Thursday, August 5, 2021
spot_img
Homeಸ್ಥಳೀಯ ಸುದ್ದಿರಾಷ್ಟ್ರೀಯ ಹೆದ್ದಾರಿ ಹೆಬ್ರಿ ಪೇಟೆಯ ಮಧ್ಯದಿಂದ ಹಾದು ಹೋಗಬೇಕು-ಸ್ಥಳೀಯರ ಆಗ್ರಹ

ರಾಷ್ಟ್ರೀಯ ಹೆದ್ದಾರಿ ಹೆಬ್ರಿ ಪೇಟೆಯ ಮಧ್ಯದಿಂದ ಹಾದು ಹೋಗಬೇಕು-ಸ್ಥಳೀಯರ ಆಗ್ರಹ

ಕಾರ್ಕಳ : ಮಲ್ಪೆಯಿಂದ ತೀರ್ಥಹಳ್ಳಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ಎ ಇದರ ಕಾಮಗಾರಿ ಈಗಾಗಲೇ ಪ್ರಾರಂಭಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಚಿಸಿರುವ ನೀಲ ನಕ್ಷೆಯಂತೆ ಹೆಬ್ರಿ ಪೇಟೆಯಲ್ಲಿ ಹೆದ್ದಾರಿ ಹಾದು ಹೋಗಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್‌ ಶೆಟ್ಟಿ ಬಣದ ಹೆಬ್ರಿ ತಾಲೂಕು ಘಟಕದ ಅಧ್ಯಕ್ಷ ಸೀತಾನದಿ ವಿಜೇಂದ್ರ ಶೆಟ್ಟಿ ಮತ್ತು ಕಾರ್ಕಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಶ್ರೀಕಾಂತ ಪೂಜಾರಿ ಕುಚ್ಚೂರು ಆಗ್ರಹಿಸಿದ್ದಾರೆ. ಶನಿವಾರ ಹೆಬ್ರಿಯಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ಹೆದ್ದಾರಿ ಹೆಬ್ರಿ ಮುಖಾಂತರ ಹಾದು ಹೋದಲ್ಲಿ ಪೇಟೆ ಮತ್ತಷ್ಟು ಅಭಿವೃದ್ಧಿಯಾಗಲಿದೆ. ಹೆಬ್ರಿ ತಾಲೂಕಾದ ಮೇಲೆ ವಾಹನ ದಟ್ಟಣೆ ಹೆಚ್ಚಾಗಿದ್ದು ಈಗಿರುವ ಪೇಟೆಯ ರಸ್ತೆ ತೀರಾ ಕಿರಿದಾಗಿದೆ ಎಂದವರು ತಿಳಿಸಿದರು.
ಇತ್ತೀಚೆಗೆ ಹೆಬ್ರಿಯ ತಹಸೀಲ್ದಾರ್ ರವರಿಗೆ ಹೆದ್ದಾರಿಯ ಅಕ್ಕ ಪಕ್ಕದಲ್ಲಿರುವ ವಾಣಿಜ್ಯ ಮಳಿಗೆಯ ಮಾಲೀಕರು ರಾಷ್ಟ್ರೀಯ ಹೆದ್ದಾರಿ ಪೇಟೆಯಲ್ಲಿ ಹಾದು ಹೋಗುವುದು ಬೇಡ. ಇದು ಬೈಪಾಸ್ ನಲ್ಲಿ ಹಾದು ಹೋಗಲಿ ಎಂದು ಮನವಿ ಮಾಡಿರುತ್ತಾರೆ. ಇದು ಸರಿಯಲ್ಲ ಇವರ ಅನುಕೂಲಕ್ಕೆ ಹೆದ್ದಾರಿಯ ದಿಕ್ಕನ್ನು ಬದಲಿಸುವುದು ಬೇಡ. ಈ ಬಗ್ಗೆ ನಮ್ಮ ಹಾಗೂ ಹೆಬ್ರಿ ಜನತೆಯ ವಿರೋಧವಿದೆ. ಪ್ರಾಧಿಕಾರ ರಚಿಸಿರುವ ನೀಲ ನಕ್ಷೆಯಂತೆ ಹೆದ್ದಾರೆ ಕಾಮಗಾರಿ ನಡೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲು ನಾವು ಸಿದ್ಧ ಎಂದು ಎಚ್ಚರಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!