Thursday, August 5, 2021
spot_img
Homeಸ್ಥಳೀಯ ಸುದ್ದಿಸೂರಿಲ್ಲದೇ ಬಂಡೆಯ ಮೇಲೆ ಬದುಕು ಸಾಗಿಸುತ್ತಿರುವ ವಿಕಲಚೇತನ ಅಜ್ಜಿ

ಸೂರಿಲ್ಲದೇ ಬಂಡೆಯ ಮೇಲೆ ಬದುಕು ಸಾಗಿಸುತ್ತಿರುವ ವಿಕಲಚೇತನ ಅಜ್ಜಿ

ಹೆಬ್ರಿ : ಸೂರಿಲ್ಲದೇ ಬಂಡೆ ಕಲ್ಲಿನ ಮೇಲೆ ಹಿರಿಯ ಜೀವವೊಂದು ಬದುಕು ಸಾಗಿಸುತ್ತಿರುವ ಶೋಚನೀಯ ಸ್ಥಿತಿ ಹೆಬ್ರಿ ತಾಲೂಕು ವರಂಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಒಳಗುಡ್ಡೆಯ ಹಳೆಮಜಲು ಎಂಬಲ್ಲಿಂದ ವರದಿಯಾಗಿದೆ.
ಪ್ರೇಮ ಪೂಜಾರ್ತಿ ಎಂಬವರೇ ಇಂತಹ ದುಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವ ವಿಕಲಚೇತನ ಮಹಿಳೆ. ಎರಡೂ ಕೈ ಕಾಲುಗಳ ಬೆರಳು ಇಲ್ಲದೇ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದಾರೆ. ಕೆಲವೊಮ್ಮೆ ಮಳೆ ಬಂದರೆ ಅಡುಗೆ ಮಾಡುವಂತೆಯೂ ಇಲ್ಲ. ಪ್ರೇಮಾ ಪೂಜಾರಿ ಅವರಿಗೆ ಮದುವೆಯಾಗಿದ್ದರೂ, ಪತಿ ಬಿಟ್ಟು ಹೋಗಿದ್ದಾರೆ. ಈಕೆಗೆ ಸಹೃದಯಿ ಸಮಾಜ ಬಾಂಧವರ ನೆರವು ಬೇಕಾಗಿದೆ. ಸರಕಾರಿ ಇಲಾಖೆ, ಗ್ರಾಮ ಪಂಚಾಯತ್‌ ಈಕೆಗೊಂದು ಮನೆ ನಿರ್ಮಿಸಿ, ಸಕಲ ವ್ಯವಸ್ಥೆ ಕಲ್ಪಿಸಬೇಕಾಗಿದೆ.

ಕರವೇಯಿಂದ ಕಿಟ್‌ ವಿತರಣೆ
ಕರ್ನಾಟಕ ರಕ್ಷಣಾ ವೇದಿಕೆ ವರಂಗ ಘಟಕ ಹೆಬ್ರಿ ತಾಲೂಕಿನ ಪದಾಧಿಕಾರಿಗಳು ಪ್ರೇಮ ಪೂಜಾರ್ತಿಯವರಿಗೆ ದಿನಸಿ ಸಾಮಗ್ರಿ ಕಿಟ್ ಅನ್ನು ವಿತರಿಸಿದರು. ಕರವೇ ವರಂಗ ಘಟಕದ ಅಧ್ಯಕ್ಷ ವಿ. ಆರ್. ಸತೀಶ್ ಆಚಾರ್ಯ, ಗೌರವ ಅಧ್ಯಕ್ಷ ಉದಯ್ ಸೇರಿಗಾರ, ಮಹಿಳಾ ಘಟಕದ ಅಧ್ಯಕ್ಷೆ ಸುಲತಾ ಆಚಾರ್ಯ, ಸಂಘಟನಾ ಕಾರ್ಯದರ್ಶಿ ಸಂತೋಷ್ ಆಚಾರ್ಯ ಹಾಗೂ ಸದಸ್ಯರಾದ ಶ್ರೀನಿವಾಸ್ ನಾಯಕ್, ಸತೀಶ್ ಪೂಜಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!