Sunday, October 24, 2021
spot_img
Homeಸ್ಥಳೀಯ ಸುದ್ದಿಡೀಮ್ಡ್ ಅರಣ್ಯ ಸಮಸ್ಯೆ ಬಗೆಹರಿಸುವಂತೆ ಅರಣ್ಯ ಸಚಿವರಿಗೆ ಶಾಸಕ ಸುನಿಲ್ ಕುಮಾರ್ ಮನವಿ

ಡೀಮ್ಡ್ ಅರಣ್ಯ ಸಮಸ್ಯೆ ಬಗೆಹರಿಸುವಂತೆ ಅರಣ್ಯ ಸಚಿವರಿಗೆ ಶಾಸಕ ಸುನಿಲ್ ಕುಮಾರ್ ಮನವಿ

ಕಾರ್ಕಳ : ಉಡುಪಿ ಜಿಲ್ಲೆಯಾದ್ಯಂತ ಡೀಮ್ಡ್‌ ಅರಣ್ಯವೆಂದು ಪರಿಗಣಿಸಲಾದ ಪ್ರದೇಶದಲ್ಲಿ ಅಕ್ರಮ ಸಕ್ರಮ ಜಮೀನು ಮಂಜೂರಾತಿ, 94 ಸಿ ಮತ್ತು 94 ಸಿಸಿಯಡಿ ಹಕ್ಕುಪತ್ರ ವಿತರಣೆ, ಸಾರ್ವಜನಿಕ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ತೊಡಕಾಗಿದೆ. ಇದೊಂದು ಗಂಭೀರ ಸಮಸ್ಯೆಯಾಗಿದ್ದು ಇದನ್ನು ಬಗೆಹರಿಸುವಂತೆ ಶಾಸಕ ವಿ. ಸುನಿಲ್‌ ಕುಮಾರ್‌ ಅವರು ಅರಣ್ಯ ಸಚಿವ ಅರವಿಂದ ಲಿಂಬಾವಳಿಯವರನ್ನು ಬೇಟಿಯಾಗಿ ಮನವಿ ಮಾಡಿಕೊಂಡರು.
1997ರಲ್ಲಿ ಅಂದಿನ ಕಾಂಗ್ರೆಸ್ ನೇತೃತ್ವದ ಸರಕಾರ ವೈಜ್ಞಾನಿಕ ತಳಹದಿಯಿಲ್ಲದೇ ಮತ್ತು ಸಮಗ್ರ ಸ್ಥಳ ತನಿಖೆ ನಡೆಸದೇ ಡೀಮ್ಡ್ ಪಟ್ಟಿಯನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವುದೇ ಇಂದು ತಲೆದೋರಿರುವ ಸಮಸ್ಯೆಗೆ ಮೂಲಕಾರಣವಾಗಿದೆ.
ತದನಂತರ ತಜ್ಞರ ಸಮಿತಿ ಕೊಟ್ಟಿರುವ ವರದಿಯಲ್ಲಿ ಹಾಲಿ ಕಾರ್ಯಾಚರಿಸುತ್ತಿದ್ದಂತಹ ಸರಕಾರಿ ಕಟ್ಟಡ, ರಸ್ತೆ ಮತ್ತು ಭೂ ರಹಿತ ಕಾರ್ಮಿಕರು ಕೃಷಿಗೆ ಉಪಯೋಗಿಸುತ್ತಿದ್ದಂತಹ ಮತ್ತು ಸಾರ್ವಜನಿಕ ಉದ್ದೇಶಕ್ಕಾಗಿ ಬಳಕೆಯಾಗುತ್ತಿದ್ದಂತಹ ಎಲ್ಲ ಸರಕಾರಿ ಜಾಗ ಡೀಮ್ಡ್ ಎಂಬುವುದಾಗಿ ಪರಿಗಣಿಸಿ ಗೊಂದಲ ಸೃಷ್ಟಿಯಾಗಿರುವುದನ್ನು ಈಗಾಗಲೇ ರಾಜ್ಯ ಸರಕಾರದ ಗಮನಕ್ಕೆ ತರಲಾಗಿದೆ. ಅಧಿಕಾರಿಗಳನ್ನೊಳಗೊಂಡ ಪರಿಣಿತ ತಜ್ಞರ 1ನೇ ಸಮಿತಿಯು ರಾಜ್ಯದಲ್ಲಿ 9,90,000 ಹೆಕ್ಟೇರ್ ಡೀಮ್ಡ್ ಭೂಮಿ ಎಂದು ಗುರುತಿಸಿ ವರದಿ ನೀಡಿದೆ. ಕಳೆದ ಐದಾರು ವರ್ಷಗಳಿಂಂದ ಡೀಮ್ಡ್ ಅರಣ್ಯ ಸಮಸ್ಯೆ ಬಗ್ಗೆ ನಾನು ವಿಧಾನಸಭೆ ಹಾಗೂ ಸರಕಾರದ ಮಟ್ಟದಲ್ಲಿ ಹಲವು ಬಾರಿ ಸರಕಾರದ ಗಮನ ಸೆಳೆದಿರುತ್ತೇನೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರವು ಕೆಲವು ನಿರ್ದಿಷ್ಟ ಮಾನದಂಡಗಳನ್ನು ನಿಗದಿಪಡಿಸಿ ಡೀಮ್ಡ್ ಫಾರೆಸ್ಟ್ ಗುರುತಿಸುವ ಬಗ್ಗೆ ತಾಲೂಕು / ಜಿಲ್ಲಾ / ರಾಜ್ಯ ಮಟ್ಟದಲ್ಲಿ ಕಮಿಟಿಯನ್ನು ರಚಿಸಿ ನಿರ್ದಿಷ್ಟ ಮಾನದಂಡಗಳ ಪ್ರಕಾರ ಅರಣ್ಯ ಲಕ್ಷಣಗಳನ್ನು ಹೊಂದಿರುವ ಜಾಗಗಳನ್ನು ಗುರುತು ಮಾಡಿದೆ. ಅದರನ್ವಯ ಮೊದಲನೇ ಪಟ್ಟಿಯಲ್ಲಿರುವ 9,90,000 ಹೆಕ್ಟೇರ್ ಬದಲಾಗಿ 3,30,000 ಹೆಕ್ಟೇರ್ ಡೀಮ್ಡ್ ಎಂಬುವುದಾಗಿ ಜಂಟಿ ಸ್ಥಳ ತನಿಖೆಯಿಂದ ಗುರುತಿಸಿದ್ದು ಈ ಹಿನ್ನೆಲೆಯಲ್ಲಿ ಎರಡನೇ ವರದಿಯನ್ನು ರಾಜ್ಯ ಸರಕಾರದ ಮುಖಾಂತರ ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ಶಪಥ ಪತ್ರ ಸಲ್ಲಿಸಲು ಮನವಿ ಮಾಡಿಕೊಂಡಿರುತ್ತೇನೆ ಎಂದು ಸುನಿಲ್‌ ಕುಮಾರ್‌ ತಿಳಿಸಿದರು.

