ಮೈಸೂರು: ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟುಕೊಂಡು ಎಲ್ಲರನ್ನು ನಗಿಸುತ್ತಲೇ ಆಟವಾಡಿಕೊಂಡಿದ್ದ ಪುಟ್ಟ ಕಂದ ಮನೆಯಲ್ಲೇ ದುರಂತ ಅಂತ್ಯ ಕಂಡಿದೆ.
ಹುಣಸೂರು ತಾಲೂಕಿನ ತರಿಕಲ್ ಗ್ರಾಮದ ಸುಂದರರಾಜ್ ಎಂಬುವರ ಎರಡು ವರ್ಷ ಮಗು ಸಮರ್ಥ್ ಮೃತ ದುರ್ದೈವಿ. ಮನೆಯಲ್ಲಿ ಆಟವಾಡುತ್ತಲೇ ಇದ್ದ ಮಗು ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು. ಮನೆಯವರೆಲ್ಲ ಅಕ್ಕ-ಪಕ್ಕದ ಮನೆಯನ್ನೂ ಹುಡುಕಾಡಿದರೂ ಸಿಗಲಿಲ್ಲ. ಮನೆಯ ಬಾತ್ ರೂಂ ಬಳಿ ಹೋಗಿ ನೋಡಿದಾಗ ನೀರು ತುಂಬಿದ್ದ ಬಕೆಟ್ ಒಳಗೆ ಬಿದ್ದು ಮಗು ಸತ್ತಿರುವುದು ಗೊತ್ತಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.