Thursday, August 5, 2021
spot_img
Homeಸ್ಥಳೀಯ ಸುದ್ದಿತುಳು ಧ್ವಜಕ್ಕೆ ಅವಮಾನ ಮಾಡಿದ ಪ್ರಕರಣ: ಬೆಂಗಳೂರು ಮೂಲದ ಆರೋಪಿ ಬಂಧನ

ತುಳು ಧ್ವಜಕ್ಕೆ ಅವಮಾನ ಮಾಡಿದ ಪ್ರಕರಣ: ಬೆಂಗಳೂರು ಮೂಲದ ಆರೋಪಿ ಬಂಧನ

ಮಂಗಳೂರು : ಚಪ್ಪಲಿಯಲ್ಲಿ ತುಳುನಾಡಿನ ಸಾಂಸ್ಕೃತಿಕ ಧ್ವಜ ಚಿತ್ರಿಸಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ ಆರೋಪಿಯನ್ನು ಬರ್ಕೆ ಠಾಣೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿರುವ ಸೂರ್ಯ ಎನ್.ಕೆ. (19) ಬಂಧಿತ ಆರೋಪಿ.

ಚಪ್ಪಲಿಯಲ್ಲಿ ತುಳುನಾಡಿನ ಸಾಂಸ್ಕೃತಿಕ ಧ್ವಜ ಚಿತ್ರಿಸಿ ಫೇಸ್ಬುಕ್ ಪೇಜ್ ನಲ್ಲಿ ಹಾಕಿದ್ದಲ್ಲದೇ, ಅವಮಾನವಾಗುವ ರೀತಿಯಲ್ಲಿ ಕಮೆಂಟ್ ಹಾಕಿದ್ದ. ಇದು ತುಳುವರ ಭಾವನೆಗೆ ತೀವ್ರ ಧಕ್ಕೆಯನ್ನುಂಟು ಮಾಡಿತ್ತು. ಈ ರೀತಿ ತುಳುನಾಡಿನ ಸಾಂಸ್ಕೃತಿಕ ಧ್ವಜಕ್ಕೆ ಅಪಮಾನವೆಸಗಿರುವ ಕಿಡಿಗೇಡಿಯನ್ನು ಬಂಧಿಸುವಂತೆ ಒತ್ತಾಯಗಳು ಕೇಳಿಬಂದಿತ್ತು. ಅಲ್ಲದೇ ಈ ಸಂಬಂಧ ದೂರು ಕೂಡ ದಾಖಲಾಗಿತ್ತು. ಈ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಶಶಿಧರ ಹೆಗ್ಡೆ ನೇತೃತ್ವದಲ್ಲಿ ಕಮಿಷನರ್ ಶಶಿಕುಮಾರ್ ಅವರಿಗೆ ದೂರು ನೀಡಲಾಗಿತ್ತು. ಅದರಂತೆ ಬರ್ಕೆ ಠಾಣೆಯಲ್ಲಿ 153(ಎ) ಮತ್ತು 505 (2) ಐಪಿಸಿ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಆರೋಪಿಯ ಪತ್ತೆಗಾಗಿ ಬರ್ಕೆ ಠಾಣೆ ಎಸ್.ಐ ರುಣ್ ಅಖ್ತರ್ ನೇತೃತ್ವದಲ್ಲಿ ಉರ್ವ ಪೊಲೀಸ್ ಠಾಣೆ ಸಿಬ್ಬಂದಿ ಪುಷ್ಪರಾಜ್, ಪ್ರಕಾಶ್, ಬರ್ಕೆ ಠಾಣೆಯ ಶರತ್ ಎಂಬವರನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಪೊಲೀಸ್ ತಂಡ ಬೆಂಗಳೂರಿಗೆ ತೆರಳಿ, ಆರೋಪಿಯ ಮನೆಯನ್ನು ಪತ್ತೆ ಮಾಡಿದೆ. ಆರೋಪಿ ಸೂರ್ಯ ಎನ್.ಕೆ. ಶ್ರೀರಾಂಪುರದ ಒಂದನೇ ಕ್ರಾಸ್ ನಲ್ಲಿ ವಾಸವಾಗಿರುವುದನ್ನು ಪತ್ತೆ ಮಾಡಿ, ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆರೋಪಿಯನ್ನು ಇಂದು ಮಂಗಳೂರಿಗೆ ಕರೆತಂದು ಕೋರ್ಟಿಗೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!