Saturday, December 4, 2021
spot_img
Homeಅಂಕಣಆರೋಗ್ಯಧಾರ - ಆಯುರ್ವೇದ ಔಷಧ ಅಂದರೆ

ಆರೋಗ್ಯಧಾರ – ಆಯುರ್ವೇದ ಔಷಧ ಅಂದರೆ

ಆಯುರ್ವೇದ ಔಷಧ ಅಂದರೆ ಬರೀ ಗಿಡ ಮೂಲಿಕೆಗಳನ್ನು ಬಳಸುತ್ತಾರೆ ಎಂದು ತಪ್ಪು ಕಲ್ಪನೆ ಇದೆ. ಆಯುರ್ವೇದದಲ್ಲಿ ಅನೇಕ ಔಷಧಿ ಸಸ್ಯಗಳ ಬಳಕೆ ಅನೇಕ ರೋಗಗಳನ್ನು ಗುಣಪಡಿಸಲು ಬಳಸುತ್ತಾರೆ. ಇದರಿಂದ ಅನೇಕ ಲಾಭವೂ ಇದೆ. ಆಯುರ್ವೇದ ಮದ್ದುಗಳು ಅನೇಕ ಗಿಡ ಮೂಲಿಕೆಗಳನ್ನು ಬಳಸಿ ಅರಿಷ್ಠ, ಆಸವ, ಕಷಾಯ, ಮಾತ್ರೆಗಳನ್ನು ತಯಾರಿಸುತ್ತಾರೆ. ಆದರೆ ಇದು ಮಾತ್ರ ಆಯುರ್ವೇದದ ಮದ್ದುಗಳಲ್ಲ.
ಆಯುರ್ವೇದದಲ್ಲಿ ರಸೌಷದಿಗಳನ್ನು ಕೂಡ ಬಳಸುತ್ತಾರೆ. ಇದರಲ್ಲಿ ಅನೇಕ ಖನಿಜಗಳನ್ನು (ಪಾರದ, ಗಂಧಕ ಅಭ್ರಕ, ಶಿಲಾಜಿತು, ಮುಂತಾದವುಗಳು) ಬಳಸಿ ಔಷಧವನ್ನು ತಯಾರಿಸುತ್ತಾರೆ. ಇದನ್ನು ರಸೌಷಧಿ ಎಂದು ಹೆಸರು. ಇದರಲ್ಲಿ ಎರಡು ವಿಧಗಳಿವೆ. ಪಾರದ ಸಹಿತ ತಯಾರಿಸಿದ ಔಷಧಗಳು ಇನ್ನೂಂದು ಪಾರದ ರಹಿತ ಔಷಧಿಗಳು. ಖನಿಜಗಳನ್ನು ಸಂಸ್ಕರಿಸಿ (ಅಂದರೆ ವಿಷಕಾರಕ ಅಂಶಗಳನ್ನು ತೆಗೆದು ಗುಣಕಾರಿ ಅಂಶಗಳನ್ನು ಸೇರಿಸುವ ಪ್ರಕ್ರಿಯೆ) ಔಷಧವನ್ನು ತಯಾರಿಸುತ್ತಾರೆ. ಇದು ಉತ್ತಮ ಮದ್ದು ಎಂದು ಹೇಳಬಹುದು. ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿ ಇದಕ್ಕಿದೆ. ಆದರೆ ಇದರ ಉಪಯೋಗಕ್ಕೆ ಇಂತಿಷ್ಟೇ ಪ್ರಮಾಣದಲ್ಲಿ ಇಷ್ಟೇ ಸಮಯದವರೆಗೆ ಸೇವಿಸಬೇಕು. ವೈದ್ಯರ ಸಲಹೆ ಪಡೆಯದೆ ಸೇವಿಸಬಾರದು. ಇದರಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯವೆಂದರೆ ಸೇವಿಸುವ ಕಾಲ, ಅನುಪಾನ (ಯಾವುದರ ಜೊತೆ ಸೇವಿಸಬೇಕು) ಹಾಗೂ ರಸೌಷಧಿಗಳನ್ನು ಉಪಯೋಗಿಸುವಾಗ ನಮ್ಮ ಆಹಾರ ವಿಹಾರ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ಬೃಹತ್ ವಾತ ಚಿಂತಾಮಣಿ ರಸ, ತ್ರಿಭುವನ ಕೀರ್ತಿ ರಸ, ಮುಂತಾದವುಗಳು ರಸೌಷಧಿಗಳ ಉದಾಹರಣೆಗಳು.
