Thursday, August 5, 2021
spot_img
Homeಅಂಕಣಆರೋಗ್ಯಧಾರ-ಆರೋಗ್ಯವನ್ನು ವೃದ್ಧಿಸುವ ಶತಾವರಿ

ಆರೋಗ್ಯಧಾರ-ಆರೋಗ್ಯವನ್ನು ವೃದ್ಧಿಸುವ ಶತಾವರಿ

ಸೈಂಟಿಫಿಕ್ ಹೆಸರು – Asparagus Racemosus
ಶತಾವರಿ ಮಹಿಳೆಯರಿಗೆ ಮಾತ್ರವಲ್ಲದೆ ಎಲ್ಲರೂ ಉಪಯೋಗಿಸುವಂತಹ ವನಸ್ಪತಿ. ಶತಾವರಿಯನ್ನು ಶತಮೂಲಿ, ಶತಪದಿ, ವೃಷ್ಯ, ನಾರಾಯಣಿ, ಜಟ್ಟಮೂಲ ಹೀಗೆ ಅನೇಕ ಹೆಸರುಗಳು ಆಯುರ್ವೇದದಲ್ಲಿದೆ. ಇದರ ಬೇರನ್ನು ಔಷಧಕ್ಕಾಗಿ ಬಳಸಲಾಗುತ್ತದೆ. ಶತಾವರಿಯ ಉಪಯೋಗಗಳ ಬಗ್ಗೆ ತಿಳಿದುಕೊಳ್ಳೋಣ.

ಶತಾವರಿಯ ಗುಣಗಳು
ರುಚಿಯಲ್ಲಿ ಸಿಹಿ ಹಾಗೂ ಕಹಿ, ಶೀತವೀರ್ಯ, ಗುರು ಮೃದು ಹಾಗೂ ಜಿಡ್ಡು ಇದರ ಗುಣಗಳು.

ದೋಷದ ಮೇಲೆ ಪರಿಣಾಮ
ಇದು ವಾತ ಹಾಗೂ ಪಿತ್ತದೋಷವನ್ನು ಶಮನವನ್ನು ಮಾಡುತ್ತದೆ. ವಾತ ಮತ್ತು ಪಿತ್ತ ಪ್ರಕೃತಿಯವರು ಇದನ್ನು ಉಪಯೋಗಿಸಬಹುದು.

ಉಪಯೋಗಗಳು

  1. ಶತಾವರಿ ತೈಲವನ್ನು ವಾತ ಹಾಗೂ ಪಿತ್ತ ದೋಷ ಅಧಿಕವಿರುವ ವ್ಯಕ್ತಿಗಳು ಇದರ ಅಭ್ಯಂಗದಿಂದ ಲಾಭ ಪಡೆದುಕೊಳ್ಳಬಹುದು.
  2. ಜಠರಾಗ್ನಿಯನ್ನು ಉದ್ದೀಪನಗೊಳಿಸುತ್ತದೆ. ಹಸಿವನ್ನು ಹೆಚ್ಚಿಸುತ್ತದೆ, ವಾತವನ್ನು ಹೊರಗೆ ಹಾಕುತ್ತದೆ, ಯಕೃತ್ತಿಗೆ ಉಪಯುಕ್ತ, ಆ್ಯಸಿಡಿಟಿಗೆ ಒಳ್ಳೆಯ ಮದ್ದು, ಪೆಪ್ಟಿಕ್ ಅಲ್ಸರ್ ನ್ನು ದೂರ ಮಾಡುತ್ತದೆ. ಮಲಬದ್ಧತೆಯಲ್ಲಿ ಹಿತಕಾರಿ.

ಇದನ್ನು ಹೀಗೆ ಸೇವನೆ ಮಾಡಿ
ಅರ್ಧ ಚಮಚ ಶತಾವರಿ ಚೂರ್ಣವನ್ನು ಹಾಲಿನ ಜೊತೆ ದಿನಕ್ಕೆ ಎರಡು ಬಾರಿ ಸೇವನೆ ಮಾಡಬಹುದು.
ಶತಾವರಿ ಗುಳಿಗೆಗಳು ಶತಾವರಿ ಕಲ್ಪ ಲಭ್ಯವಿದೆ. ಎರಡು ಚಮಚ ಶತಾವರಿ ಕಲ್ಪವನ್ನು ಹಾಲಿನ ಜೊತೆ ದಿನಕ್ಕೆ ಎರಡು ಬಾರಿ ಸೇವಿಸಿದರೆ ಒಳ್ಳೆಯದು.

