Saturday, July 24, 2021
spot_img
Homeಸ್ಥಳೀಯ ಸುದ್ದಿಈದು : 2 ಲಕ್ಷ ರೂ. ಮೌಲ್ಯದ ಚಿನ್ನಭರಣ ಕಳವು

ಈದು : 2 ಲಕ್ಷ ರೂ. ಮೌಲ್ಯದ ಚಿನ್ನಭರಣ ಕಳವು

ಕಾರ್ಕಳ : ಈದು ಹೊಸ್ಮಾರ್‌ನ ನೂರಲ್‌ಬೆಟ್ಟು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಗಣಪತಿ ಶಂಭು ನಾಯ್ಕ ಎಂಬವರ ಮನೆಯಲ್ಲಿ ಜೂ. 25ರಂದು ಕಳ್ಳತನ ನಡೆದಿದೆ. ಜೂ. 23 ರಂದು ಶಂಭು ನಾಯ್ಕ ಅವರ ಪತ್ನಿ ಮನೆ ಕುಮಟಾಕ್ಕೆ ತೆರಳಿದ್ದ ಸಂದರ್ಭ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಕಳ್ಳರು ಮುಂಬಾಗಿಲಿನ ಚಿಲಕ ಮುರಿದು ಕಪಾಟಿನಲ್ಲಿದ್ದ 40 ಗ್ರಾಂ ತೂಕದ ಕರಿಮಣಿ ಸರ 1, 20 ಗ್ರಾಂ ತೂಕದ 2 ಬಲೆಗಳ ಸಹಿತ ಒಟ್ಟು ಸುಮಾರು 2 ಲಕ್ಷ ರೂ. ಬೆಲೆ ಬಾಳುವ ಸೊತ್ತು ಕಳ್ಳತನಗೈದಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ವಿಜಯ ಪ್ರಸಾದ್‌, ವೃತ್ತನಿರೀಕ್ಷಕ ಸಂಪತ್‌ ಕುಮಾರ್‌, ಗ್ರಾಮಾಂತರ ಠಾಣೆ ಎಸ್‌ಐ ತೇಜಸ್ವಿ, ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಕಳ್ಳರ ಪತ್ತೆಗಾಗಿ ಶ್ವಾನದಳ ಬೆರಳಚ್ಚು ತಜ್ಞರ ತಂಡದಿಂದ ಶೋಧ ನಡೆಸಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!