ದ.ಕ ಮತ್ತು ಉಡುಪಿ ಜಿಲ್ಲೆಯ ಕುಮ್ಕಿ ಹಕ್ಕನ್ನು ಉಳಿಸಿಕೊಳ್ಳಲು ವಾಸ್ತವವಾದ ಕುಮ್ಕಿ ಹಕ್ಕಿನ ಪ್ರದೇಶಗಳನ್ನು ಕಂದಾಯ ಇಲಾಖೆ ಮುಖಾಂತರ ಗುರುತಿಸಲು ಮತ್ತು ಸೂಕ್ತ ಕಾನೂನು ತಿದ್ದುಪಡಿ ತರಲು ಮಾನ್ಯ ಸರಕಾರಕ್ಕೆ ಒತ್ತಾಯಿಸಿರುತ್ತೇನೆ. ಪ್ರಸ್ತುತ ಮೊದಲ ಪಟ್ಟಿಯಂತೆ ಉಡುಪಿ ಜಿಲ್ಲೆಯಲ್ಲಿ 69,000 ಹೆಕ್ಟೇರ್ ವಿಸ್ತೀರ್ಣ ಡೀಮ್ಡ್ ಫಾರೆಸ್ಟ್ ಎಂದು ಸಲ್ಲಿಕೆಯಾಗಿದ್ದು ಜಂಟಿ ಸ್ಥಳ ತನಿಖೆಯ ನಂತರ ಅರಣ್ಯ ಲಕ್ಷಣ ಹೊಂದಿರದ 35,000 ಹೆಕ್ಟೇರ್ ಭೂಮಿಯನ್ನು ಡೀಮ್ಡ್ ಫಾರೆಸ್ಟ್ ಪಟ್ಟಿಯಿಂದ ಕೈಬಿಡುವಂತೆ ಜಿಲ್ಲಾ ಕಮಿಟಿಯಿಂದ ರಾಜ್ಯ ಕಮಿಟಿಗೆ ವರದಿ ಸಲ್ಲಿಕೆಯಾಗಿರುತ್ತದೆ. ಆದಷ್ಟು ಬೇಗ ಕಾನೂನಿನ ನಿಯಾಮವಳಿಗಳನ್ನು ಸರಿಪಡಿಸಿಕೊಂಡು ತಕ್ಷಣ ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ಶಪಥ ಪತ್ರ ಸಲ್ಲಿಸಲು ಮಾನ್ಯ ಕರ್ನಾಟಕ ಸರಕಾರದ ಅರಣ್ಯ ಸಚಿವರಾದ ಅರವಿಂದ ಲಿಂಬಾವಳಿರ ಭೇಟಿ ಮಾಡಿರುತ್ತೇನೆ ಎಂದು ಸುನಿಲ್‌ ಕುಮಾರ್‌ ತಿಳಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!