Sunday, October 24, 2021
spot_img
Homeರಾಜ್ಯಕೇಂದ್ರ ಸಂಪುಟ ವಿಸ್ತರಣೆಯಲ್ಲಿ ರಾಜ್ಯಕ್ಕೆ ಎರಡು ಸ್ಥಾನದ ನಿರೀಕ್ಷೆ : ಈಶ್ವರಪ್ಪ

ಕೇಂದ್ರ ಸಂಪುಟ ವಿಸ್ತರಣೆಯಲ್ಲಿ ರಾಜ್ಯಕ್ಕೆ ಎರಡು ಸ್ಥಾನದ ನಿರೀಕ್ಷೆ : ಈಶ್ವರಪ್ಪ

ಶಿವಮೊಗ್ಗ: ಕೇಂದ್ರ ಸಚಿವ ಸಂಪುಟ ವಿಸ್ತರಣೆ ವೇಳೆ ರಾಜ್ಯಕ್ಕೆ ಎರಡು ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್‌ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಸುರೇಶ್‌ ಅಂಗಡಿ ನಿಧನದಿಂದ ಒಂದು ಸ್ಥಾನ ತೆರವಾಗಿದೆ. ಅದರ ಜೊತೆಗೆ ರಾಜ್ಯಕ್ಕೆ ಮತ್ತೊಂದು ಸ್ಥಾನ ನೀಡುವಂತೆ ಮನವಿ ಮಾಡುತ್ತೇವೆ. ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಸಂಪುಟದಲ್ಲಿ ಸ್ಥಾನ ದೊರಕುವ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಪ್ರತಿಕ್ರಿಯಿಸಿದರು.
ಸಚಿವ ಸಿ.ಪಿ. ಯೋಗೀಶ್ವರ್‌ ದೆಹಲಿ ಭೇಟಿ ವಿಚಾರದಲ್ಲಿ ಯಾವುದೇ ವಿಶೇಷ ಇಲ್ಲ. ರಾಜ್ಯದ ಸಚಿವರು ದೆಹಲಿಗೆ ಹೋಗಬಾರದು ಎಂದು ಸಂವಿಧಾನದಲ್ಲಿ ಏನಾದರೂ ಬರೆದಿದ್ದಾರೆಯೇ ? ಬಿಜೆಪಿ ನಾಯಕರು ದೆಹಲಿಗೆ ಹೋದರೆ ಏಕೆ ಪ್ರಶ್ನೆ ಮಾಡ್ತಿರಾ ಎಂದು ಮರು ಪ್ರಶ್ನಿಸಿದರು.
ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ರಾಜಕೀಯ ನಿವೃತ್ತಿ ಪಡೆಯುದಿಲ್ಲ ಎಂದು ಹೇಳಿರುವುದು ಸಂತಸದ ವಿಷಯ. ಒಂದು ವೇಳೆ ನಿವೃತ್ತರಾದರೂ ಕೊನೆಯವರೆಗೂ ಬಿಜೆಪಿಯಲ್ಲೇ ಇರುವುದಾಗಿ ಕೇಳಿದ್ದಾರಲ್ಲ ಎಂದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!