂಗಡಿ ರಾಜೇಶ್ ಶೆಟ್ಟಿ (35), ಮರ್ಣೆ ಗ್ರಾಮದ ಮುದೆಲ್ಕಡಿ ಹರೀಶ್ ಕಾಮತ್ (45), ಇದೇ ಗ್ರಾಮದ ಬೊಂಡುಕುಮೇರಿ ಸುರೇಂದ್ರ ಶೆಟ್ಟಿ (35), ಅಜೆಕಾರು ಕೊಂಬಗುಡ್ಡೆಯ ಮಹೇಶ್ ಶೆಟ್ಟಿ (33), ಅಜೆಕಾರು ಕಾಂತಬೆಟ್ಟುವಿನ ಸಂತೋಷ್ (38), ಕಡ್ತಲ ಗ್ರಾಮದ ಸಿರಿಬೈಲುವಿನ ಸತೀಶ್ (40) ಅವರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಂದ 11, 420 ರೂ. ವಶಕ್ಕೆ ಪಡೆಯಲಾಗಿದ್ದು, ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!