Saturday, December 4, 2021
spot_img
Homeಸ್ಥಳೀಯ ಸುದ್ದಿಯೋಗ - ಪ್ರಾಣಾಯಾಮ ತಜ್ಞೆ ಡಾ. ಮಾಲತಿ ಪೈ

ಯೋಗ – ಪ್ರಾಣಾಯಾಮ ತಜ್ಞೆ ಡಾ. ಮಾಲತಿ ಪೈ

ಕಾರ್ಕಳ ಬೆಳ್ಮಣ್ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪ ಪ್ರಾಂಶುಪಾಲೆಯಾಗಿರುವ ಡಾಕ್ಟರ್ ಮಾಲತಿ ಪೈ ಅವರು ಕಳೆದ 25 ವರ್ಷಗಳಿಂದ ಯೋಗ ಮತ್ತು ಪ್ರಾಣಾಯಾಮ ಶಿಕ್ಷಣ ನೀಡುತ್ತಿದ್ದಾರೆ. ಎಂ.ಎಸ್ಸಿ ಇನ್ ಯೋಗ, ಪಿಎಚ್‍ಡಿ (ಯೋಗ ವಿಜ್ಞಾನ) ಮಾಡಿರುವ ಮಾಲತಿ ಅವರು ಕನ್ನಡ, ಹಿಂದಿ, ಸಮಾಜ ಶಾಸ್ತ್ರ, ಶಿಕ್ಷಣ ಎಂಬ ನಾಲ್ಕು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. ಪ್ರಸ್ತುತ ತುಳು ವಿಷಯದಲ್ಲಿ ಎಂಎ ಕಲಿಯುತ್ತಿರುವ ಮಾಲತಿ ಅವರು ಯೋಗ ವಿಜ್ಞಾನದಲ್ಲಿ ಸತತ ಅಧ್ಯಯನ ಮೂಲಕ ಡಾಕ್ಟರೇಟ್ ಕೂಡ ಸಂಪಾದಿಸಿರುತ್ತಾರೆ.
ನಿರಂತರ ಕಲಿಕೆ ಮತ್ತು ಅಧ್ಯಯನ ಮೂಲಕ ಮಾಲತಿ ಪೈ ಅವರು ಭಿನ್ನ ಸಾಮರ್ಥ್ಯದ ಮಕ್ಕಳ ವಿಶೇಷ ಶಿಕ್ಷಣದ ಮೇಲೆ ಬಿ.ಎಡ್ ಪದವಿ ಗಳಿಸಿರುತ್ತಾರೆ. ಯೋಗ, ಪ್ರಾಣಾಯಾಮಗಳ ಮೂಲಕ ಸಾಮಾಜಿಕ ಸ್ವಾಸ್ಥ್ಯ ವೃದ್ಧಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿರುತ್ತಾರೆ.

ಸಂಪನ್ಮೂಲ ವ್ಯಕ್ತಿಯಾಗಿ ಮಾಲತಿ
ಸೈಲೆಂಟ್ ಮೆಡಿಟೇಶನ್, ಕಲರ್ ಮೆಡಿಟೇಶನ್, ಚಕ್ರ ಮೆಡಿಟೇಶನ್ ಇವುಗಳು ಅವರ ವಿಶೇಷ ಆಸಕ್ತಿಯ ಅಧ್ಯಯನ ಕ್ಷೇತ್ರಗಳು. ಗರ್ಭಿಣಿಯರಿಗೆ ಯೋಗ, ಮುದ್ರೆ, ಧ್ಯಾನ ಚಿಕಿತ್ಸೆಗಳ ಮೂಲಕ ಆರೋಗ್ಯ ವೃದ್ಧಿ ಮತ್ತು ನೋವು ಶಮನ ಚಿಕಿತ್ಸೆ ನೀಡಿ ಯಶಸ್ವೀಯಾಗಿದ್ದಾರೆ. ರಾಜ್ಯ, ಜಿಲ್ಲಾ ಮಟ್ಟದ ಹಲವು ಸೆಮಿನಾರ್ ಹಾಗೂ ವಿಕಸನ ತರಬೇತಿಯಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ.

ಲಾಕ್ ಡೌನ್ ಅವಧಿಯಲ್ಲಿ ಮೂರು ತಿಂಗಳ ಕಾಲ ಉಚಿತ ಆನ್‌ ಲೈನ್ ಮುದ್ರಾ ಮತ್ತು ಪ್ರಾಣಾಯಾಮ ತರಗತಿ ನೀಡಿರುತ್ತಾರೆ. ಪ್ರಾಣಾಯಾಮ ಹೀಲಿಂಗ್ ಮೂಲಕ ಹಲವರ ದೇಹದ ಹೆಪ್ಪುಗಟ್ಟಿದ ತೊಂದರೆ, ನೋವು ನಿವಾರಣೆ ಮಾಡಿರುತ್ತಾರೆ. ವೈದ್ಯ ವಿಜ್ಞಾನಕ್ಕೆ ಸವಾಲಾದ ಹಲವು ಸಂಕೀರ್ಣ ದೈಹಿಕ, ಮನೋ ದೈಹಿಕ ಸಮಸ್ಯೆ ನಿವಾರಣೆಗೆ ಅವರಿಂದ ಅನೇಕರು ಮಾರ್ಗದರ್ಶನ ಪಡೆದಿರುತ್ತಾರೆ. ಕನ್ನಡ, ತುಳು, ಕೊಂಕಣಿ, ಹಿಂದಿ, ತೆಲುಗು ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪರಿಣತಿ ಹೊಂದಿರುವ ಡಾ. ಮಾಲತಿ ಪೈ ಅವರು ಉತ್ತಮ ಶಿಕ್ಷಕಿ, ಯಕ್ಷಗಾನ ಕಲಾವಿದೆ, ಸಮಾಜ ಸೇವಕಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಕಳಕ್ಕೆ ಹೆಮ್ಮೆ ತಂದಿದ್ದಾರೆ.

ನ್ಯೂಸ್‌ ಕಾರ್ಕಳದ ಮೂಲಕ ಯೋಗ ವಿದ್ಯೆ
ನ್ಯೂಸ್‌ ಕಾರ್ಕಳ ವೆಬ್‌ ತಾಣದ ಮೂಲಕ ಯೋಗ ಶಿಕ್ಷಣ ನೀಡುತ್ತಿರುವ ಮಾಲತಿ ಅವರು ಅಪಾರ ವೀಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ತಾನು ಕಷ್ಟ ಪಟ್ಟು ಸಂಪಾದಿಸಿದ ವಿದ್ಯೆಯನ್ನು ಪ್ರತಿಫಲದ ಅಪೇಕ್ಷೆ ಇಲ್ಲದೇ ಸಮಾಜಕ್ಕೆ ನೀಡುವ ಕಾಯಕದಲ್ಲಿ ಮುಂಚೂಣಿಯಾಗಿ ತೊಡಗಿಸಿಕೊಂಡಿರುವ ಮಾಲತಿ ಅವರಿಗೆ ಯೋಗ ದಿನದ ಶುಭಾಶಯಗಳು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!