Saturday, January 22, 2022
spot_img
Homeಸ್ಥಳೀಯ ಸುದ್ದಿಕಾರ್ಕಳ : ತಾಲೂಕಿನಲ್ಲಿ ಉಚಿತ ಲಸಿಕಾ ಅಭಿಯಾನ

ಕಾರ್ಕಳ : ತಾಲೂಕಿನಲ್ಲಿ ಉಚಿತ ಲಸಿಕಾ ಅಭಿಯಾನ

ಕಾರ್ಕಳ : ಕಾರ್ಕಳ ಬಾಹುಬಲಿ ಪ್ರವಚನ ಮಂದಿರದಲ್ಲಿ ಕೋವಿಡ್‌ ಲಸಿಕಾ ಮೇಳವನ್ನು ಜೂ. 21ರಂದು ಶಾಸಕ ವಿ. ಸುನಿಲ್‌ ಕುಮಾರ್‌ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪ್ರಧಾನ ಮಂತ್ರಿಗಳ ಆಶಯದಂತೆ ದೇಶದಾದ್ಯಂತ ಉಚಿತ ಲಸಿಕಾ ಅಭಿಯಾನ ನಡೆಸಲಾಗುತ್ತಿದೆ. ತಾಲೂಕಿನಲ್ಲಿ ಒಟ್ಟು 28 ಕೋವಿಡ್ ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಇಂದು 4 ಸಾವಿರ ಮಂದಿಗೆ ಲಸಿಕೆ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಈವರೆಗೆ ತಾಲೂಕಿನಲ್ಲಿ 59, 841 ಪ್ರಥಮ ಡೋಸ್ ಹಾಗೂ 16, 946 ಎರಡನೇ ಡೋಸ್ ಲಸಿಕೆ ನೀಡಲಾಗಿದೆ ಎಂದರು.
ಕಾರ್ಕಳ ನಗರ ಪ್ರದೇಶದವರಿಗೆ ಈ ಹಿಂದೆ ಬೋರ್ಡ್ ಹೈಸ್ಕೂಲ್ ನಲ್ಲಿ ಲಸಿಕಾ ಶಿಬಿರ ನಡೆಯುತ್ತಿತ್ತು. ಇಂದಿನಿಂದ ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರಕ್ಕೆ ಸ್ಥಳಾಂತರಿಸಲಾಗಿದೆ ಎಂದರು.

ಅಭಿನಂದನೆ ಅರ್ಪಣೆ
ಲಸಿಕಾ ಶಿಬಿರ ನಡೆಸಲು ಉಚಿತವಾಗಿ ಸ್ಥಳವಕಾಶ ನೀಡಿದ ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರದ ಆಡಳಿತ ಮಂಡಳಿಗೆ ಹಾಗೂ ಪ್ರಾರಂಭದಿಂದ ಈವರೆಗೂ ವ್ಯವಸ್ಥಿತವಾಗಿ ಲಸಿಕಾ ಕೇಂದ್ರದಲ್ಲಿ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿರುವ ಸೇವಾಭಾರತಿ ಕಾರ್ಕಳ ಹಾಗೂ ಸ್ವಚ್ಛ ಕಾರ್ಕಳ ಬ್ರಿಗೇಡ್‌ ತಂಡದ ಸದಸ್ಯರಿಗೂ ಅಭಿನಂದನೆ ಅರ್ಪಿಸುತ್ತಿದ್ದೇನೆ. ಸರಕಾರದೊಂದಿಗೆ ಸಾರ್ವಜನಿಕರು, ಸಂಘ ಸಂಸ್ಥೆಗಳು ಸಹಕರಿಸುವುದರೊಂದಿಗೆ ಕೋವಿಡ್ ಅನ್ನು ಹತೋಟಿಗೆ ತರಬಹುದಾಗಿದೆ ಎಂದು ಸುನಿಲ್‌ ಕುಮಾರ್‌ ಅಭಿಪ್ರಾಯಪಟ್ಟರು.

ಶಕ್ತಿ ಮೀರಿ ಶ್ರಮ
ಕಳೆದ ಒಂದು ವರ್ಷದಿಂದ ವೈದ್ಯರು, ಶುಶ್ರೂಷಕರು, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಶಕ್ತಿಮೀರಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯ ಸ್ಮರಣೀಯವಾಗಿರಲಿದೆ ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ತಹಶೀಲ್ದಾರ್‌ ಪುರಂದರ ಹೆಗ್ಡೆ, ಪುರಸಭಾ ಅಧ್ಯಕ್ಷೆ ಸುಮಾ ಕೇಶವ್‌, ಜೈನಧರ್ಮ ಜೀರ್ಣೋದ್ಧಾರಕ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಕೆ. ವಿಜಯ್ ಕುಮಾರ್‌, ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ, ಸೇವಾಭಾರತಿ ಕಾರ್ಕಳ ಇದರ ಪ್ರತಿನಿಧಿ ಸುರೇಂದ್ರ ಶೆಣೈ, ಸ್ವಚ್ಛ ಕಾರ್ಕಳ ಬ್ರಿಗೆಡ್ ಪ್ರತಿನಿಧಿ ಫೆಲಿಕ್ಸ್, ಕಾರ್ಕಳ ಸರಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಕೆ.ಎಸ್. ರಾವ್ ಉಪಸ್ಥಿತರಿದ್ದರು. ಡಾ. ಮಾನಸ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!