ಇನ್ನು ಅಷ್ಟಾಂಗಗಳಲ್ಲಿ ಒಂದಾದ ಅಗದತಂತ್ರ ಅಂದರೆ ವಿಷಪದಾರ್ಥಗಳ ವಿಜ್ಞಾನ. ಇದರಲ್ಲಿ ಎರಡು ವಿಧಗಳಿವೆ. ಪ್ರಾಕೃತಿಕ ವಿಷ ಹಾಗೂ ಅಪ್ರಾಕೃತಿಕ ವಿಷ. ಪ್ರಾಕೃತಿಕ ವಿಷಯದಲ್ಲಿ ಸ್ಥಾವರ ಅಂದ್ರೆ ವಿಷಕಾರಕ ಗಿಡಗಳು ಅಥವಾ ಖನಿಜಗಳು ಹಾಗೂ ಇನ್ನೊಂದು ಜಂಗಮ ಅಂದರೆ ವಿಷಕಾರಕ ಪ್ರಾಣಿ, ಕೀಟ ಮುಂತಾದವುಗಳು ಒಳಗೊಂಡಿದೆ . ಅಪ್ರಾಕೃತಿಕ ವಿಷವನ್ನು ವಿಷಕಾರಕ ಪದಾರ್ಥಗಳನ್ನು ಬಳಸಿ ಮಾಡಲಾಗುತ್ತದೆ. ಈ ಶಾಸ್ತ್ರದಲ್ಲಿ ಯಾವಯಾವ ವಿಷದಿಂದ ನಮ್ಮ ದೇಹದ ಮೇಲೆ ಆಗುವ ಪರಿಣಾಮ ಬಗ್ಗೆ ಸವಿಸ್ತಾರವಾದ ಜ್ಞಾನ ಹಾಗೂ ಇದರ ಚಿಕಿತ್ಸೆಯ ಬಗ್ಗೆ ಸೂಚಿಸಲಾಗಿದೆ.
ಆಯುರ್ವೇದದ ಮುಖ್ಯ ಉದ್ದೇಶ ಆರೋಗ್ಯ ರಕ್ಷಣೆ ಹಾಗೂ ರೋಗಗಳ ನಿವಾರಣೆ ಇದರ ಬಗ್ಗೆ ದಿನಚರ್ಯ, ಋತುಚರ್ಯ ಇನ್ನಿತರ ಅನೇಕ ವಿಷಯಗಳು ಒಳಗೊಂಡಿವೆ. ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಅಂಶ ದೀರ್ಘ ಆಯಸ್ಸನ್ನು ಪಡೆಯುವುದು. ಆರೋಗ್ಯಕರ ದೀರ್ಘಾಯಸ್ಸು ಅನೇಕರ ಇಚ್ಛೆ. ಆಯುರ್ವೇದದಲ್ಲಿ ದೀರ್ಘಾಯುವನ್ನೂ ಪಡೆಯುವ ಗುಟ್ಟನ್ನು ತಿಳಿಸಿದೆ. ಇದೇ ಆಯುರ್ವೇದದ ಅಷ್ಟಾಂಗದಲ್ಲಿ ಒಂದಾದ ರಸಾಯನಶಾಸ್ತ್ರ. ಈ ಶಾಸ್ತ್ರದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಮ್ಮ ದೇಹಬಲ ಹಾಗೂ ಮನೋಬಲ ವೃದ್ಧಿಸುವ ಉಪಾಯಗಳನ್ನು ಒಳಗೊಂಡಿದೆ. ರಸಾಯನಶಾಸ್ತ್ರದಲ್ಲಿ ಹೇಳಿರುವಂತಹ ಬ್ರಾಹ್ಮಿ ರಸಾಯನ, ಆಮ್ಲಕಿ ರಸಾಯನ, ತ್ರಿಫಲಾ ರಸಾಯನ ಮುಂತಾದವುಗಳು ನಮ್ಮ ಆಯಸ್ಸನ್ನು ಹೆಚ್ಚಿಸುವಂತಹದ್ದು. ಇದರಲ್ಲಿ ಎಲ್ಲರಿಗೆ ತಿಳಿದಿರುವ ಚವನ್ ಪ್ರಾಶ್ ಕೂಡ ಒಂದು .ನಮ್ಮ ದಿನನಿತ್ಯದ ಆಹಾರ ವಿಹಾರ ಕೂಡ ಸರಿಯಾಗಿ ಪಾಲಿಸಿದರೆ ಅದು ಕೂಡ ರಸಾಯನ ಅಂದ್ರೆ ನಮ್ಮ ದೇಹದ ಓಜಸ್ಸನ್ನು ವೃದ್ಧಿಸುವಂಥದ್ದು. ಇದರಲ್ಲಿ ಹಾಲು, ತುಪ್ಪ, ಜೇನುತುಪ್ಪ, ಯೋಗ, ಪ್ರಾಣಾಯಾಮ ಮುಂತಾದವುಗಳು ಸೇರಿವೆ. ದೀರ್ಘಕಾಲೀನ ರೋಗಗಳಲ್ಲಿ ರಸಾಯನವನ್ನು ಅವಶ್ಯಕವಾಗಿ ಬಳಸುತ್ತಾರೆ. ಆಯುರ್ವೇದದಲ್ಲಿ ಜ್ಞಾನದ ಬಂಡಾರವೆದೆ. ಅದನ್ನು ತಿಳಿಯಬೇಕು.
ಅಷ್ಟಾಂಗ ಆಯುರ್ವೇದ ಹೀಗಿದೆ. ಕಾಯಚಿಕಿತ್ಸಾ, ಕೌಮಾರಭೃತ್ಯ, ಅಗದ ತಂತ್ರ, ಶಲ್ಯ, ಶಾಲಾಕ್ಯ, ರಸಾಯನ ಹಾಗೂ ವಾಜೀಕರಣ. ಇದೆಲ್ಲವೂ ಐದು ಸಾವಿರ ವರ್ಷಗಳ ಹಿಂದೆ ನಮ್ಮ ಋಷಿಮುನಿಗಳು ತಿಳಿಸಿದ್ದಾರೆ. ನಾವು ಇದನ್ನು ಈಗಲೂ ಕೂಡ ಬಳಸುತ್ತೇವೆ ಎಂದರೆ ಇದರ ಮಹತ್ವ ಎಷ್ಟಿರಬಹುದು ಎಂದು ನಾವು ತಿಳಿಯಬೇಕು.

ಡಾ. ಹರ್ಷಾ ಕಾಮತ್

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!