Thursday, August 5, 2021
spot_img
Homeಸ್ಥಳೀಯ ಸುದ್ದಿಡಾಮಾರು ರಸ್ತೆಗೆ ಮಣ್ಣು ಹಾಕಿ ಬೆಂಡೆಗಿಡ ನೆಟ್ಟಿರುವುದು ಕಾಂಗ್ರೆಸ್‍ನ ಮನೋವಿಕಲತೆಯ ಪ್ರತೀಕ : ಬಿಜೆಪಿ ರೈತಮೋರ್ಚಾ

ಡಾಮಾರು ರಸ್ತೆಗೆ ಮಣ್ಣು ಹಾಕಿ ಬೆಂಡೆಗಿಡ ನೆಟ್ಟಿರುವುದು ಕಾಂಗ್ರೆಸ್‍ನ ಮನೋವಿಕಲತೆಯ ಪ್ರತೀಕ : ಬಿಜೆಪಿ ರೈತಮೋರ್ಚಾ

ಕಾರ್ಕಳ : ದೇಶದಲ್ಲಿ ಒಂದು ರೀತಿಯ ರಾಜಕೀಯ ಕಸರತ್ತುಗಳು ನಡೆಯುತ್ತಿದ್ದರೆ, ಕಾರ್ಕಳ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದಿಂದ ಮುಜುಗರ ಆಗುವ ರೀತಿಯ ವರ್ತನೆಗಳಾಗುತ್ತಿವೆ. ಕಾಂಗ್ರೆಸ್‌ನ ಇಂತಹ ವರ್ತನೆಯನ್ನು ಸಾರ್ವಜನಿಕರೇ ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ಹೇಳಿಕೆಯಲ್ಲಿ ತಿಳಿಸಿದೆ.
ಕ್ಷೇತ್ರದ ಶಾಸಕರು ಪರಿಸರ ಉತ್ಸವ, ಸ್ವಚ್ಛತಾ ಆಂದೋಲನ, ನೀರಿನ ಸಂರಕ್ಷಣೆಗಾಗಿ ಕಿಂಡಿ ಅಣೆಕಟ್ಟುಗಳ ನಿರ್ಮಾಣ, ಕೃಷಿ ಉತ್ತೇಜನ ನೀಡುವ ಕಾರ್ಲ ಕಜೆ, ಕಾರ್ಲ ಬಿಳಿ ಬೆಂಡೆ, ಪರಿಸರ ಉಳಿಸುವ ಮತ್ತು ಆರೋಗ್ಯ ಕಾಪಾಡುವ ಹಲವಾರು ಕಾರ್ಯಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್‌ ಯಾವೊಂದು ಒಳ್ಳೆಯ ಕಾರ್ಯಕ್ಕೂ ಸ್ಪಂದಿಸದೇ ಮತ್ತು ಯಾವುದೇ ಜನಪರ ಕಾಳಜಿಯ ಕಾರ್ಯಕ್ರಮಗಳನ್ನು ಮಾಡದೇ ಕೇವಲ ಟೀಕೆ ಮಾಡುತ್ತಿದೆ. ಶಾಸಕರನ್ನು ಅಪಹಾಸ್ಯ ಮಾಡುವ ಮೂಲಕ ಪುಕ್ಸಟ್ಟೆ ಪ್ರಚಾರ ಪಡೆಯುತ್ತಿರುವ ಕಾರ್ಕಳ ಯುವ ಕಾಂಗ್ರೇಸ್ ಮತ್ತು ವಿಚಲಿತಗೊಂಡ ಕಾಂಗ್ರೇಸಿಗರ ನಡವಳಿಕೆ ಅವರ ಮನೋಸ್ಥಿತಿಯನ್ನು ಬಿಂಬಿಸುತ್ತದೆ ಎಂದು ರೈತ ಮೋರ್ಚಾ ಪ್ರಟಕನೆಯಲ್ಲಿ ತಿಳಿಸಿದೆ.

ನಿಮ್ಮ ಕಾರ್ಯ ತಿಳಿಸಿ
ಒಂದು ರಾಷ್ಟೀಯ ಪಕ್ಷದ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಕ್ಷೇತ್ರದ ಜನರಿಗೆ ಅದರಲ್ಲೂ ಕೊರೊನಾ ಸಂಕಷ್ಟ ಕಾಲದಲ್ಲಿ ಮಾಡಿದ ಕೆಲಸಗಳ ಬಗ್ಗೆ ಕಾಂಗ್ರೆಸ್‌ನವರು ತಿಳಿಸಲಿ. ಆ ಬಳಿಕ ಬಿಜೆಪಿ ಮತ್ತು ಶಾಸಕರ ಬಗ್ಗೆ ಕೀಳು ಮಟ್ಟದ ರಾಜಕಾರಣ ಮಾಡಲಿ. ಡಾಮಾರು ರಸ್ತೆಯ ಮಧ್ಯದಲ್ಲಿ ಹೊರಗಿನಿಂದ ಮಣ್ಣು ತಂದು ಹಾಕಿ ಬಲಿತ ಬೆಂಡೆ ಗಿಡವನ್ನು ಅದರ ಸ್ವಸ್ಥಾನದಿಂದ ಕಿತ್ತು ತಂದು ನೆಟ್ಟಿರುವುದು ಕಾಂಗ್ರೆಸ್‌ನವರ ಮನೋವಿಕಲತೆಗೆ ಸಾಕ್ಷಿ. ಇಂತಹ ಕೃತ್ಯ ಕಾರ್ಕಳ ರೈತ ಸಮುದಾಯವನ್ನು ಅವಮಾನಿಸಿದೆ. ಬಿಳಿಬೆಂಡೆ ನೆಡಲು ಕಾರ್ಕಳ ರಸ್ತೆಗಳಲ್ಲಿ ಎಲ್ಲೂ ಹೊಂಡಗಳಿಲ್ಲ ಅಷ್ಟರ ಮಟ್ಟಿಗೆ ಶಾಸಕರ ಅಭಿವೃದ್ದಿ ಕೆಲಸ ಗೋಚರಿಸುತ್ತದೆ ಎಂದು ರೈತ ಮೋರ್ಚಾ ಪ್ರಕಟನೆಯಲ್ಲಿ ತಿಳಿಸಿದೆ. ʼ

ಹುಚ್ಚಾಟ ನಡೆಸುವುದು ಸರಿಯಲ್ಲ
ಕೃಷಿ ಮಾಡಲು ಕಾಂಗ್ರೆಸ್‌ನವರಿಗೆ ಆಸಕ್ತಿಯಿದ್ದರೆ ನೂರಾರು ಎಕ್ರೆ ಹಡಿಲು ಗದ್ದೆ ಜಾಗ ಲಭ್ಯವಿದೆ. ಅಲ್ಲಿ ಕೃಷಿ ಮಾಡಿ ನಿಮ್ಮ ಸಾಧನೆ ತೋರಿಸಿ. ತಮಗಿನ್ನು ಕಾರ್ಕಳ ಕ್ಷೇತ್ರದಲ್ಲಿ ನೆಲೆಯಿಲ್ಲವೆಂದು ತಿಳಿದು ಇಂತಹ ಹುಚ್ಚಾಟ ನಡೆಸುವುದು ತರವಲ್ಲ. ಯೋಗ್ಯತೆಗೆ ತಕ್ಕುದಲ್ಲ ಎಂದು ಬಿಜೆಪಿ ರೈತ ಮೋರ್ಚಾ ತಿಳಿಸಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!