Thursday, August 5, 2021
spot_img
Homeಸ್ಥಳೀಯ ಸುದ್ದಿಒಂದೇ ದಿನ ಇಹಲೋಕ ತ್ಯಜಿಸಿದ ಕಾರ್ಕಳದ ಅಣ್ಣ-ತಮ್ಮಂದಿರು

ಒಂದೇ ದಿನ ಇಹಲೋಕ ತ್ಯಜಿಸಿದ ಕಾರ್ಕಳದ ಅಣ್ಣ-ತಮ್ಮಂದಿರು

ಕಾರ್ಕಳ : ಕರಿಯಕಲ್ಲು ನಿವಾಸಿ ರಾಜಾರಾಮ ರಾವ್‌ (55) ಜೂ. 14ರ ಮುಂಜಾನೆ ಮೃತಪಟ್ಟಿದ್ದು, ಅವರ ಅಣ್ಣ ಸಾಣೂರು ಚಿಕ್ಕಬೆಟ್ಟು ನಿವಾಸಿ ಗಣೇಶ್‌ ರಾವ್‌ (60) ಸಂಜೆ ವೇಳೆಗೆ ಸಾವನ್ನಪ್ಪಿದ್ದಾರೆ. ಜೂ. 8ರಂದು ಜಾರ್ಕಳ ಬಳಿ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಾಜಾರಾಮ ರಾವ್‌ ಅವರು ಚಿಕಿತ್ಸೆ ಫಲಕಾರಿಯಾಗದೇ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆ, ಜಾಂಡಿಸ್‌ ಹಾಗೂ ಕೋವಿಡ್‌ ಕಾರಣಕ್ಕೆ ಅದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಣೇಶ್‌ ರಾವ್‌ ಸಂಜೆ ವೇಳೆ ಇಹ ಲೋಕ ತ್ಯಜಿಸಿದರು.

ವೃತ್ತಿಯಲ್ಲಿ ಟೈಲರಿಂಗ್‌, ಟೆಂಪೋ ಚಾಲಕರಾಗಿ ದುಡಿಯುತ್ತಿದ್ದ ರಾಜಾರಾಮ ಅವರು ಕರಿಯಕಲ್ಲು ಹಿಂದೂ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರವನ್ನೂ ನೆರವೇರಿಸುತ್ತಿದ್ದರು. ಕೊರೊನಾದಿಂದ ಮೃತಪಟ್ಟ ಸುಮಾರು 40ಕ್ಕೂ ಅಧಿಕ ಮೃತದೇಹಗಳಿಗೆ ಮುಕ್ತಿ ನೀಡಿದ ರಾಜಾರಾಮ ರಾವ್ ಕಳೆದ 2 ದಶಕಗಳಲ್ಲಿ ಸಾವಿರಕ್ಕೂ ಅಧಿಕ ಮೃತದೇಹಗಳ ಅಂತಿಮ ಸಂಸ್ಕಾರ ನೆರವೇರಿಸಿರುತ್ತಾರೆ. ಕ್ರೀಡೆ, ಭಜನೆ, ರಕ್ತದಾನ, ಸಾಮಾಜಿಕ ಕಾರ್ಯಗಳಲ್ಲೂ ರಾಜಾರಾಮ ಅವರು ಸಕ್ರಿಯರಾಗಿದ್ದರು ಎಂದು ಪುರಸಭಾ ಮಾಜಿ ಸದಸ್ಯ ಪ್ರಕಾಶ್‌ ರಾವ್‌ ತಿಳಿಸಿದರು. ನಾಸಿಕ್‌ನಲ್ಲಿ ವ್ಯವಹಾರ ನಡೆಸುತ್ತಿದ್ದ ಗಣೇಶ್‌ ರಾವ್‌ ಕೆಲ ವರ್ಷಗಳ ಹಿಂದೆ ಊರಿಗೆ ಬಂದು ಜಮೀನು ಖರೀದಿಸಿ, ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!