ಕಾರ್ಕಳ : ಮೀನು ಹಿಡಿಯುವ ಆಟವಾಡುತ್ತಿದ್ದ ಸಂದರ್ಭ ಬಾಲಕನೋರ್ವ ಆಕಸ್ಮಿಕವಾಗಿ ಮದಗ ಪಾಲಾದ ಘಟನೆ ಎಳ್ಳಾರೆ ಗ್ರಾಮದಲ್ಲಿ ಜೂ. 16ರಂದು ಸಂಭವಿಸಿದೆ. ಎಳ್ಳಾರೆ ಗ್ರಾಮದ ಸೋಮನಾಥ್ ಶೇರಿಗಾರ್ ಎಂಬವರ ಪುತ್ರ ಆದಿತ್ಯ (14) ನೀರುಪಾಲಾದ ಬಾಲಕ. ಬುಧವಾರ ಮಧ್ಯಾಹ್ನ ಸ್ಥಳೀಯ ಗೆಳೆಯರೊಂದಿಗೆ ಮೀನು ಹಿಡಿಯುವ ಆಟದಲ್ಲಿ ತಲ್ಲೀನನಾದ ಆದಿತ್ಯ ಆಕಸ್ಮಿಕವಾಗಿ ಮದಗ ಪಾಲಾಗಿದ್ದಾನೆ. ಜೊತೆಗಿದ್ದವರು ರಕ್ಷಣೆಗೆ ಮುಂದಾಗಿದ್ದರೂ ಬಾಲಕನನ್ನು ಜೀವ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಘಟನಾ ಸ್ಥಳಕ್ಕೆ ಅಜೆಕಾರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Recent Comments
ಕಗ್ಗದ ಸಂದೇಶ
on