Saturday, September 25, 2021
spot_img
Homeಸ್ಥಳೀಯ ಸುದ್ದಿಕಾರ್ಕಳ : ಮಹಿಳೆ ಕುಸಿದು ಬಿದ್ದು ಸಾವು

ಕಾರ್ಕಳ : ಮಹಿಳೆ ಕುಸಿದು ಬಿದ್ದು ಸಾವು

ಕಾರ್ಕಳ : ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೋರ್ವರು ಕುಸಿದು ಬಿದ್ದು ಮೃತಪಟ್ಟ ಘಟನೆ ಕಾರ್ಕಳ ಮೂರು ಮಾರ್ಗ ಬಳಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ. ಮಹಿಳೆಯ ಬಳಿಯಿದ್ದ ಪ್ಲಾಸ್ಟಿಕ್‌ ಕವರ್‌ನಲ್ಲಿ ಚುನಾವಣ ಗುರುತಿನ ಚೀಟಿ ದೊರೆತಿದೆ. ಅದರಲ್ಲಿ ಬಯ್ಯ, ಪಾಲಡ್ಕ, ಮಂಗಳೂರು ತಾಲೂಕು ಎಂದಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಾರ್ಕಳ ಪುರಸಭಾ ಉಪಾ‍ಧ್ಯಕ್ಷೆ ಪಲ್ಲವಿ ಪ್ರವೀಣ್‌, ಮಾಜಿ ಸದಸ್ಯ ಪ್ರಕಾಶ್‌ ರಾವ್‌, ಕೆ.ಬಿ. ಕೀರ್ತನ್‌ ಕುಮಾರ್‌, ಸಂತೋಷ್‌ ರಾವ್‌, ಸ್ವಚ್ಛ ಬ್ರಿಗೇಡ್‌ ಸದಸ್ಯರಾದ ರಾಜೇಂದ್ರ, ಪ್ರಸನ್ನ ಮತ್ತಿತರರು ಮಹಿಳೆಯ ಮೃತದೇಹವನ್ನು ಸರಕಾರಿ ಆಸ್ಪತ್ರೆಗೆ ರವಾನಿಸಿ, ಪೊಲೀಸರಿಗೆ ಮಾಹಿತಿ ನೀಡಿದರು.

1 COMMENT

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!