Tuesday, August 3, 2021
spot_img
Homeರಾಜ್ಯಖಾಲಿ ಇಲ್ಲದ ಸಿಎಂ ಗಾದಿಗಾಗಿ ಕಾಂಗ್ರೆಸ್‌ ನಾಯಕರ ಕಾದಾಟ: ಬಿಜೆಪಿ ವ್ಯಂಗ್ಯ

ಖಾಲಿ ಇಲ್ಲದ ಸಿಎಂ ಗಾದಿಗಾಗಿ ಕಾಂಗ್ರೆಸ್‌ ನಾಯಕರ ಕಾದಾಟ: ಬಿಜೆಪಿ ವ್ಯಂಗ್ಯ

ಬೆಂಗಳೂರು: ಖಾಲಿ ಇಲ್ಲದ ಮುಖ್ಯಮಂತ್ರಿ ಗಾದಿಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ನಡೆಸುತ್ತಿರುವ ಕಾದಾಟವು ಕಾಂಗ್ರೇಸ್‌ ಪಕ್ಷದ ಅನೇಕರನ್ನು ಕಂಗಾಲಾಗಿಸುತ್ತಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಈ ವಿಚಾರವಾಗಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿಯು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರ ದೆಹಲಿ ಭೇಟಿಯ ಬೆನ್ನಲ್ಲೇ ಸಿದ್ದರಾಮಯ್ಯ ಅವರು ರಾಹುಲ್‌ ಭೇಟಿಗೆ ಸಮಯ ಕೇಳಿದ್ದಾರೆ. ಖಾಲಿ ಇಲ್ಲದ ಮುಖ್ಯಮಂತ್ರಿ ಗಾದಿಗಾಗಿ ಈ ಇಬ್ಬರು ನಾಯಕರು ನಡೆಸುತ್ತಿರುವ ಕಾದಾಟ ಕಾಂಗ್ರೆಸ್‌ ಪಕ್ಷದ ಅನೇಕ ಖಾಲಿ ತಲೆಗಳನ್ನು ಕಂಗಾಲಾಗಿಸುತ್ತಿದೆ ವಾಗ್ದಾಳಿ ನಡೆಸಿದೆ.

ವಲಸೆ ನಾಯಕ ಸಿದ್ದರಾಮಯ್ಯ ಅವರೇ, ಕಾಂಗ್ರೇಸ್‌ ಪಕ್ಷದಲ್ಲಿ ಒಳಜಗಳ ಇಲ್ಲವೆಂದಾದರೆ ಡಿ.ಕೆ. ಶಿವಕುಮಾರ್‌ ಅವರು ರಾಹುಲ್‌ ಮುಂದೆ ಏಕೆ ಗೋಳು ತೋಡಿಕೊಳ್ಳುತ್ತಿದ್ದರು? ಉಸ್ತುವಾರಿ ಸುರ್ಜೇವಾಲಾರನ್ನು ಎರಡು ಬಾರಿ ಭೇಟಿ ಮಾಡಿ ನಿಮ್ಮ ವಿರುದ್ಧ ದೂರು ನೀಡಿದ್ದೇಕೆ ? ತಾನು ಕಳ್ಳ, ಪರರ ನಂಬ ಎಂಬಂತಾಗಿದೆ ಕಾಂಗ್ರೆಸ್‌ ಸ್ಥಿತಿ ಎಂದು ಬಿಜೆಪಿ ಟೀಕಿಸಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!