Saturday, December 4, 2021
spot_img
Homeಸ್ಥಳೀಯ ಸುದ್ದಿಸಂಕಷ್ಟದಲ್ಲಿರುವ ಕುಟುಂಬಕ್ಕೆ ಸಾಂತ್ವನ ಹೇಳಿ ನೆರವಿನ ಭರವಸೆ ನೀಡಿದ ಶ್ಯಾಮಲಾ ಕುಂದರ್‌

ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸಾಂತ್ವನ ಹೇಳಿ ನೆರವಿನ ಭರವಸೆ ನೀಡಿದ ಶ್ಯಾಮಲಾ ಕುಂದರ್‌

ಕಾರ್ಕಳ : ಪುರಸಭೆ ವ್ಯಾಪ್ತಿಯ ಕಾವೇರಡ್ಕ ವಾಸು ಆಚಾರ್ಯರ ಕುಟುಂಬ ತೀರಾ ಸಂಕಷ್ಟದಲ್ಲಿದೆ ಎಂಬ ಮಾಹಿತಿ ತಿಳಿದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್‌ ಅವರು ಜೂ. 17ರಂದು ‍ಸ್ಥಳಕ್ಕೆ ಭೇಟಿ ನೀಡಿ, ನೆರವಿನ ಭರವಸೆ ನೀಡಿದರು. ವಾಸು ಆಚಾರ್ಯ ಅವರಿಗೆ ಮೂವರು ಮಕ್ಕಳು. ಅವರಲ್ಲಿ ಇಬ್ಬರು ಹೆಣ್ಣು ಮಕ್ಕಳು ವಿಕಲಚೇತನರು. ಕಿತ್ತು ತಿನ್ನುವ ಬಡತನ ಒಂದೆಡೆಯಾದರೆ ಉಳಿಯಲು ಸರಿಯಾದ ಮನೆಯೂ ಇಲ್ಲ. ಇದನ್ನು ಮನಗಂಡ ಶ್ಯಾಮಲಾ ಅವರು ತಕ್ಷಣವೇ ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಅವರಿಗೆ ಕರೆ ಮಾಡಿ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದರು. ಈ ಸಂದರ್ಭದಲ್ಲಿದ್ದ ಸಿಡಿಪಿಒ ಅವರಲ್ಲೂ ತಮ್ಮ ಇಲಾಖೆಯಿಂದ ಒದಗಿಸಬಹುದಾದ ಸಕಲ ಸೌಕರ್ಯ ಒದಗಿಸುವಂತೆಯೂ ಸೂಚಿಸಿದರು.
ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್, ಕಾರ್ಕಳ ಪುರಸಭಾ ಮಾಜಿ ಸದಸ್ಯ ಪ್ರಕಾಶ್ ರಾವ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಸಿಬ್ಬಂದಿ, ವಿಜಯ ಸಪಲಿಗ, ಶಂಕರ ನಾಯ್ಕ್, ಅನಿಲ್ ಪ್ರಭು, ರಮೇಶ್ ಶೆಟ್ಟಿಗಾರ್ ಮತ್ತು ಸಂತೋಷ್ ರಾವ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!