ಶತಾವರಿ ಹಾಲನ್ನು ಮಾಡುವ ವಿಧಿ
ಅರ್ಧ ಚಮಚ ಶತಾವರಿ ಚೂರ್ಣ ಅರ್ಧ ಲೋಟ ಹಾಲು ಎರಡು ಲೋಟ ನೀರನ್ನು ಹಾಕಿ ಕುದಿಸಿ. ನೀರೆಲ್ಲ ಆವಿಯಾದ ಮೇಲೆ ಸೋಸಿ ಸೇವಿಸಬಹುದು.
ಗಾಯಗಳಲ್ಲಿ ಮಲಬದ್ದತೆಗಳಲ್ಲಿ ಒಂದು ಚಮಚ ಶತಾವರಿ ಘೃತ ದಿನಕ್ಕೆ ಎರಡು ಬಾರಿ ಸೇವಿಸಬಹುದು.
ಶತಾವರಿಯು ಉತ್ತಮ ಸ್ತನ್ಯಜನನ ಅಂದರೆ ಹಾಲುಣಿಸುವ ತಾಯಂದರಿಗೆ ಹಾಲನ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಶತಾವರಿ ಚೂರ್ಣ, ಶತಾವರಿ ಕಲ್ಪ, ಶತಾವರಿ ಹಾಲು ಯಾವುದಾದರೂ ಒಂದನ್ನು ಉಪಯೋಗಿಸಬಹುದು.
ರಕ್ತ ಒತ್ತಡ ಹಾಗೂ ಹೃದಯಕ್ಕೆ ಒಳ್ಳೆಯ ಟಾನಿಕ್. ಉರಿಯೂತವನ್ನು ಕಡಿಮೆ ಮಾಡುತ್ತದೆ. ಜ್ವರದಲ್ಲಿ ಆಯಾಸವಾದಾಗ ಇದರ ಹಾಲು, ಚೂರ್ಣ ಅಥವಾ ಕಲ್ಪ ಯಾವುದಾದರೂ ಉಪಯೋಗಿಸಬಹುದು.
ಶತಾವರಿಯು ನಮ್ಮ ಮೆದುಳಿಗೆ ಒಳ್ಳೆಯದು. ನಮ್ಮ ಬುದ್ಧಿಶಕ್ತಿ ಹಾಗೂ ಜ್ಞಾಪಕ ಶಕ್ತಿಯನ್ನು ವೃದ್ಧಿಸುತ್ತದೆ. ಶುಕ್ರಧಾತುವನ್ನು ವೃದ್ಧಿಸುತ್ತದೆ. ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ.
ಮಹಿಳೆಯರಿಗೆ ಅಧಿಕ ಋತುಸ್ರಾವ, ಹೊಟ್ಟೆ ನೋವು, ಬೆನ್ನು ನೋವು, ಗರ್ಭಧಾರಣೆಗೆ ಮೆನೋಪಾಸ್ ಇದು ಉತ್ತಮವಾದ ದ್ರವ್ಯ. ಸುಸ್ತು ನಿವಾರಣೆ ಮಾಡುತ್ತದೆ. ಗರ್ಭಾಶಯಕ್ಕೆ ಬಲ ನೀಡುತ್ತದೆ ಪಿಸಿಓಡಿ ಯ ಚಿಕಿತ್ಸೆಯಲ್ಲಿ ಇದು ಉಪಯೋಗಕಾರಿ.
ಶತಾವರಿಯು ರಸಾಯನ ಅಂದರೆ ಇದು ನಮ್ಮ ದೇಹಕ್ಕೆ ಉತ್ತಮವಾದ ಟಾನಿಕ್. ಎಲ್ಲಾ ಧಾತುಗಳನ್ನು ಪೋಷಿಸುತ್ತದೆ. ಆಯುಷ್ಯವನ್ನು ವೃದ್ಧಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಚಿಕ್ಕಮಕ್ಕಳಿಗೆ ಶತಾವರಿ ಕಲ್ಪ ಹಾಲಿಗೆ ಬೆರೆಸಿ ನೀಡಿ ಇದು ರುಚಿಕರವಾಗಿರುತ್ತದೆ ಮಕ್ಕಳು ಇದನ್ನು ಆರಾಮವಾಗಿ ಸೇವಿಸುತ್ತಾರೆ.

ಯಾರು ಇದನ್ನು ಸೇವಿಸಬಾರದು
ಕಫದೋಷ ಅಧಿಕವಿರುವ, ಕಫಪ್ರಕೃತಿಯ ವ್ಯಕ್ತಿಗಳು, ಬೊಜ್ಜು ಇರುವ ವ್ಯಕ್ತಿಗಳು, ದೈಹಿಕ ಪರಿಶ್ರಮ ಕಡಿಮೆ ಮಾಡುವ ವ್ಯಕ್ತಿಗಳು ಇದನ್ನು ಸೇವಿಸಬಾರದು.

ಡಾ. ಹರ್ಷಾ ಕಾಮತ್

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!