Thursday, August 5, 2021
spot_img
Homeಅಂಕಣಸಂಚಾರಿ ವಿಜಯ್ ವಾರದ ಹಿಂದೆ ನನ್ನೊಂದಿಗೆ ಮಾತನಾಡಿದ್ದರು

ಸಂಚಾರಿ ವಿಜಯ್ ವಾರದ ಹಿಂದೆ ನನ್ನೊಂದಿಗೆ ಮಾತನಾಡಿದ್ದರು

ರಮ್ಯಾ ಸುಧೀಂದ್ರ ಕಾರ್ಕಳ

ಸುಮಾರು ಎರಡು ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ್ದ ನನ್ನ ಹಾಡನ್ನು ಕೇಳಿದ ನಟ ವಿಜಯ್‌ ನನಗೊಂದು ಹಾರೈಕೆಯ ಸಂದೇಶ ಕಳುಹಿಸಿದ್ದರು. ನಾನು ಕೂಡ ತಕ್ಕ ಮಟ್ಟಿಗೆ ಹಾಡುತ್ತೇನೆ ಎಂದಿದ್ದರು. ಓರ್ವ ಪ್ರತಿಭಾವಂತ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟನ ಸಂದೇಶ ನೋಡಿ ಅಚ್ಚರಿಪಟ್ಟಿದ್ದೆ. ಮೊದಲೇ ಸಂಚಾರಿ ವಿಜಯ್‌ ಅಭಿಮಾನಿಯಾಗಿದ್ದ ನಾನು ಹಿರಿ ಹಿರಿ ಹಿಗ್ಗಿದೆ. ಬಳಿಕ ಏನಾದರೂ ಸಹಾಯ ಬೇಕಿದ್ದಲ್ಲಿ ಸಂಪರ್ಕಿಸಿ ಎಂದು ಮೊಬೈಲ್‌ ನಂಬರ್‌ ಕೊಟ್ಟಿದ್ದರು. ಬಳಿಕ ಹಾಡುಗಳನ್ನು ಶೇರ್‌ ಮಾಡಿಕೊಳ್ಳುತ್ತಿದ್ದೆವು. ಅಭಿಪ್ರಾಯ ಹಂಚಿಕೊಳ್ಳುತ್ತಿದ್ದೆವು. ವಾರದ ಹಿಂದೆ ಮೊಬೈಲ್‌ ಮೂಲಕ ಮಾತಾನಾಡಿದ್ದ ನಾವು ಕಿರುಚಿತ್ರದ ಕುರಿತಾಗಿ ಚರ್ಚಿಸಿದ್ದೆವು.

ಸಂಚಾರಿ ವಿಜಯ್‌ ಓರ್ವ ಅತ್ಯದ್ಭುತ ಕಲಾವಿದ. ಸ್ನೇಹ ಜೀವಿ, ಸರಳ ವ್ಯಕ್ತಿತ್ವ, ರಾಷ್ಟ್ರಪ್ರಶಸ್ತಿ ತಂದುಕೊಟ್ಟ ʼನಾನು ಅವನಲ್ಲ ಅವಳುʼ ಚಿತ್ರವನ್ನು ಸುಮಾರು 20 ಬಾರಿ ವೀಕ್ಷಿಸಿದ್ದೆ. ಪುಕ್ಸಟ್ಟೆ ಲೈಫು, ತಲೆದಂಡ, ಮೇಲೊಬ್ಬ ಮಾಯಾವಿ ಚಿತ್ರಗಳನ್ನು ಅರ್ಧಕ್ಕೆ ನಿಲ್ಲಿಸಿ ಇಹಲೋಕ ತ್ಯಜಿಸಿದ ಸ್ನೇಹಿತ ಸಂಚಾರಿ ವಿಜಯ್‌ ಗೆ ಭಾವಪೂರ್ಣ ಶ್ರದ್ಧಾಂಜಲಿ…ಮತ್ತೆ ಹುಟ್ಟಿ ಬಾ ಗೆಳೆಯ…

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!