Sunday, October 24, 2021
spot_img
Homeಜಿಲ್ಲಾಉಡುಪಿ ಜಿಲ್ಲೆಯಲ್ಲಿ ಪುಸ್ತಕ ಅಂಗಡಿ, ಮೊಬೈಲ್ ಅಂಗಡಿ ತೆರೆಯಲು ಬುಧವಾರ ಒಂದು ದಿನಕ್ಕೆ ಅನುಮತಿ

ಉಡುಪಿ ಜಿಲ್ಲೆಯಲ್ಲಿ ಪುಸ್ತಕ ಅಂಗಡಿ, ಮೊಬೈಲ್ ಅಂಗಡಿ ತೆರೆಯಲು ಬುಧವಾರ ಒಂದು ದಿನಕ್ಕೆ ಅನುಮತಿ

ಉಡುಪಿ : ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಉಡುಪಿ ಜಿಲ್ಲೆಯಲ್ಲಿ ಜೂ.16ರಂದು ಒಂದು ದಿನದ ಮಟ್ಟಿಗೆ ಪುಸ್ತಕದ ಅಂಗಡಿಗಳು ಮತ್ತು ಮೊಬೈಲ್ ಅಂಗಡಿಗಳನ್ನು ತೆರೆಯಲು ಜಿಲ್ಲಾಡಳಿತ ಅನುಮತಿ ನೀಡಿದೆ.

ಈ ಬಗ್ಗೆ ಜಿಲ್ಲಾಧಿಕಾರಿಯವರು ಪ್ರಕಟಣೆ ಹೊರಡಿಸಿದ್ದು, ಆನ್ ಲೈನ್ ತರಗತಿಗಳು ನಡೆಯುವ ಕಾರಣ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ನಿರ್ಧಾರ ಮಾಡಲಾಗಿದೆ. ಜೂ.16ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಬುಕ್ ಸ್ಟಾಲ್/ ಸ್ಟೇಷನರಿ ಮತ್ತು ಮೊಬೈಲ್ ಅಂಗಡಿಗಳನ್ನು ತೆರೆಯಬಹುದು ಎಂದು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಸರ್ಕಾರದ ಸೂಚನೆಯಂತೆ ಜೂ.14 ರಿಂದ ಆಹಾರ, ಹಾಲು ಮುಂತಾದ ಅಗತ್ಯ ವಸ್ತುಗಳ ಖರೀದಿ ಮತ್ತು ಮಾರಾಟ ಸಮಯವನ್ನು ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ವಿಸ್ತರಿಸಲಾಗಿದೆ.

ಜಿಲ್ಲೆಯಲ್ಲಿ ಕೆಲವೊಂದು ವಿನಾಯತಿ ಇದ್ದರೂ, ಲಾಕ್ ಡೌನ್ ಮುಂದುವರಿಯಲಿದೆ. ಈ ನಡುವೆ ಕೆಲವು ಸಂಘ ಸಂಸ್ಥೆಗಳು ಸನ್ಮಾನ ಸೇರಿದಂತೆ ಇತರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಗಮನಕ್ಕೆ ಬಂದಿದೆ. ಆದರೆ ಇವು ಚಾಲ್ತಿಯಲ್ಲಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿಲ್ಲ. ಆದ್ದರಿಂದ ಸಂಘ ಸಂಸ್ಥೆಗಳು ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಬಾರದು. ತಪ್ಪಿದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!